ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ನೌಗಮ್(ಜಮ್ಮು-ಕಾಶ್ಮೀರ), ಜುಲೈ 10: ಜಮ್ಮು ಕಾಶ್ಮೀರದ ನೌಗಾಮ್ ಪ್ರಾಂತ್ಯದಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರನ್ನು ಬಲಿತೆಗೆದುಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಈ ಭಾಗದಲ್ಲಿ ಎಲ ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡ ಸೇನೆ ಮೊದಲೇ ಎಚ್ಚರ ವಹಿಸಿತ್ತು.
ಜುಲೈ 9, ಭಾನುವಾರದಂದು ಪಾಕಿಸ್ತಾನಿ ಸೇನೆ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿತ್ತು. ಇಂದು ಬೆಳಗ್ಗೆ ಇಲ್ಲಿನ ಕುಪ್ವಾರ ಜಿಲ್ಲೆಯ ಹಂದ್ವಾರ ಪ್ರದೇಶದ ನೌಗಾಮ್ ಪ್ರದೇಶದಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಲು ಮುಂದಾದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ ಭಯೋತ್ಪಾದಕರಿಗೆ ಸೂಕ್ತ ಪ್ರತ್ಯುತ್ತರ ನೀಡಿದೆ.

ಸೇನೆಯ ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು, ಮತ್ತಷ್ಟು ಭಯೋತ್ಪಾದಕರು ಸೇನೆಯ ಬಲೆಗೆ ಬೀಳುವ ನಿರೀಕ್ಷೆಯಿದೆ. ಶನಿವಾರ(ಜುಲೈ 8) ಕಾಶ್ಮೀರದ ಪೂಂಚ್ ಪ್ರಾಂತ್ಯದಲ್ಲಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂದಿನ ದಾಳಿಯಲ್ಲಿ ಒಂದೇ ಕುಟುಂಬದ ಇಬ್ಬರು ನಾಗರಿಕರು ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications