28 ಮಿಲಿಯನ್ ಜನ ನಿಬ್ಬೆರಗಾಗುವುದಕ್ಕೆ ಕಾರಣವಾದ ವೈರಲ್ ವಿಡಿಯೋ, ಯುವತಿಯ ಕವನ ನಿಜ, ಯುವತಿಯಲ್ಲ!
Viral Video: ಸುಂದರ ಯುವತಿಯ ಶಾಯರಿ (ಭಾವನಾತ್ಮಕ ಮತ್ತು ಕಾವ್ಯಾತ್ಮಕ ಶೈಲಿಯ ಉರ್ದು/ಹಿಂದಿ ಪದ್ಯ ಅಥವಾ ಕವನ)ಯು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಯುವತಿಯ ಈ ಉರ್ದು - ಹಿಂದಿ ಮಿಶ್ರಿತ ಕವನವು ಸೋಷಿಯಲ್ ಮೀಡಿಯಾದಲ್ಲಿ ಬರೋಬ್ಬರಿ 28 ಮಿಲಿಯನ್ ವೀವ್ಸ್ ಕಂಡಿದೆ. ಆದರೆ ಅಚ್ಚರಿಯ ವಿಷಯವೆಂದರೆ ಈ ವಿಡಿಯೋ ವೈರಲ್ ಆಗಿ ವೀವ್ಸ್ ಆದ ಮೇಲೆ ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ. ಯಾಕೆಂದರೆ ಆ ಯುವತಿಯು ಕೇವಲ ಕಾಲ್ಪನಿಕ ಮಾತ್ರ ಎನ್ನುವುದು ಈಗ ಅಚ್ಚರಿಗೆ ಕಾರಣವಾಗಿರುವ ವಿಷಯ, ಇಷ್ಟಕ್ಕೂ ಏನಿದು ವೈರಲ್ ಸುದ್ದಿ ಎನ್ನುವ ವಿವರ ನೋಡೋಣ.
ಸೋಷಿಯಲ್ ಮೀಡಿಯಾದಲ್ಲಿ ಈಗ ದಿನಕ್ಕೊಂದು ಗಳಿಗೆಗೊಂದು ವಿಡಿಯೋ ವೈರಲ್ ಆಗುವುದು ಇದೆ. ಆದರೆ ಈಗ ವೈರಲ್ ಆಗಿರುವ ವಿಡಿಯೋವನ್ನು ನೋಡಿ ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ. ಹಳದಿ ಕುರ್ತಾ ಧರಿಸಿದ ಯುವತಿಯೊಬ್ಬರು ವೇದಿಕೆಯ ಮೇಲೆ ಮೈಕ್ರೊಫೋನ್ ತೆಗೆದುಕೊಂಡು, ಪ್ರೇಕ್ಷಕರತ್ತ ನೋಡಿಕೊಂಡು ನಗುತ್ತಾ, ಉರ್ದು ಭಾಷೆಯಲ್ಲಿ ಕವನ ಹೇಳಿದ್ದಾರೆ. ಚಂದದ ಕವನ ಸಾಲುಗಳಿಗೆ ನೆಟ್ಟಿಗರು ಫಿದಾ ಏನೋ ಆಗಿದ್ದಾರೆ. ಆ ಮೇಲೆ ಗೊತ್ತಾಗಿರುವುದು ತಂತ್ರಜ್ಞಾನ ಎಷ್ಟು ತಬ್ಬಿಬ್ಬಾಗಿಸುತ್ತಿದೆ ಎನ್ನುವುದು. ವೈರಲ್ ಆಗಿರುವ ಯುವತಿಯ ವಿಡಿಯೋ ಅಸಲಿಯೇ ಆದರೆ ಆ ಯುವತಿಯಲ್ಲ!

