ಗುಜರಾತ್ ಕಾಂಗ್ರೆಸಿಗೆ ಮತ್ತೊಂದು ಆಘಾತ, 3 ಶಾಸಕರು ಬಿಜೆಪಿ ಸೇರ್ಪಡೆ

Subscribe to Oneindia Kannada

ಅಹಮದಾಬಾದ್, ಜುಲೈ 27: ಗುಜರಾತ್ ಕಾಂಗ್ರೆಸ್ ನ ಮೇರು ನಾಯಕ ಶಂಕರ್ ಸಿನ್ಹಾ ವಘೇಲಾ ನಿರ್ಗಮನದ ಬೆನ್ನಿಗೆ ಕೈ ಪಕ್ಷಕ್ಕೆ ಇಂದು ಮತ್ತೊಂದು ಆಘಾತ ಎದುರಾಗಿದೆ.

ಗುಜರಾತಿನ ಮೂವರು ಶಾಸಕರು ಇಂದು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಲ್ವಂತ್ ಸಿನ್ಹಾ ರಜಪೂತ್, ಪಿಐ ಪಟೇಲ್ ಮತ್ತು ತೇಜಶ್ರೀ ಪಟೇಲ್ ಇಂದು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನು ಅಪ್ಪಿಕೊಂಡಿದ್ದಾರೆ.

3 Gujarat Congress MLA’s joins BJP

ಇವರಲ್ಲಿ ಬಲ್ವಂತ್ ಸಿನ್ಹಾ ರಜಪೂತ್ ಮುಂದಿನ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ ರಾಜ್ಯಸಭೆಗೆ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿದೆ.

ಚುನಾವಣೆ ಹೊಸ್ತಿಲ್ಲಿರುವ ರಾಜ್ಯದಲ್ಲಿ ಒಬ್ಬೊಬ್ಬರಾಗಿ ಪಕ್ಷ ಬಿಡುತ್ತಿರುವುದು ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat Congress MLA’s Balwantsinh Rajput, PI Patel and Tejashree Patel joins BJP today here in Ahmedabad. MLA Balwantsinh Rajput to be the party's third candidate for Rajya Sabha from Gujarat.
Please Wait while comments are loading...