ಸರ್ಜಿಕಲ್ ಸ್ಟ್ರೈಕ್ ನ ಆ ರೋಚಕ ದಿನಕ್ಕೆ ಇಂದಿಗೆ ಎರಡು ವರುಷ...
Recommended Video

ನವದೆಹಲಿ, ಸೆಪ್ಟೆಂಬರ್ 29: ಪಾಕಿಸ್ತಾನಿ ಭಯೋತ್ಪಾದಕರ ನಿದ್ದೆ ಕೆಡಿಸಿದ, ಉಗ್ರ ನೆಲೆಯನ್ನು ಪಾಕ್ ಗಡಿಯೊಳಗೇ ನುಗ್ಗಿ ದ್ವಂಸಗೊಳಿಸಿದ ಭಾರತದ ಸರ್ಜಿಕಲ್ ಸ್ಟ್ರೈಕ್ ಎಂಬ ರೋಚಕ ಘಟನೆ ನಡೆದು ಇಂದಿಗೆ ಎರಡು ವರ್ಷ!
2016 ರ ಸೆಪ್ಟೆಂಬರ್ 29 ರಂದು ಪಾಕಿಸ್ತಾನದ ಗಡಿಯೊಳಗೇ ಭಾರತ ಸೇನೆಯ ಯೋಧರು ನುಗ್ಗಿದ್ದರು. ಅತ್ಯಂತ ಗೌಪ್ಯವಾಗಿ ನಡೆದ ಈ ಘಟನೆಯ ನಂತರ ಇಡೀ ವಿಶ್ವವೂ ಭಾರತದತ್ತ ಬೆರಗುಗಣ್ಣಿನಿಂದ ನೋಡಿತ್ತು.

ಆದರೆ ಈ ಘಟನೆಯ ಕುರಿತು ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಘಟನೆ ನಡೆದಿದ್ದೇ ಸುಳ್ಳು, ಎನ್ ಡಿಎ ಸರ್ಕಾರ ಶ್ರೇಯಸ್ಸು ಪಡೆಯುವುದಕ್ಕೆ ಈ ಕತೆ ಕಟ್ಟಿದೆ ಎಂದು ವಿಪಕ್ಷಗಳು ದೂರಿದ್ದವು. ಆದರೆ ಎನ್ ಡಿಎ ನಾಯಕರು ಮಾತ್ರ ಸರ್ಜಿಕಲ್ ಸ್ಟ್ರೈಕ್ ಅನ್ನು ತಮ್ಮ ಪ್ರತಿ ಭಾಷಣದ
ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡರು.
ಅಂದು ಆ ಘಟನೆ ನಡೆದಿದ್ದು ಸತ್ಯ ಎಂಬುದಕ್ಕೆ ಪುರಾವೆಯಾಗಿ ಈ ವರ್ಷದ ಜುಲೈನಲ್ಲಿ ವಿಡಿಯೋವೊಂದನ್ನು ಸರ್ಕಾರ ಬಿಡುಗಡೆ ಮಾಡಿತು. ಇದೀಗ ಸೆ.26 ರಂದು ಸಹ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನ ಮತ್ತೊಂದಷ್ಟು ವಿಡಿಯೋಗಳನ್ನು ಬಿಡುಗಡೆ ಮಾಡಿದೆ.
2016 ರಲ್ಲಿ ಜಮ್ಮು-ಕಾಶ್ಮೀರದ ಉರಿಯಲ್ಲಿನ ಸೈನಿಕ ಶಿಬಿರದ ಮೇಲೆ ಪಾಕ್ ಉಗ್ರರು ದಾಳಿ ನಡೆಸಿ ಭಾರತೀಯ ಸೇನೆಯ ಹಲವು ಯೋಧರನ್ನು ಕೊಂದಿದ್ದರು. ಈ ದಾಳಿಗೆ ಸೇಡು ಎಂಬಂತೆ ಭಾರತ ಉಗ್ರ ನೆಲೆಯನ್ನು ದಮನಗೊಳಿಸಿತ್ತು.












Click it and Unblock the Notifications