23ರ ಹರೆಯದಲ್ಲೇ ₹10 ಕೋಟಿ ಮೌಲ್ಯದ ಸ್ಟಾರ್ಟ್‌ಅಪ್: ಭಾರತೀಯ ಯುವತಿ ಅಂಜಲಿ ಸರ್ದಾನಾ ಸ್ಫೂರ್ತಿಯ ಪಯಣ!

ಭಾರತದ 23 ವರ್ಷದ ಯುವತಿಯೊಬ್ಬರು ಇದೀಗ ದೇಶದ ಗಮನ ಸೆಳೆಯುತ್ತಿದ್ದಾರೆ. ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಈಚೆಗೆ ಪದವೀಧರರಾದ ಅಂಜಲಿ ಸರ್ದಾನಾ ಅವರು ತಮ್ಮ ಸ್ಟಾರ್ಟ್‌ ಅಪ್ ಪ್ರಾರಂಭಿಸಿ ಒಂದೇ ವರ್ಷದ ಒಳಗೆ ಪ್ರಾಂಟೊ ಎನ್ನುವ ಸ್ಟಾರ್ಟ್ ಅಪ್‌ನ ಮೂಲಕ ಅವರು 100 ಮಿಲಿಯನ್ (10 ಕೋಟಿ) ಆದಾಯ ಗಳಿಸಿದ್ದಾರೆ. ಕಾಲೇಜಿನಲ್ಲಿ ಪದವಿ ಪೂರೈಸಿದ ಒಂದು ವರ್ಷದ ನಂತರವೂ ಹೆಚ್ಚಿನ ಜನರು ಇನ್ನೂ ಏನು ಮಾಡಬೇಕು ಅಂತ ಯೋಚಿಸುತ್ತಿರುವಾಗಲೇ ಅಂಜಲಿ ತಮ್ಮದೇ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಹನ್ನೆರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಅವರು ಪ್ರಾಂಟೊ ಎನ್ನುವ ಸ್ಟಾರ್ಟ್ ಅಪ್ ಅನ್ನು ಸುಮಾರು 100 ಮಿಲಿಯನ್ ಮೌಲ್ಯದ ಕಂಪನಿಯಾಗಿ ನಿರ್ಮಿಸಿದ್ದಾರೆ. ಗುರುಗ್ರಾಮ್‌ನಲ್ಲಿ ಮನೆಯ ಸೇವೆಗಳಿಗಾಗಿ / ಮನೆ ಕೆಲಸಕ್ಕಾಗಿ ಪ್ರಾರಂಭವಾದ ಕಂಪನಿಯು ಈಗ ಅನೇಕ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಹತ್ತಾರು ಸಾವಿರ ದೈನಂದಿನ ಬುಕಿಂಗ್‌ಗಳೊಂದಿಗೆ ಈ ಸ್ಟಾರ್ಟ್ ಅಪ್ ಮುಂದುವರಿದಿದೆ. ಅಂಜಲಿ ಸರ್ದಾನಾ ಅವರು, 2024 ರಲ್ಲಿ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಿಂದ ಪರಿಪೂರ್ಣ GPA ಮತ್ತು ಉನ್ನತ ಶೈಕ್ಷಣಿಕ ಗೌರವಗಳೊಂದಿಗೆ ಪದವಿ ಪಡೆದರು, ಇದರಲ್ಲಿ ಅವರ ಜೀವಶಾಸ್ತ್ರ ವಿಷಯದಲ್ಲಿ ನಂಬರ್ ಒನ್ ಪದವಿ ವಿದ್ಯಾರ್ಥಿನಿಯಾಗಿ ಹೊರ ಹೊಮ್ಮಿದ್ದರು.

23-Year-Old Indian Entrepreneur Anjali Sardana Inspiring Journey Building 10 Crore Startup

ವಿದ್ಯಾಭ್ಯಾಸದೊಂದಿಗೆ ಅವರು ಹಣಕಾಸು ಮತ್ತು ಹೂಡಿಕೆಯ ಜಗತ್ತಿನಲ್ಲಿ ತಮ್ಮ ಕೌಶಲ್ಯ ವೃದ್ಧಿಸಿಕೊಂಡರು. ಇದಲ್ಲದೆ ಅವರು ಜಾರ್ಜ್‌ಟೌನ್‌ನ ಹೂಡಿಕೆ ಕಚೇರಿಯೊಂದಿಗೆ ಕೆಲಸ ಮಾಡುತ್ತಿದ್ದರು. ಕೋಟ್ಯಂತರ ಡಾಲರ್‌ಗಳ ಹೂಡಿಕೆಗಳನ್ನು ಪರಿಶೀಲಿಸಲು ಸಹಾಯ ಮಾಡಿದರು. ಪದವಿ ಪಡೆಯುವ ಮೊದಲೇ ಹೂಡಿಕೆ, ಮಾರುಕಟ್ಟೆ ಮತ್ತು ಹಣಕಾಸಿನ ಬಗ್ಗೆ ಉತ್ತಮ ಅನುಭವ ಪಡೆದರು. ಇದರಿಂದ ಅವರಿಗೆ ಮುಂದೆ ತಮ್ಮ ಸ್ಮಾರ್ಟ್ ಅಪ್‌ನಲ್ಲಿ ಸಕ್ಸಸ್ ಕಾಣುವುದಕ್ಕೆ ಸಹಾಯವಾಯಿತು. ನಂತರ ನ್ಯೂಯಾರ್ಕ್‌ನ ಮಾರ್ಗನ್ ಸ್ಟಾನ್ಲಿಯಲ್ಲಿ ಅವರು ತರಬೇತಿ ಪಡೆದರು. ಬಳಿಕ 8VC ಸಂಸ್ಥೆಗೆ ಸೇರಿದರು. ನಂತರ ಬೈನ್ ಕ್ಯಾಪಿಟಲ್ನಲ್ಲಿ ಖಾಸಗಿ ಕಂಪನಿಗಳಲ್ಲಿ ಹೂಡಿಕೆ ಮಾಡುವ ಕೆಲಸಕ್ಕೆ ಸೇರಿದರು.

2025ರಲ್ಲಿ ಶುರುವಾಯ್ತು ಪ್ರಾಂಟೊ ಸ್ಟಾರ್ಟ್ ಅಪ್

ಅಂಜಲಿ ಸರ್ದಾನಾ ಅವರು 2025ರಲ್ಲಿ ಪ್ರಾಂಟೊ ಸ್ಟಾರ್ಟ್ ಅಪ್ ಪ್ರಾರಂಭಿಸಿದರು. ಭಾರತದಲ್ಲಿ ದೇಶೀಯ ಸೇವೆಗಳ ಮಾರುಕಟ್ಟೆ ದೊಡ್ಡದಾಗಿದೆ ಆದರೆ ಇನ್ನೂ ಹೆಚ್ಚಾಗಿ ಅಸಂಘಟಿತವಾಗಿದೆ. ವಿಶ್ವಾಸಾರ್ಹ ಸಹಾಯವನ್ನು ಕಂಡುಹಿಡಿಯುವುದು ಹೆಚ್ಚಾಗಿ ಸಂಪರ್ಕಗಳು, ಲಭ್ಯತೆ ಮತ್ತು ಅದೃಷ್ಟವನ್ನು ಸಹ ಇದು ಅವಲಂಬಿಸಿರುತ್ತದೆ ಎನ್ನುವ ವಿಷಯವನ್ನು ಅವರು ಕಂಡುಕೊಂಡರು.

ಮನೆ ಸ್ವಚ್ಛತೆ, ಬಟ್ಟೆಗಳನ್ನು ಹೊಗೆದುಕೊಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ಮನೆ ಕೆಲಸಗಳಿಗಾಗಿ ತರಬೇತಿ ಪಡೆದ ಕಾರ್ಮಿಕರನ್ನು ಬುಕ್ ಮಾಡುವುದಕ್ಕೆ ಈ ಸ್ಟಾರ್ಟ್ / ಆ್ಯಪ್ ಅನುಮತಿಸುತ್ತದೆ. ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ, ಪರಿಶೀಲಿಸಲಾಗುತ್ತದೆ ಮತ್ತು ತರಬೇತಿ ನೀಡಲಾಗುತ್ತದೆ, ನಂತರ ನಿರ್ದಿಷ್ಟ ಶಿಫ್ಟ್‌ಗಳನ್ನು ನಿಯೋಜಿಸಲಾಗುತ್ತದೆ.

2026ರ ಆರಂಭದ ವೇಳೆಗೆ, ಪ್ರೊಂಟೊ 18,000 ಕ್ಕೂ ಹೆಚ್ಚು ದೈನಂದಿನ ಬುಕಿಂಗ್‌ಗಳನ್ನು ಕಂಡಿದೆ. ಅಲ್ಲದೆ ದೆಹಲಿ NCR, ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಂತಹ ನಗರಗಳಿಗೆ ವಿಸ್ತರಿಸಿದೆ ಎನ್ನುವುದು ಮತ್ತೊಂದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+