ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಭಕ್ಕೆ ಹಾರಿದ 104 ಉಪಗ್ರಹಗಳ ಕಾರ್ಯ ಯೋಜನೆಯೇನು?

ಬುಧವಾರ ಬಾಹ್ಯಾಕಾಶಕ್ಕೆ ಕಳುಹಿಸಲಾದ 104 ಉಪಗ್ರಹಗಳಲ್ಲಿ ಕೇವಲ 3 ಮಾತ್ರ ಭಾರತದ ಸೇವೆಗಾಗಿ ರೂಪಿತಗೊಂಡಂಥವು. ಮುಖ್ಯವಾಗಿ, ಭೂ ನಕ್ಷೆ ಸಿದ್ಧಪಡಿಸಲು, ಜಲ ಸಂಪನ್ಮೂಲ ಹಂಚಿಕೆ ಅಧ್ಯಯನಕ್ಕಾಗಿ ಇವನ್ನು ಬಳಸಲಾಗುತ್ತದೆ.

|
Google Oneindia Kannada News

ಶ್ರೀಹರಿಕೋಟಾ, ಫೆಬ್ರವರಿ 15: ಇಲ್ಲಿನ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬುಧವಾರ ಉಡಾವಣೆಗೊಂಡ 104 ಉಪಗ್ರಹಗಳಲ್ಲಿ ಮೂರು ಮಾತ್ರ ಭಾರತಕ್ಕೆ ಸೇರಿದವು.

104 ಉಪಗ್ರಹಗಳಲ್ಲಿ ಒಂದು ಪ್ರಮುಖವಾದ ದೊಡ್ಡ ಗಾತ್ರದ ಉಪಗ್ರಹವಾಗಿದ್ದು ಇನ್ನುಳಿದವೆಲ್ಲಾ ನ್ಯಾನೋ ಉಪಗ್ರಹಗಳು. ದೊಡ್ಡ ಉಪಗ್ರಹ ಹಾಗೂ ಎರಡು ನ್ಯಾನೋ ಉಪಗ್ರಹಗಳು ಮಾತ್ರ ಭಾರತದ ಸೇವೆಗೆ ನಿಯೋಜಿತವಾಗಿವೆ.

ಇನ್ನುಳಿದ 101 ಉಪಗ್ರಹಗಳಲ್ಲಿ 95 ಉಪಗ್ರಹಗಳು ಅಮೆರಿಕಾಕ್ಕೆ ಸೇರಿದವು. ಇನ್ನುಳಿದವು, ಇಸ್ರೇಲ್, ಕಜಕಿಸ್ತಾನ, ಹಾಲೆಂಡ್, ಸ್ವಿಜರ್ಲೆಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಗಳಿಗೆ ಸೇರಿದವಾಗಿವೆ. ಈ ಎಲ್ಲಾ ಉಪಗ್ರಹಗಳಲ್ಲಿ 80 ವಾಣಿಜ್ಯ ಉದ್ದೇಶಗಳಿಗೆ ಸೇರಿದವು ಎಂದು ಹೇಳಲಾಗಿದೆ.[ಇಸ್ರೋ ಅಧ್ಯಕ್ಷ ಕನ್ನಡಿಗ ಕಿರಣ್ ಕುಮಾರ್ ವ್ಯಕ್ತಿಚಿತ್ರ]

ಹಾಗಾದರೆ, ಬುಧವಾರ ನಭಕ್ಕೆ ಪ್ರಯಾಣ ಬೆಳೆಸಿದ 104 ಉಪಗ್ರಹಗಳಲ್ಲಿರುವ 3 ಭಾರತೀಯ ಉಪಗ್ರಹಗಳ ಕಾರ್ಯ ಯೋಜನೆಯೇನು? ಎಂಬುದರ ಮಾಹಿತಿ ಇಲ್ಲಿದೆ.(ಚಿತ್ರಕೃಪೆ: ಇಸ್ರೋ)

ಕಾರ್ಟೋಸ್ಯಾಟ್ ಮಾದರಿಯದ್ದು

ಕಾರ್ಟೋಸ್ಯಾಟ್ ಮಾದರಿಯದ್ದು

ಭಾರತವು ಈ ಬಾರಿ ಕಳುಹಿಸಿರುವ ಮೂರೂ ಉಪಗ್ರಹಗಳು ಕಾರ್ಟೋಸ್ಯಾಟ್ -2ನೇ ಶ್ರೇಣಿಯ ಉಪಗ್ರಹಗಳು. ಇವನ್ನು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಕ್ಕಾಗಿ ಬಳಸಲಾಗುತ್ತದೆ. ಇದೇ ಶ್ರೇಣಿಯಲ್ಲಿ ಈ ಹಿಂದೆ ಇಸ್ರೋ ನಾಲ್ಕು ಉಪಗ್ರಹಗಳನ್ನು ಕಳುಹಿಸಿದೆ. ಇದೀಗ ಮತ್ತೆ ಮೂರು ಉಪಗ್ರಹಗಳನ್ನು ಕಳುಹಿಸಲಾಗುತ್ತಿದೆ. ಇವುಗಳಲ್ಲಿ ದೊಡ್ಡದಾದ ಪ್ರಮುಖ ಉಪಗ್ರಹ ಮತ್ತೆರಡು ನ್ಯಾನೋ ಉಪಗ್ರಹಗಳನ್ನು ಐಎನ್ಎಸ್ 1ಎ ಹಾಗೂ ಐಎನ್ಎಸ್ 1ಬಿ ಎಂದು ಹೆಸರಿಸಲಾಗಿದೆ.

ಅಂತರಿಕ್ಷದಿಂದ ಛಾಯಾಗ್ರಹಣ

ಅಂತರಿಕ್ಷದಿಂದ ಛಾಯಾಗ್ರಹಣ

ಬುಧವಾರ ಕಳುಹಿಸಲಾಗಿರುವ ಮೂರು ಉಪಗ್ರಹಗಳಲ್ಲಿ ಪ್ಯಾಂಕ್ರೋಮ್ಯಾಟಿಕ್ ಹಾಗೂ ಮಲ್ಟಿ ಸ್ಪೆಕ್ಟರಲ್ ಎಂಬ ಎರಡು ಮಾದರಿಯ ಕ್ಯಾಮೆರಾಗಳನ್ನು ಉಪಯೋಗಿಸಲಾಗಿದೆ.

ಉತ್ಕೃಷ್ಟ ಗುಣಮಟ್ಟದ ಫೋಟೋ ಸಾಧ್ಯ

ಉತ್ಕೃಷ್ಟ ಗುಣಮಟ್ಟದ ಫೋಟೋ ಸಾಧ್ಯ

ಕ್ಯಾಮೆರಾಗಳು, ಬಾಹ್ಯಾಕಾಶದಲ್ಲಿ ಸೂರ್ಯ, ಗ್ರಹ, ತಾರೆಗಳ ಸಂಚಲನದಿಂದ ಉಂಟಾಗುವ ಬೆಳಕಿನ ಏರುಪೇರುಗಳಿಗೆ ಸ್ವಯಂಚಾಲಿತವಾಗಿ ಹೊಂದಿಕೊಳ್ಳುವಂಥ ಲೈಟ್ ಸೆನ್ಸರ್ ಗಳನ್ನು ಹೊಂದಿವೆ. ಇದರಿಂದ ಉತ್ತಮ ಚಿತ್ರಗಳನ್ನು ಪಡೆಯಲು ಸಾಧ್ಯವಾಗಲಿದೆ.

ಜಿಪಿಎಸ್ ಗೂ ಅನುಕೂಲ

ಜಿಪಿಎಸ್ ಗೂ ಅನುಕೂಲ

ಹೊಸದಾಗಿ ಉಡಾವಣೆಗೊಂಡಿರುವ ಭಾರತದ ಉಪಗ್ರಹಗಳು ಮುಖ್ಯವಾಗಿ, ಕಾರ್ಟೋಗ್ರಾಫಿಕ್ ತಂತ್ರಜ್ಞಾನಕ್ಕೆ ನೆರವಾಗುತ್ತವೆ. ಕಾರ್ಟೋಗ್ರಾಫಿಕ್ ಎಂದರೆ ಭೂಪಟ ರಚನೆಗೆ ಸಹಾಯವಾಗುವ ತಂತ್ರಜ್ಞಾನ. ಇದರಿಂದ ಜಿಪಿಎಸ್ ತಂತ್ರಜ್ಞಾನ ಅಭಿವೃದ್ಧಿಗೂ ನೆರವು ಸಿಗಲಿದೆ.

ಅಕ್ರಮ ಗಣಿಗಾರಿಕೆಯಂಥ ಪ್ರಕರಣ ಪತ್ತೆ ಸಾಧ್ಯ

ಅಕ್ರಮ ಗಣಿಗಾರಿಕೆಯಂಥ ಪ್ರಕರಣ ಪತ್ತೆ ಸಾಧ್ಯ

ಕಾರ್ಟೋಗ್ರಾಫಿಕ್ ಮಾತ್ರವಲ್ಲದೆ, ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಧ್ಯಯನ, ಕರಾವಳಿ ಪ್ರದೇಶಗಳ ಭೂಭಾಗದ ಉಪಯೋಗ ಹಾಗೂ ನಿಯಂತ್ರಣ, ದೇಶದ ವಿವಿಧ ಭೂಭಾಗಗಳ ರಸ್ತೆ ಸಂಪರ್ಕ ಸೌಲಭ್ಯಗಳ ಅಧ್ಯಯನ, ವಿವಿಧ ಜಲ ಸಂಪನ್ಮೂಲಗಳ ಹಂಚಿಕೆ, ಯಾವುದೇ ಭೂಭಾಗಗಳ ಮೇಲ್ಮೈ ಮೇಲೆ ಮಾನವ ನಿರ್ಮಿತ ಯಂತ್ರ ಅಥವಾ ವಸ್ತುಗಳಿಂದ ಅಥವಾ ಯಾವುದೇ ನೈಸರ್ಗಿಕ ವಿಕೋಪಗಳಿಂದ ಆಗುವ ವ್ಯತ್ಯಾಸಗಳನ್ನು ಪತ್ತೆ ಮಾಡುವಲ್ಲಿ ಈ ಉಪಗ್ರಹಗಳು ನೆರವಾಗಲಿವೆ.

English summary
Among 104 satellites those are launched by ISRO on Wednesday, only 3 satellites belong to India. These satellites are useful for cartographic applications, distributions of Water resources ect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X