1,000 ರೂಪಾಯಿಗೆ ತಿಲಾಂಜಲಿ, ಹೊಸ ನೋಟು ಚಲಾವಣೆ ಇಲ್ಲ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 17: ನೋಟುಗಳ ಬ್ಯಾನ್ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯದ ಬಗ್ಗೆ ಸಂಸತ್ತಿನಲ್ಲಿ ಭಾರಿ ಚರ್ಚೆ ನಡೆದಿದೆ. ರಾಜ್ಯಸಭೆಯಲ್ಲಿ ಈ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಹೊಸದಾಗಿ 1,000 ನೋಟುಗಳನ್ನು ಚಲಾವಣೆಗೆ ತರುವುದಿಲ್ಲ ಎಂದಿದ್ದಾರೆ.

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ರು ನೋಟುಗಳ ಬಳಕೆಯನ್ನು ನಿಷೇಧಿಸಿದ್ದು ಎಲ್ಲರಿಗೂ ತಿಳಿದಿರಬಹುದು. ಹೊಸದಾಗಿ 2,000 ರುಪಾಯಿ ಹಾಗೂ ಇದೀಗ 500 ರುಪಾಯಿ ನೋಟುಗಳು ಚಲಾವಣೆಗೆ ಬಂದಿವೆ. [ಹಣ ಬದಲಾವಣೆ, ವಿಥ್ ಡ್ರಾ ಮಿತಿ ಇಳಿಕೆಗೆ ಕಾರಣ ಏನು?]


ಆದರೆ, 1,000 ರುಪಾಯಿ ಮುಖಬೆಲೆ ನೋಟುಗಳ ಬಗ್ಗೆ ಇದ್ದ ಅನುಮಾನವನ್ನು ಜೇಟ್ಲಿ ಅವರು ಪರಿಹರಿಸಿದ್ದು, ಹೊಸ ವಿನ್ಯಾಸದಲ್ಲಿ 1000 ರೂಪಾಯಿ ನೋಟುಗಳು ತರುತ್ತಿಲ್ಲ ಎಂದಿದ್ದಾರೆ.[ಮದುವೆ ಸಮಾರಂಭಗಳಿಗಾಗಿ 2.5 ಲಕ್ಷ ಡ್ರಾ ಮಾಡಬಹುದು]

ಹೊಸ ನೋಟುಗಳು ಎಟಿಎಂಗೆ : ಎಟಿಎಂಗಳಿಗೆ ಹೊಸ ನೋಟುಗಳನ್ನು ತುಂಬುವ ಕಾರ್ಯ ಭರದಿಂದ ಸಾಗಿದೆ. ದೇಶದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಎಟಿಎಂಗಳಿವೆ. ಇಂದಿನಿಂದ 22,500 ಎಟಿಎಂಗಳು ಪುನರ್ ವಿನ್ಯಾಸಗೊಳ್ಳಲಿವೆ ಎಂದು ರಾಜ್ಯಸಭೆಯಲ್ಲಿ ಹೇಳಿದರು.

ನೋಟುಗಳ ಬದಲಾವಣೆ ಮಿತಿಯನ್ನು 4,500 ರೂಪಾಯಿಯಿಂದ 2,000 ರೂಪಾಯಿಗೆ ಇಳಿಸಿದ ಕ್ರಮವನ್ನು ಸಮರ್ಥಿಸಿಕೊಂಡ ಜೇಟ್ಲಿ, ಇದರಿಂದ ಹಣ ದುರ್ಬಳಕೆ ತಡೆಗಟ್ಟಬಹುದು ಎಂದರು.

ನಾಗರಿಕರ ಸಂಘಟನೆ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆ ಪ್ರಕಾರ ನೋಟುಗಳ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳಿಗೆ ಶೇ 79ರಷ್ಟು ಮಂದಿ ಸರಿಯಾಗಿದೆ ಎಂದಿದ್ದಾರೆ. ಹೀಗಾಗಿ ಸರ್ಕಾರ ಸರಿ ಹಾದಿಯಲ್ಲಿದೆ ಎಂದು ಮೋದಿ ಸರ್ಕಾರ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English:
English summary
Amid uproar in Parliament over the government's demonetisation decision, Finance Minister Arun Jaitley on Thursday said Rs.1,000 notes will not be re-introduced in the system.
Please Wait while comments are loading...