ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ಹವಾ: ತಿಳಿಯಬೇಕಾದ 8 ಸಂಗತಿ

Posted By:
Subscribe to Oneindia Kannada

ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆಗೆ ಇದೇ ತಿಂಗಳು ಚುನಾವಣೆ ನಡೆಯಲಿರುವುದರಿಂದ ಈಗಾಗಲೇ ಈ ಭಾಗದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಘಟಾನುಘಟಿ ನಾಯಕರು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ತ್ರಿಪುರದಲ್ಲಿ ಫೆ.18 ಮತ್ತು ಮೇಘಾಲಯ, ನಾಗಾಲ್ಯಾಂಡ್ ಗಳಲ್ಲಿ ಫೆ.27 ರಂದು ಮತದಾನ ನಡೆಯಲಿದ್ದು, ಮತಎಣಿಕೆ ಮಾರ್ಚ್ 3 ರಂದು ನಡೆಯಲಿದೆ.

ಎಲ್ಲಾ ಪಕ್ಷಗಳಿಗೂ ಈಶಾನ್ಯ ರಾಜ್ಯಗಳಲ್ಲೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದು ಅಗತ್ಯವಾಗಿರುವುದರಿಂದ ಈ ಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಈಶಾನ್ಯ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ: ಫೆ.18, 27 ಕ್ಕೆ ಮತದಾನ

ಕಳೆದ ವರ್ಷ ನಡೆದ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ(31(60)) ಇಲ್ಲಿನ ಪ್ರಾದೇಶಿಕ ಪಕ್ಷವಾದ ನ್ಯಾಶನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ) ಜೊತೆ ಸೇರಿ ಸರ್ಕಾರ ರಚಿಸಿತ್ತು. ಮೇಘಾಲಯದಲ್ಲೂ ಎನ್ ಪಿಪಿ ಉತ್ತಮ ಬಲ ಹೊಂದಿದೆಯಾದರೂ ಬಿಜೆಪಿಗೆ ಎನ್ ಪಿಪಿ ಜೊತೆ ಸೇರಿ ಚುಚಾನಣೆ ಎದುರಿಸುವುದಕ್ಕೆ ಮನಸ್ಸಿಲ್ಲ ಎಂಬ ಮಾತೂ ಕೇಳಿಬರುತ್ತಿರುವುದರಿಂದ ಚುನಾವಣೆ ಮತ್ತಷ್ಟು ಕುತೂಹಲ ಕೆರಳಿಸಿದೆ.

ನಕ್ಸಲ್ ಸಮಸ್ಯೆ, ಬಾಂಗ್ಲಾದ ಅಕ್ರಮ ನುಸುಳುಕೋರರ ಸಮಸ್ಯೆಗಳಂಥ ಬಹುದೊಡ್ಡ ಸಮಸ್ಯೆ ಎದುರಿಸುತ್ತಿರುವ ಈಶಾನ್ಯ ರಾಜ್ಯಗಳ ಚುನಾವಣೆಗೂ ಮುನ್ನ ತಿಳಿಯಬೇಕಾದ 8 ಬಹುಮುಖ್ಯ ಸಂಗತಿ ಇಲ್ಲಿದೆ.

ತಲಾ 60 ಕ್ಷೇತ್ರಗಳು

ತಲಾ 60 ಕ್ಷೇತ್ರಗಳು

ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಗಳ ಪ್ರಸ್ತುತ ವಿಧಾನಸಭೆಯ ಕಾಲಾವಧಿ ಕ್ರಮವಾಗಿ ಮಾರ್ಚ್ 6, 13 ಮತ್ತು 14 ರಂದು ಅಂತ್ಯಗೊಳ್ಳಲಿದೆ. ಪ್ರತಿ ವಿಧಾಸಭೆಯಲ್ಲೂ ತಲಾ 60 ಕ್ಷೇತ್ರಗಳಿವೆ.

ಇವಿಎಂ ಗಳೂ ರೆಡಿ!

