ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ ಚಾನೆಲ್‌ಗಳಿಗೆ "ರಾಷ್ಟ್ರೀಯ ಪ್ರಾಮುಖ್ಯತೆ" ಕಾರ್ಯಕ್ರಮಗಳು ಪ್ರಸಾರ ಕಡ್ಡಾಯ ಯಾಕೆ?

|
Google Oneindia Kannada News

ನವದೆಹಲಿ, ನವೆಂಬರ್ 10: ಭಾರತದಲ್ಲಿ ಟಿವಿ ಚಾನೆಲ್‌ಗಳ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಮಾಡುವ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದರ ಅಡಿಯಲ್ಲಿ ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯವುಳ್ಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಭಾರತದ ಮನರಂಜನಾ ಚಾನೆಲ್‌ಗಳಿಗೆ ಕಡ್ಡಾಯವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಗಸೂಚಿಗಳನ್ನು ಹೊಸದಾಗಿ ಪ್ರಕಟಿಸಿದೆ.

ಈ ಹೊಸ ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಪ್ರತಿದಿನ ಕನಿಷ್ಠ 30 ನಿಮಿಷ ಮೀಸಲಿಡಬೇಕು. ಅಂಥ ವಿಷಯವನ್ನು ರಚಿಸಲು ಚಾನಲ್‌ಗಳಿಗೆ ಎಂಟು ಥೀಮ್‌ಗಳನ್ನು ನೀಡಲಾಗಿದೆ. ಸರ್ಕಾರದ ಪ್ರಕಾರ, ಈ ಕ್ರಮದ ಹಿಂದಿನ ತಾರ್ಕಿಕ ಕಾರಣವೆಂದರೆ ಭಾರತದಲ್ಲಿ ಪ್ರಸಾರವಾಗುವ ಟಿವಿ ಚಾನೆಲ್‌ಗಳು ಸಾರ್ವಜನಿಕ ಆಸಕ್ತಿ ಮತ್ತು ಸಮಾಜದ ಹಿತದೃಷ್ಟಿಯಿಂದ ಇಂಥ ಅನೇಕ ಕಾರ್ಯಕ್ರಮಗಳನ್ನು ಮನರಂಜನಾ ಟಿವಿ ಚಾನೆಲ್‌ಗಳು ಪ್ರಸಾರ ಮಾಡುವುದು ಇನ್ನು ಕಡ್ಡಾಯವಾಗಿರುತ್ತದೆ.

 11 ವರ್ಷಗಳ ಬಳಿಕ ಭಾರತದಲ್ಲಿ ಟಿವಿ ಚಾನೆಲ್‌ಗಳಿಗೆ ಹೊಸ ಮಾರ್ಗಸೂಚಿ 11 ವರ್ಷಗಳ ಬಳಿಕ ಭಾರತದಲ್ಲಿ ಟಿವಿ ಚಾನೆಲ್‌ಗಳಿಗೆ ಹೊಸ ಮಾರ್ಗಸೂಚಿ

ಈ ಹೊಸ ಮಾರ್ಗಸೂಚಿಗಳು ನವೆಂಬರ್ 9, 2022ರಿಂದ ಜಾರಿಗೆ ಬರುತ್ತವೆ. ಕಾರ್ಯಕ್ರಮಗಳನ್ನು ಪರಿಕಲ್ಪನೆ ಮೂಲಕ ಕಾರ್ಯಕ್ರಮಗಳನ್ನು ತಯಾರಿಸಲು ಚಾನಲ್‌ಗಳಿಗೆ ಸಮಯ ನೀಡಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

"ರಾಷ್ಟ್ರೀಯ ಪ್ರಾಮುಖ್ಯತೆ" ಕಾರ್ಯಕ್ರಮ ಕಡ್ಡಾಯ

ಮಾರ್ಗಸೂಚಿ ಪ್ರಕಾರ, ಏರ್ವೇವ್ಸ್ /ಫ್ರೀಕ್ವೆನ್ಸಿಗಳು ಸಾರ್ವಜನಿಕ ಆಸ್ತಿ ಮತ್ತು ಸಮಾಜದ ಹಿತದೃಷ್ಟಿಯಿಂದ ಬಳಸಬೇಕಾದ ಅಗತ್ಯವಿದೆ. ಇಂಥ ಸಂದರ್ಭದಲ್ಲಿ ಈ ಮಾರ್ಗಸೂಚಿಗಳ ಅಡಿಯಲ್ಲಿ ಭಾರತದಲ್ಲಿ ಚಾನಲ್ ಅಪ್‌ಲಿಂಕ್ ಮಾಡಲು ಮತ್ತು ಡೌನ್‌ಲಿಂಕ್ ಮಾಡಲು ಕಂಪನಿಗೆ ಅನುಮತಿಸಲಾಗಿದೆ. ಚಾನೆಲ್‌ಗಳು ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಸಾಮಾಜಿಕ ಪ್ರಸ್ತುತತೆಯ ವಿಷಯಗಳ ಕುರಿತು ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು.

ಈ ವಿಷಯಗಳು ಶಿಕ್ಷಣ ಮತ್ತು ಸಾಕ್ಷರತೆಯನ್ನು ಹರಡುವುದು, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಳಗೊಂಡಿವೆ. ಇದಲ್ಲದೆ, ಮಹಿಳೆಯರ ಕಲ್ಯಾಣ, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಮತ್ತು ರಾಷ್ಟ್ರೀಯ ಏಕೀಕರಣಕ್ಕಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಅನಿವಾರ್ಯವಾಗಿದೆ.

 897 ಚಾನೆಲ್‌ಗಳ ಪೈಕಿ 30 ಚಾನೆಲ್‌ ಮಾತ್ರ ಅಪ್‌ಲಿಂಕ್

897 ಚಾನೆಲ್‌ಗಳ ಪೈಕಿ 30 ಚಾನೆಲ್‌ ಮಾತ್ರ ಅಪ್‌ಲಿಂಕ್

ಸ್ಯಾಟಲೈಟ್ ಟಿವಿ ಚಾನೆಲ್‌ಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬುಧವಾರ ಹೊಸ ನಿಯಮಗಳನ್ನು ಹೊರಡಿಸಿದೆ. ಟಿವಿ ಚಾನೆಲ್‌ಗಳು ಪ್ರತಿದಿನ 30 ನಿಮಿಷಗಳ ಕಾಲ 'ಸಾರ್ವಜನಿಕ ಹಿತಾಸಕ್ತಿ'ಯುಳ್ಳ ಕಾರ್ಯಕ್ರಮ ಪ್ರಸಾರ ಮಾಡಬೇಕಾಗುತ್ತದೆ. ಭಾರತವನ್ನು ಪ್ರಮುಖ ಅಪ್ಲಿಂಕಿಂಗ್ ಹಬ್ (ಹಬ್) ಎಂದು ಯೋಜಿಸುವ ಪ್ರಯತ್ನದಲ್ಲಿ ಟಿವಿ ಚಾನೆಲ್‌ಗಳ ಅನುಸರಣೆಗಾಗಿ ಮಾರ್ಗಸೂಚಿಗಳಲ್ಲಿ ಸಡಿಲಿಕೆಗಳನ್ನು ಸರ್ಕಾರ ಬುಧವಾರ ಪ್ರಕಟಿಸಿದೆ. ಮುಖ್ಯವಾಗಿ ಮನರಂಜನಾ ಚಾನೆಲ್‌ಗಳಿಗೆ ಪ್ರತಿದಿನ 30 ನಿಮಿಷಗಳ ಸಾರ್ವಜನಿಕ ಹಿತಾಸಕ್ತಿ ಪ್ರಸಾರವನ್ನು ಕಡ್ಡಾಯಗೊಳಿಸಲಾಗಿದೆ.

ಈ ಕ್ರಮವು ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದ ಟಿವಿ ಚಾನೆಲ್‌ಗಳನ್ನು ಸಿಂಗಪುರದ ಬದಲಿಗೆ ಭಾರತದಿಂದ ಅಪ್‌ಲಿಂಕ್ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ನಿರೀಕ್ಷಿಸಲಾಗಿದೆ. ಉಪಖಂಡದಲ್ಲಿ ಪ್ರಸಾರ ಮಾಡುವ ಚಾನೆಲ್‌ಗಳಿಗೆ ಸಿಂಗಪುರವು ಆದ್ಯತೆಯ ಅಪ್‌ಲಿಂಕಿಂಗ್ ಕೇಂದ್ರವಾಗಿದೆ. ಪ್ರಸ್ತುತ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ನೋಂದಾಯಿಸಲಾದ ಒಟ್ಟು 897 ಚಾನೆಲ್‌ಗಳ ಪೈಕಿ ಕೇವಲ 30 ಚಾನೆಲ್‌ಗಳು ಮಾತ್ರ ಭಾರತದಿಂದ ಅಪ್‌ಲಿಂಕ್ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ನೇರ ಪ್ರಸಾರಗಳಿಗೆ ಪೂರ್ವ ನೋಂದಣಿ ಅಗತ್ಯ

ನೇರ ಪ್ರಸಾರಗಳಿಗೆ ಪೂರ್ವ ನೋಂದಣಿ ಅಗತ್ಯ

''ಟಿವಿ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಅನುಮತಿ ಪಡೆಯುವ ಅಗತ್ಯ ಎನ್ನುವ ಕ್ರಮವನ್ನು ತೆಗೆದುಹಾಕಲಾಗಿದೆ ಹಾಗೂ ನೇರ ಪ್ರಸಾರ ಕಾರ್ಯಕ್ರಮಗಳ ಪೂರ್ವ ನೋಂದಣಿಗಾಗಿ ಅಗತ್ಯವಿರುತ್ತದೆ" ಎಂದು ಜಂಟಿ ಕಾರ್ಯದರ್ಶಿ (ಪ್ರಸಾರ ) ಸಂಜೀವ್ ಶಂಕರ್ ಬುಧವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಟ್ಯಾಂಡರ್ಡ್ ಡೆಫಿನಿಷನ್ (SD)ನಿಂದ ಹೈ ಡೆಫಿನಿಷನ್ (HD)ಗೆ ಅಥವಾ ಪ್ರತಿಯಾಗಿ ಭಾಷೆ ಅಥವಾ ಪ್ರಸರಣ ಮೋಡ್ ಬದಲಾಯಿಸಲು ಯಾವುದೇ ಪೂರ್ವ ಅನುಮತಿ ಅಗತ್ಯವಿಲ್ಲ ಎಂದು ಅವರು ಹೇಳಿದರು. ಚಾನೆಲ್ ಮಾಡಬೇಕಾದ ಬದಲಾವಣೆಗಳ ಬಗ್ಗೆ ಸಚಿವಾಲಯಕ್ಕೆ ಮಾತ್ರ ತಿಳಿಸಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಮೊದಲು 2005ರಲ್ಲಿ ನೀಡಲಾಗಿತ್ತು ಬಳಿಕ 2011ರಲ್ಲಿ ಪರಿಷ್ಕರಿಸಲಾಯಿತು. ಮಧ್ಯಂತರ ಅವಧಿಯಲ್ಲಿ ತಾಂತ್ರಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಈಗ 11 ವರ್ಷಗಳ ನಂತರ ತಿದ್ದುಪಡಿ ಮಾಡಲಾಗಿದೆ. ಕಂಪನಿಯು ಆಪ್ಟಿಕ್ ಫೈಬರ್, ಬ್ಯಾಗ್ ಬ್ಯಾಕ್, ಮೊಬೈಲ್ ಇತ್ಯಾದಿಗಳಂತಹ ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (DSNG) ಹೊರತುಪಡಿಸಿ ಸುದ್ದಿ ಸಂಗ್ರಹಣೆ ಸಾಧನಗಳನ್ನು ಬಳಸಬಹುದು ಇದಕ್ಕಾಗಿ ಯಾವುದೇ ಪ್ರತ್ಯೇಕ ಅನುಮತಿಯ ಅಗತ್ಯವಿಲ್ಲ. ಒಂದಕ್ಕಿಂತ ಹೆಚ್ಚು ಟೆಲಿಪೋರ್ಟ್ ಅಥವಾ ಉಪಗ್ರಹಗಳ ಸೌಲಭ್ಯಗಳನ್ನು ಬಳಸಿಕೊಂಡು ಚಾನಲ್ ಅನ್ನು ಅಪ್‌ಲಿಂಕ್ ಮಾಡಬಹುದು. ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ಕೇವಲ ಒಂದು ಟೆಲಿಪೋರ್ಟ್ ಅಥವಾ ಉಪಗ್ರಹದ ಮೂಲಕ ಚಾನಲ್ ಅನ್ನು ಅಪ್‌ಲಿಂಕ್ ಮಾಡಬಹುದು.

