2ಜಿ ಸ್ಪೆಕ್ಟ್ರಂ ಹಗರಣ: ಡಿ.5ರಂದು ತೀರ್ಪಿನ ದಿನಾಂಕ ಘೋಷಣೆ
ನವದೆಹಲಿ, ನವೆಂಬರ್ 07: ಯುಪಿಎ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಹಗರಣ, 2ಜಿ ಸ್ಪೆಕ್ಟ್ರಂಗೆ ಸಂಬಂಧಿಸಿದಂತೆ ತೀರ್ಪಿನ ದಿನಾಂಕವನ್ನು ಡಿಸೆಂಬರ್ 5 ಕ್ಕೆ ಘೋಷಿಸಲಾಗುವುದು ಎಂದು ನವದೆಹಲಿಯ ವಿಶೇಷ ನ್ಯಾಯಾಲಯ ಹೇಳಿದೆ. ಈ ಮೊದಲು ನ.7 ರಂದು ದಿನಾಂಕ ಘೋಷಿಸುವುದಾಗಿ ನ್ಯಾಯಾಲಯ ಹೇಳಿತ್ತು.
ಸುಮಾರು 1,76,000 ಕೋಟಿ ರೂ. 2ಜಿ ತರಂಗಗುಚ್ಛ ಹಗರಣ ಬೆಳಕಿಗೆ ಬಂದಿದ್ದು 2008 ರಲ್ಲಿ. ಆಗಿನ ಯುಪಿಎ ಮೈತ್ರಿ ಸರ್ಕಾರ, ಹಲವು ಟೆಲಿಕಾಂ ಕಂಪೆನಿಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ ಆರೋಪದಿಂದಾಗಿ 2 ಜಿ ಸ್ಪೆಕ್ಟ್ರಂ ಸುದ್ದಿಯಾಗಿತ್ತು. ನಂತರ ಯುಪಿಎ ಸರ್ಕಾರದ ಬಹುಮುಖ್ಯ ಹಗರಣಗಳಲ್ಲೊಂದಾಗಿ, ಮುಂದೆ ಯುಪಿಎ ಸರ್ಕಾರದ ಸೋಲಿನ ಕಾರಣಗಳಲ್ಲಿ ಇದೂ ಮಹತ್ವದ್ದಾಯಿತು.

2014 ರಲ್ಲಿ ಎ.ರಾಜಾ, ಕನ್ನಿಮೋಳಿ ಸೇರಿದಂತೆ 19 ಜನರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿತ್ತು. ಸರ್ಕಾರದ ಬೊಕ್ಕಸಕ್ಕೆ ಬಹುಕೋಟಿ ನಷ್ಟವನ್ನುಂಟುಮಾಡಿದ ಈ ಹಗರಣದ ತೀರ್ಪು ಯಾವಾಗ ಹೊರಬೀಳಲಿದೆ ಎಂಬುದನ್ನು ಡಿಸೆಂಬರ್ 5 ರಂದು ವಿಶೇಷ ನ್ಯಾಯಾಲಯ ಘೋಷಿಸಲಿದೆ.












Click it and Unblock the Notifications