ಉಗ್ರಗಾಮಿಗಳ ದಾಳಿಗೆ 3 ಯೋಧರು ಹುತಾತ್ಮ, ಮನೆಯಲ್ಲಿದ್ದ ಮಹಿಳೆ ಸಾವು

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಕತ್ತಲಲ್ಲಿ ದಾಳಿ ನಡೆಸಿದ ಉಗ್ರರು, ತಪ್ಪಿಸಿಕೊಂಡಿದ್ದಾರೆ. ಇದೇ ವೇಳೆ ಮನೆಯಲ್ಲಿದ್ದ ಮಹಿಳೆಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ

ಶ್ರೀನಗರ, ಫೆಬ್ರವರಿ 23: ಉಗ್ರಗಾಮಿಗಳ ದಾಳಿಯಲ್ಲಿ ಗುರುವಾರ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮೂವರು ಯೋಧರು ಹುತಾತ್ಮರಾಗಿ, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಮಹಿಳೆಯೊಬ್ಬರು ಸಹ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆ ಮುಗಿಸಿ ಶೋಪಿಯಾನ್ ನ ಮಾತ್ರಿಗಾಮ್ ಬಳಿ ಸೈನಿಕರು ವಾಪಸಾಗುತ್ತಿದ್ದ ವೇಳೆ ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ. ಇದಕ್ಕೆ ಸೈನ್ಯ ತಕ್ಕ ಪ್ರತ್ಯುತ್ತರ ನೀಡಿದ್ದು, ಕತ್ತಲಲ್ಲಿ ಉಗ್ರರು ತಪ್ಪಿಸಿಕೊಂಡಿದ್ದಾರೆ.[50 ದಿನಕ್ಕೆ ಕಾಶ್ಮೀರದಲ್ಲಿ 26 ಸೈನಿಕರು ಹುತಾತ್ಮ, 22 ಉಗ್ರರ ಹತ್ಯೆ]

3 Soldiers Dead In Terror Attack In Jammu and Kashmir's Shopian

ಸ್ಥಳದಲ್ಲೇ ಒಂದು ಗುಂಪಿನ ಸೈನಿಕರು ಹುತಾತ್ಮರಾಗಿದ್ದಾರೆ. ಒಬ್ಬ ಅಧಿಕಾರಿಯೂ ಸೇರಿದಂತೆ ಕೆಲವು ಸೈನಿಕರು ಗಾಯಗೊಂಡಿದ್ದು, ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮನೆಯೊಳಗಿದ್ದ ಜನಾ ಬೇಗನ್ ಎಂಬ ಹಿರಿಯ ಮಹಿಳೆಗೆ ಗುಂಡು ತಗುಲಿ, ಆಕೆ ಮೃತಪಟ್ಟಿದ್ದಾರೆ.[ಭಾರತದಲ್ಲಿದ್ದು ಪಾಕಿಸ್ತಾನಕ್ಕೆ ಬೆಂಬಲ ನೀಡುವ ದ್ರೋಹಿಗಳಿಗೆ ಏನನ್ನಬೇಕು?]

ಕಳೆದ ಮೂರು ವಾರದಲ್ಲಿ ನಡೆಯುತ್ತಿರುವ ನಾಲ್ಕನೇ ಪ್ರಮುಖ ಉಗ್ರ ದಾಳಿ ಇದು. ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಆರು ಸೈನಿಕರೂ ಸೇರಿ ಮೇಜರ್ ವೊಬ್ಬರು ಹುತಾತ್ಮರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+