 ಅಪ್‌ಲಿಂಕ್‌ ಎಂದರೇನು ?

ಅಪ್‌ಲಿಂಕ್‌ ಎಂದರೇನು ?

ಉಪಗ್ರಹದೊಂದಿಗೆ ಸಂವಹನಕ್ಕಾಗಿ ಭೂಮಿಯಿಂದ ಉಪಗ್ರಹಕ್ಕೆ ಸಂಕೇತಗಳನ್ನು ಕಳುಹಿಸಿದಾಗ ಅವುಗಳನ್ನು ಅಪ್‌ಲಿಂಕ್‌ ಎಂದು ಕರೆಯಲಾಗುತ್ತದೆ. ಅಪ್‌ಲಿಂಕ್‌ ಎನ್ನುವುದು ಉಪಗ್ರಹದ ಸ್ವೀಕರಿಸುವ ಆಂಟೆನಾದಿಂದ ಸ್ವೀಕರಿಸಲ್ಪಟ್ಟ ಆವರ್ತನವಾಗಿದೆ. ಇವುಗಳನ್ನು ಯಾವಾಗಲೂ ಕೆಳಗಿನಿಂದ ಮೇಲಕ್ಕೆ ಕಳುಹಿಸಲಾಗುತ್ತದೆ. ಸುಲಭವಾದ ಭಾಷೆಯಲ್ಲಿ ಏನೆಂದರೆ, ಅಪ್‌ಲಿಂಕ್‌ ಮೊದಲು ಅಂತಿಮ ಬಳಕೆದಾರರಿಂದ ಉಪಗ್ರಹಕ್ಕೆ ಹೋಗುತ್ತದೆ ಮತ್ತು ನಂತರ ನೆಲದ ನಿಲ್ದಾಣಕ್ಕೆ ಬರುತ್ತದೆ.

 ಡೌನ್‌ಲಿಂಕ್ ಎಂದರೇನು?

ಡೌನ್‌ಲಿಂಕ್ ಎಂದರೇನು?

ಡೌನ್‌ಲಿಂಕ್ ಎನ್ನುವುದು ಉಪಗ್ರಹದಿಂದ ಒಂದು ಅಥವಾ ಹೆಚ್ಚಿನ ಗ್ರೌಂಡ್ ಸ್ಟೇಷನ್‌ಗಳು ಅಥವಾ ರಿಸೀವರ್‌ಗಳಿಗೆ ಬರುವ ಮಾಹಿತಿಯುಳ್ಳ ಲಿಂಕ್ ಆಗಿದೆ,
ಒಟ್ಟಾರೆ ಡೌನ್‌ಲಿಂಕ್‌ಗಳು ಉಪಗ್ರಹದಿಂದ ಬರುವ ಮಾಹಿತಿ ಪಡೆಯುವ ಭೂಮಿಯ ನಿಲ್ದಾಣದಲ್ಲಿ ಸಂಗ್ರಹಿತ ಸಂಕೇತಗಳಾಗಿವೆ ಮತ್ತು ನಂತರ ಅದನ್ನು ಅಂತಿಮ ಬಳಕೆದಾರರಿಗೆ ಕಳುಹಿಸಲಾಗುತ್ತದೆ.

English summary
The move is expected to allow channels from Bhutan, Bangladesh, Sri Lanka, Nepal to uplink from India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X