ಇವಿಎಂ ಗಳೂ ರೆಡಿ!

ಮೂರು ರಾಜ್ಯಗಳ ಚುನಾವಣೆಯಲ್ಲಿ ಇವಿಎಂ(Electronic voting machines) ಮತ್ತು ವಿವಿಪಿಎಟಿ (Voter Verifiable Paper Audit Trail) ಯಂತ್ರಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಇವಿಎಂ ಗಳಲ್ಲಿ ದೋಷವಿದೆ ಎಂದು ಪದೇ ಪದೇ ಗುಲ್ಲೇಳುತ್ತಿರುವುದರಿಂದ ಮತದೃಢೀಕರಿಸುವ ವಿವಿಪಿಎಟಿ ಯಂತ್ರವೂ ಸಿದ್ಧವಾಗಿದೆ. ಚುನಾವಣಾ ನೀತಿ ಸಂಹಿತೆ, ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದಲೇ ಅಂದರೆ ಜ.18 ರಿಂದಲೇ ಜಾರಿಯಲ್ಲಿದೆ.

ಮೇಘಾಲಯದಲ್ಲಿ ಮೊದಲಬಾರಿಗೆ ವಿವಿಪಿಎಟಿ!

ಮೇಘಾಲಯದಲ್ಲಿ ಮೊದಲಬಾರಿಗೆ ವಿವಿಪಿಎಟಿ!

ಮೇಘಾಲಯ ರಾಜ್ಯ ಸೃಷ್ಟಿಯಾದಾಗಿನಿಂದ ಅಂದರೆ 1970 ರಿಂದಲೂ ಇಲ್ಲಿ ನಡೆವ ಎಲ್ಲಾ ಚುನಾವಣೆಯಲ್ಲೂ ಬ್ಯಾಲೆಟ್ ಪೇಪರ್ ಅನ್ನೇ ಬಳಸಲಾಗುತ್ತಿತ್ತು. ಈಗಿನವರೆಗೂ. ಆದರೆ ಈ ಬಾರಿ ಮೊದಲ ಬಾರಿಗೆ ವಿವಿಪಿಎಟಿ ಯಂತ್ರ ಬಳಸಲಾಗುತ್ತಿರುವುದು ವಿಶೇಷ.

ಅಹಿತರಕರ ಘಟನೆ ನಡೆಯದಂತೆ ಕ್ರಮ

ಅಹಿತರಕರ ಘಟನೆ ನಡೆಯದಂತೆ ಕ್ರಮ

ಚುನಾವಣೆಯ ಸಮಯದಲ್ಲಿ ಅತವಾ ಅದಕ್ಕೂ ಮುನ್ನ ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣಾ ಆಯೋಗ ಈಗಿನಿಂದಲೇ ಸೂಕ್ತ ಕ್ರಮ ಕೈಗೊಂಡಿದೆ. ಮೊದಲೇ ನಕ್ಸಲ್ ಪೀಡಿತ ಪ್ರದೇಶಗಳಾಗಿರುವರಿಂದ ಹೆಚ್ಚಿ ಭದ್ರತೆಯ ಅಗತ್ಯ ಇಲ್ಲಿದೆ. ಭಾರತದ ಅತ್ಯಂತ ಹಳೆಯ ಅರೆ ಮಿಲಿಟರಿ ಪಡೆಯಾದ ಅಸ್ಸಾಂ ರೈಫೆಲ್ಸ್ ಅನ್ನು 1643 ಕಿ.ಮೀ. ದೂರದ ಭಾರತ-ಮಯನ್ಮಾರ್ ಗಡಿ ಪ್ರದೇಶದ ನಾಗಾಲ್ಯಾಂಡ್ ನಲ್ಲಿ ನೇಮಿಸಲಾಗಿದೆ.

ಮಹಿಳೆಯರಿಗೆ ಪ್ರತ್ಯೇಕ ಭೂತ್!

ಮಹಿಳೆಯರಿಗೆ ಪ್ರತ್ಯೇಕ ಭೂತ್!

