ಬಿಹಾರ: ಕಾರ್ತಿಕ ಪೂರ್ಣಿಮೆ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಮೂವರು ಬಲಿ
ಬೆಗುಸರೈ, ನವೆಂಬರ್ 4: ಕಾರ್ತಿಕ ಪೂರ್ಣಿಮೆಯ ನಿಮಿತ್ತ ಬಿಹಾರದ ಬೆಗುಸರೈ ಜಿಲ್ಲೆಯ ಸಿಮಾರಿಯಾ ಘಾಟ್ನಲ್ಲಿ ನಡೆಯುತ್ತಿದ್ದ್ ಕಾರ್ಯಕ್ರಮವೊಂದರಲ್ಲಿ ಉಂಟಾದ ಕಾಲ್ತುಳಿತಕ್ಕೆ ಮೂವರು ಬಲಿಯಾದ ಘಟನೆ ಇಂದು(ನ.4) ನಡೆದಿದೆ.
ಕಾಲ್ತುಳಿತ ಉಂಟಾಗುವುದಕ್ಕೆ ಕಾರಣ ತಿಳಿದುಬಂದಿಲ್ಲ. ಈ ನಡುವೆ, ಬಿಹಾರ ಮುಖ್ಯಮಂಗತ್ರಿ ನಿತೀಶ್ ಕುಮಾರ್ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಕಾರ್ತಿಕ ಮಾಸದ ಹುಣ್ಣಿಮೆ ದಿನವನ್ನು ಭಾರತದಾದ್ಯಂತ ಕಾರ್ತಿಕ ಪೂರ್ಣಿಮಾ ಎಂದು ಅದ್ಧೂರಿಯಾಗಿ ಆಚರಿಸಲಾಗುತ್ತದೆ.












Click it and Unblock the Notifications