ಅಶ್ಲೀಲ ಚಿತ್ರ ವೀಕ್ಷಿಸಲು ನಿರಾಕರಿಸಿದ್ದಕ್ಕೆ ಬಾಲಕಿಯನ್ನು ಕೊಂದ ಬಾಲಕರು!
ಗುವಾಹಟಿ, ಅಕ್ಟೋಬರ್ 21: ''ಇಂದಿನ ಮಕ್ಕಳು ಮುಂದಿನ ಪ್ರಜೆಗಳು'' ಎಂಬ ಮಾತಿದೆ. ನಾಡಿನ ಉತ್ತಮ ಪ್ರಜೆಗಳನ್ನಾಗಿ ಮಕ್ಕಳನ್ನು ಬೆಳೆಸುವಲ್ಲಿ ತಂದೆ-ತಾಯಿ ಪಾತ್ರ ಬಹುಮುಖ್ಯವಾಗಿರುತ್ತದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಬೇಲಿನೇ ಎದ್ದು ಹೊಲ ಮೇಯಿದಂತಾಗಿದೆ. ನಾಗಾಂವ್ ಎಂಬಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಪೋಷಕರ ಗಮನಕ್ಕೆ ಬಂದೆ ಮಕ್ಕಳು ಅಶೀಲ ಚಿತ್ರಗಳನ್ನು ವೀಕ್ಷಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಈ ಬೆಳವಣಿಗೆ ಮಕ್ಕಳನ್ನು ಕೊಲೆ ಮಾಡುವ ಹಂತಕ್ಕೆ ತಂದು ನಿಲ್ಲಿಸಿದೆ.
ಅಶ್ಲೀಲ ಚಿತ್ರ ವೀಕ್ಷಿಸಲು ನಿರಾಕರಿಸಿದ ಆರೋಪದ ಮೇಲೆ ಏಳು ವರ್ಷದ ಅಪ್ರಾಪ್ತ ಬಾಲಕಿಯನ್ನು ಮೂರು ಬಾಲಕರು ಕೊಂದಿದ್ದಾರೆ. ಮೂರು ಬಾಲಾಪರಾಧಿಗಳನ್ನು ನಾಗಾಂವ್ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅಪರಾಧಕ್ಕೆ ಸಂಬಂಧಿಸಿದಂತೆ ಒಬ್ಬ ವಯಸ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಬಾಲಕರು ಕೆಲ ವಿಷಯಗಳನ್ನು ಬಾಯಿಬಿಟ್ಟಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಬಾಲಕರು 8 ರಿಂದ 11 ವರ್ಷದ ನಡುವಿನ ವಯಸ್ಸಿನವರು ಎಂದು ತಿಳಿದು ಬಂದಿದೆ. ಮಾತ್ರವಲ್ಲದೆ ಇವರು ಅಶ್ಲೀಲ ವ್ಯಸನಿಗಳು ಎನ್ನುವುದು ಗೊತ್ತಾಗಿದೆ. ಇದಲ್ಲದೆ ಈ ಅಪ್ರಾಪ್ತ ವಯಸ್ಕರು ಭಯಾನಕ ಕೃತ್ಯವನ್ನು ಮಾಡುವ ಮತ್ತು ಮಾಡುವ ಸಾಮರ್ಥ್ಯ ಹೊಂದಿದ್ದರು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಅಪ್ರಾಪ್ತ ವಯಸ್ಕರು ಕೆಲ ತಿಂಗಳುಗಳಿಂದ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದರು. ಮಾತ್ರವದಲ್ಲ ಅದಕ್ಕೆ ವ್ಯಸನಿಯಾಗಿದ್ದರು. ಜೊತೆಗೆ ಇವರು ಮೃತ ಅಪ್ರಾಪ್ತ ವಯಸ್ಸಿನ ಬಾಲಕಿಯ ಮನೆಯ ಹತ್ತಿರ ವಾಸಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ ಬಾಲಕನೋರ್ವನ ಪೋಷಕರಿಗೆ ಗೊತ್ತಿದ್ದಂತೆ ಬಾಲಕ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದನು. ಹೀಗಾಗಿ ಬಂಧಿತ ಬಾಲಕನೊಬ್ಬನ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲದೇ ಬಾಲಕನ ಪೋಷಕರು ಅಪರಾಧದ ಬಗ್ಗೆ ತಿಳಿದಿದ್ದರೂ ಪೊಲೀಸರಿಗೆ ಸಹಕರಿಸಲು ನಿರಾಕರಿಸಿದರು. ಹೀಗಾಗಿ ನಾಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಮಿಶ್ರಾ ಮತ್ತು ಕಾಲಿಯಾಬೋರ್ ಪೊಲೀಸ್ ಠಾಣೆಯ ಉಸ್ತುವಾರಿ ರಾಜೀಬ್ ಬರುವಾ ನೇತೃತ್ವದ ನಾಗಾಂವ್ ಪೊಲೀಸ್ ತಂಡವು ನಾಲ್ವರು ಆರೋಪಿಗಳನ್ನು ಬಂಧಿಸಿದೆ.
ಇಲ್ಲಿ ಯಾರೋ ಮಾಡೋ ತಪ್ಪಿಗೆ ಇನ್ಯಾರೋ ಬಲಿಯಾಗಿದ್ದಾರೆ. ಯಾರೋದ್ದೋ ಜೀವನ ಹಾಳಾಗಿದೆ. ಹೀಗಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮುಖ್ಯವಾಗಿರುತ್ತದೆ. ಮಕ್ಕಳು ಏನು ಮಾಡುತ್ತಾರೆ? ಎಲ್ಲಿ ಇರುತ್ತಾರೆ? ಯಾರೊಂದಿಗೆ ಇರುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಯಾವು ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೆ? ಇಂತೆಲ್ಲ ವಿಷಯಗಳನ್ನು ಪೋಷಕರು ತಿಳಿದಿರುವುದು ಅತ್ಯಾವಶ್ಯಕ. ಇವು ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳಸಲು ಅನುಕೂಲವಾಗುತ್ತದೆ.
ಈ ಸುದ್ದಿಯನ್ನು ನಾಗಾಂವ್ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಟ್ವೀಟ್‌ನಲ್ಲಿ, "ಮಿಸಾ, ಕಾಲಿಯಾಬೋರ್‌ನಲ್ಲಿ 6 ವರ್ಷದ ಬಾಲಕಿಯನ್ನು ಹತ್ಯೆ ಮಾಡಲಾದ ಪ್ರಕರಣವನ್ನು 24 ಗಂಟೆಗಳಲ್ಲಿ ಪರಿಹರಿಸಲಾಗಿದೆ. ಘಟನೆಯಲ್ಲಿ 3 ಅಪ್ರಾಪ್ತ ವಯಸ್ಕರು, ಓರ್ವ ವಯಸ್ಕನನ್ನು ಬಂಧಿಸಲಾಗಿದೆ. ಓರ್ವ ವಯಸ್ಕನನ್ನು ಮಕ್ಕಳಿಗೆ ಅಶ್ಲೀಲ ಚಿತ್ರಗಳನ್ನು ನೋಡಲು ಅವಕಾಶ ನೀಡಿರುವ ಆಧಾರದ ಮೇಲೆ ಬಂಧಿಸಲಾಗಿದೆ " ಎಂದು ಬರೆದಿದ್ದಾರೆ.
ಎಸ್‌ಪಿ ಆನಂದ್ ಮಿಶ್ರಾ ಕೂಡ ಘಟನೆಯ ಕುರಿತು ಕೆಲವು ಮಾಹಿತಿಯನ್ನು ಹಂಚಿಕೊಂಡರು. "ಕುಟುಂಬ/ಸಾಮಾಜಿಕ ಮಧ್ಯಸ್ಥಿಕೆ ಮತ್ತು ಸಾಂಸ್ಥಿಕ ಮಾರ್ಗದರ್ಶನದಿಂದ ಈ 4 ಯುವ ಜೀವಗಳನ್ನು ಉಳಿಸಬಹುದಿತ್ತು. ಆದರೆ ಇಲ್ಲಿ ಓರ್ವ ಬಾಲಕಿ ಜೀವ ಕಳೆದುಕೊಂಡಿದೆ, ಮೂವರು ಅಪ್ರಾಪ್ತ ಮಕ್ಕಳ ಜೀವನ ಹಾಳಾಗಿದೆ. ಇದು ನಮ್ಮಲ್ಲಿ ಅಥವಾ ಯಾರಲ್ಲಿಯೂ ಆಗಬಹುದು. ನಮ್ಮ ಸುತ್ತಮುತ್ತಲಿನ ಮುಂದಿನ ಪೀಳಿಗೆಗಳು ಸಾಮಾಜಿಕ-ನೈತಿಕ ಮಾನದಂಡಗಳಲ್ಲಿ ವಿಫಲವಾದರೆ, ಇಂಥಹ ಘಟನೆಗಳು ಸಂಭವಿಸುತ್ತವೆ. ಹೀಗಾಗಿ ಮಕ್ಕಳ ಜವಾಬ್ದಾರಿ ಪೋಷಕರು ಮತ್ತು ಸಮಾಜದ ಮೇಲೆ ಹೆಚ್ಚು ಇರುತ್ತದೆ! " ಎಂದಿದ್ದಾರೆ.












Click it and Unblock the Notifications