ಈಶಾನ್ಯ ರಾಜ್ಯಗಳಲ್ಲಿ ಮಹಿಳೆಯರ ಮತದಾನದ ಪ್ರಮಾಣ ಕಡಿಮೆ ಇರುವುದರಿಂದ ಅದನ್ನು ಹೆಚ್ಚಿಸುವುದಕ್ಕಾಗಿ ಮೇಘಾಲಯದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಭೂತ್ ರಚಿಸಲಾಗಿದೆ. ಪಿಂಕ್ ಭೂತ್ ಎಂಬ ಹೆಸರಿನ ಈ ಭೂತ್ ಗಳಲ್ಲಿ ಮಹಿಳೆಯರಿಗಷ್ಟೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮೇಘಾಲಯದಲ್ಲಿ 86 ಸಾವಿರ ಹೊಸ ಮತದಾರರು!

ಮೇಘಾಲಯದಲ್ಲಿ 86 ಸಾವಿರ ಹೊಸ ಮತದಾರರು!

ಮೇಘಾಲಯದಲ್ಲಿ 18 ರಿಂದ 19 ವರ್ಷದೊಳಗಿನ 86,890 ಮತದಾರರು ಈ ಬಾರಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವುದು ವಿಶೇಷ. ಅಷ್ಟೇ ಅಲ್ಲ, ಮತದಾನಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ, ಜ.1 2000 ದಂದು ಹುಟ್ಟಿದ 133 ಹೊಸ ಮತದಾರರಿಗೆ 'ಶತಮಾನದ ಮತದಾರರು' ಎಂದು ಕರೆಯಲು ಚುನಾವಣಾ ಆಯೋಗ ತೀರ್ಮಾನಿಸಿದೆ.

ಸಿಸಿಟಿವಿ ಹದ್ದಿನಕಣ್ಣು

ಸಿಸಿಟಿವಿ ಹದ್ದಿನಕಣ್ಣು

ಯಾವುದೇ ಮತಕೇಂದ್ರಗಳಲ್ಲಿ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಎಲ್ಲೆಡೆಯೂ ಚುನಾವಣಾ ಆಯೋಗ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸುತ್ತಿದೆ. ಚುನಾವಣಾ ಆಯೋಗ ಇದನ್ನು ಲೈವ್ ಮೊನಿಟಾರ್ ಮಾಡುತ್ತಿರುತ್ತದೆ.

ಪ್ರಸ್ತುತ ಸರ್ಕಾರ ಯಾವುದು?

ಪ್ರಸ್ತುತ ಸರ್ಕಾರ ಯಾವುದು?

ತ್ರಿಪುರದಲ್ಲಿ ಸದ್ಯ ಅಧಿಕಾರದಲ್ಲಿರುವುದು ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳ ಸರ್ಕಾರ(60 ರಲ್ಲಿ 57 ಸ್ಥಾನ). 1993 ರಿಂದಲೂ ತ್ರಿಪುರದಲ್ಲಿ ಎಡಪಕ್ಷವೇ ತನ್ನ ಪಾರುಪತ್ಯಮೆರೆದಿದೆ. ಸತತ ಮೂರು ಬಾರಿ ತ್ರಿಪುರ ದ ಮುಖ್ಯಮಂತ್ರಿಯಾಗಿರುವ ಮಣಿಕ್ ಸರ್ಕಾರ್ ಭಾರತದ ಅತ್ಯಂತ ಬಡ ಮುಖ್ಯಮಂತ್ರಿಯಾಗಿದ್ದಾರೆ!
ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳು ಏಕಸಭಾ ಶಾಸನ ಸಭೆಯನ್ನು ಹೊಂದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
3 Northeastern states, Meghalaya, Nagaland and Tripura will face assembly elections this year. Elections will be held in Tripura on Feb 18 and Feb 27th in Meghalaya and Nagaland. Counting will be on March 3rd. Here are few things to know all about 3 northeastern states.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