ಹೌದು ಶುಕ್ರವಾರ ವೈರಲ್ ವಿಡಿಯೋದ ಅಸಲಿಯತ್ತಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ವೈರಲ್ ಕವನವು "ಖಾಂದಾನಿ ರಈಸ್ ರಖ್ತೇ ಹೈಂ ಮಿಜಾಜ್ ನರಮ್ ಅಪ್ನಾ... ತುಮ್ಹಾರಾ ಲಹ್ಜಾ ಬತಾ ರಹಾ ಹೈ ಕಿ ತುಮ್ಹಾರಿ ದೌಲತ್ ನಯೀ ನಯೀ ಹೈ." ಕನ್ನಡದ ಅನುವಾದ: ಬಹುದಿನಗಳಿಂದ ಶ್ರೀಮಂತರಾಗಿದ್ದವರು ಸದಾ ಮೃದುವಾಗಿ ಮತ್ತು ಸಂಯಮದಿಂದ ವರ್ತಿಸುತ್ತಾರೆ. ನಿಮ್ಮ ಮಾತಿನ ದಾಟಿಯೇ ಹೇಳುತ್ತಿದೆ.. ನಿಮ್ಮ ಐಶ್ವರ್ಯ ಹೊಸದು" ಎನ್ನುವ ಸಾಲುಗಳು ಈಗ ವೈರಲ್ ಆಗಿರುವ ವಿಡಿಯೋದ ಕವನ ಸಾಲುಗಳು. ಆಗ ಅಚ್ಚರಿಗೆ ಕಾರಣವಾಗಿರುವ ವಿಚಾರವೆಂದರೆ ಈ ವೈರಲ್ ವಿಡಿಯೋದಲ್ಲಿ ಕವನ ವಾಚಿಸುತ್ತಿರುವವರು ನಿಜವಾದ ಯುವತಿಯಲ್ಲ, ಅವಳು ಎಐ ಸೃಷ್ಟಿ!
ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತನ್ವಿ ಜೋಶಿ ಎನ್ನುವವರು ಹಂಚಿಕೊಂಡಿದ್ದಾರೆ. ಅವರ ಪ್ರೊಫೈಲ್ ಅನ್ನು ಪಂಜಾಬಿ ಹುಡುಗಿ ಎಂದು ಬರೆದುಕೊಳ್ಳಲಾಗಿದೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಭಾಋೀ ವೈರಲ್ ಆಗಿದ್ದು, ಕೇವಲ ಒಂದೇ ದಿನದಲ್ಲಿ 28 ಮಿಲಿಯನ್ ವೀಕ್ಷಣೆ ಆಗಿದೆ. ಲಕ್ಷಾಂತರ ಜನರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶಾಯರಿ ವೀಡಿಯೊವನ್ನು ನೋಡಿದ್ದಾರೆ. ಮೊದ ಮೊದಲು ಬಹಳಷ್ಟು ಜನರಿಗೆ ಇದು ಎಐ ವಿಡಿಯೋ ಎಂದೇ ಅನಿಸಿಲ್ಲ. ಈಗ ಈ ವಿಷಯ ಬಹಿರಂಗವಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
Viral Video ವೈರಲ್ ವಿಡಿಯೋದ ಹಿನ್ನೆಲೆ ಏನು
ಇನ್ನು ಈ ಕವನದ ಸಾಲುಗಳು ಸಹ ಬೇರೆಯವರದ್ದಾಗಿದೆ ಎಂದು ಹೇಳಲಾಗಿದೆ. ತನ್ವಿ ಜೋಶಿ ಹಳೆಯ vs ಹೊಸ ಶ್ರೀಮಂತಿಕೆಯ ಕವನದ ಸಾಲುಗಳನ್ನು ಆಡಿಯೊವನ್ನು ಥಾಣೆ ಮುನ್ಸಿಪಲ್ ಕಾರ್ಪೊರೇಷನ್‌ನ ಕಾರ್ಪೊರೇಟರ್ ಮಾರ್ಜಿಯಾ ಶಾನು ಪಠಾಣ್ ಅವರದ್ದು ಎಂದು ಹೇಳಲಾಗಿದೆ.
ಆರು ದಿನಗಳ ಹಿಂದೆ ಪಠಾಣ್ ಅವರು ಕಾರ್ಯಕ್ರಮವೊಂದರಲ್ಲಿ ಈ ಕವನದ ಸಾಲುಗಳನ್ನು ಹೇಳಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ವಿಪರ್ಯಾಸವೆಂದರೆ, ತನ್ವಿ ಜೋಶಿ ಅವರ 28 ಮಿಲಿಯನ್ ವೀಕ್ಷಣೆಗಳಿಗೆ ಹೋಲಿಸಿದರೆ ಮೂಲ ವಿಡಿಯೋವು ಕೇವಲ 9 ಲಕ್ಷಕ್ಕಿಂತ ಕಡಿಮೆ ವೀಕ್ಷಣೆಗಳನ್ನು ಕಂಡಿದೆ. ನೆಟ್ಟಿಗರು ಈ ವಿಡಿಯೋಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications