ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಮತ್ತು ಏರ್‌ಬಸ್‌ ಒಪ್ಪಂದ: ಗುಜರಾತ್‌ಗೆ 22,000 ಕೋಟಿ ಯೋಜನೆ

|
Google Oneindia Kannada News

ಗಾಂಧಿನಗರ, ಅಕ್ಟೋಬರ್ 27: ಗುಜರಾತ್ ವಿಧಾನಸಭಾ ಚುನಾವಣೆ ಘೋಷಣೆಗೂ ಪೂರ್ವದಲ್ಲಿ ಬಂಪರ್ ಕೊಡುಗೆಯನ್ನು ನೀಡಿದೆ. ಟಾಟಾ ಮತ್ತು ಏರ್‌ಬಸ್‌ ಕಂಪನಿಗಳು ರಾಜ್ಯದೊಂದಿಗೆ ಬರೋಬ್ಬರಿ 22,000 ಕೋಟಿ ಯೋಜನೆಗೆ ಒಪ್ಪಂದ ಮಾಡಿಕೊಂಡಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಟಾಟಾ ಮತ್ತು ಏರ್‌ಬಸ್‌ಗಳು ಮಿಲಿಟರಿಗಾಗಿ ಸಾರಿಗೆ ವಿಮಾನಗಳನ್ನು ಉತ್ಪಾದಿಸಲು 22,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಒಪ್ಪಂದ ಮಾಡಿಕೊಂಡಿವೆ.

ಗುಜರಾತ್ ಚುನಾವಣೆ: ಅಡ್ವಾಣಿ ರಥಯಾತ್ರೆ ಆರಂಭಿಸಿದ ಸ್ಥಳದಿಂದಲೇ ಚುನಾವಣಾ ಕಹಳೆಗುಜರಾತ್ ಚುನಾವಣೆ: ಅಡ್ವಾಣಿ ರಥಯಾತ್ರೆ ಆರಂಭಿಸಿದ ಸ್ಥಳದಿಂದಲೇ ಚುನಾವಣಾ ಕಹಳೆ

"ಇದು ಭಾರತದಲ್ಲಿ ಖಾಸಗಿ ಕಂಪನಿಯೊಂದು ಮಿಲಿಟರಿ ವಿಮಾನವನ್ನು ತಯಾರಿಸುವ ಮೊದಲ ಯೋಜನೆಯಾಗಿದೆ. ಈ ಯೋಜನೆಯ ಒಟ್ಟು ವೆಚ್ಚ 21,935 ಕೋಟಿ ರೂಪಾಯಿ ಆಗಿದ್ದು, ಅದೇ ವಿಮಾನವನ್ನು ನಾಗರಿಕ ಉದ್ದೇಶಗಳಿಗಾಗಿಯೂ ಬಳಸಬಹುದು," ಎಂದು ರಕ್ಷಣಾ ಕಾರ್ಯದರ್ಶಿ ಡಾ ಅಜಯ್ ಕುಮಾರ್ ಹೇಳಿದ್ದಾರೆ.

ವಡೋದರಾದಲ್ಲಿ ಉತ್ಪಾದನಾ ಘಟಕದ ಉದ್ಘಾಟನೆ

ವಡೋದರಾದಲ್ಲಿ ಉತ್ಪಾದನಾ ಘಟಕದ ಉದ್ಘಾಟನೆ

ಗುಜರಾತಿನ ವಡೋದರಾದಲ್ಲಿ ಈ ಉತ್ಪಾದನಾ ಘಟಕವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಆ ಮೂಲಕ ಸಾವಿರಾರು ಉದ್ಯೋಗಗಳ ಭರವಸೆಯೊಂದಿಗೆ ಹೊಸ ಯೋಜನೆಗೆ ಚಾಲನೆ ಸಿಗಲಿದೆ. ಬಿಜೆಪಿ ಪಾಲಿಗೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಅಸ್ತ್ರವಾಗುವ ಸಾಧ್ಯತೆಯಿದೆ.

ಚಿಪ್ ಉತ್ಪಾದಿಸುವ ಯೋಜನೆಯಿಂದ ಉದ್ಯೋಗ ಸೃಷ್ಟಿ

ಚಿಪ್ ಉತ್ಪಾದಿಸುವ ಯೋಜನೆಯಿಂದ ಉದ್ಯೋಗ ಸೃಷ್ಟಿ

ಕಳೆದ ಸೆಪ್ಟೆಂಬರ್‌ನಲ್ಲಿ ವೇದಾಂತ ಲಿಮಿಟೆಡ್ ಮತ್ತು ತೈವಾನ್‌ನ ಫಾಕ್ಸ್‌ಕಾನ್‌ನ ಜಂಟಿ ಉದ್ಯಮದಿಂದ ಚಿಪ್‌ಗಳನ್ನು (ಸೆಮಿಕಂಡಕ್ಟರ್‌ಗಳು) ಉತ್ಪಾದಿಸುವ 19.5-ಬಿಲಿಯನ್ ಡಾಲರ್ ಹೂಡಿಕೆಯನ್ನು ಪಡೆಯಲು ಮಹಾರಾಷ್ಟ್ರಕ್ಕಿಂತ ಗುಜರಾತ್ ಬೆಸ್ಟ್ ಎನಿಸಿತ್ತು. ಅಹಮದಾಬಾದ್ ಬಳಿ ಅದರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ. ಈ ಹಂತದಲ್ಲಿ ರಾಜ್ಯದಿಂದ ಇತರ ಪ್ರೋತ್ಸಾಹದ ಜೊತೆಗೆ ಗಣನೀಯ ಸಬ್ಸಿಡಿಯನ್ನು ನೀಡಲಾಗುತ್ತದೆ. ಇದರಿಂದ 1,00,000 ಉದ್ಯೋಗಗಳ ಸೃಷ್ಟಿ ಸಾಧ್ಯವಾಗುತ್ತದೆ.

ಟಾಟಾ-ಏರ್‌ಬಸ್ ಯೋಜನೆ ಎಂದರೇನು?

ಟಾಟಾ-ಏರ್‌ಬಸ್ ಯೋಜನೆ ಎಂದರೇನು?

ಟಾಟಾ-ಏರ್‌ಬಸ್ ಯೋಜನೆಯು ಪ್ರಧಾನ ಮಂತ್ರಿಯವರ "ಮೇಕ್-ಇನ್-ಇಂಡಿಯಾ" ಅಭಿಯಾನ ಪರಿಣಾಮ ಎಂದು ಪರಿಗಣಿಸಲಾಗುತ್ತಿದೆ. ಇದು ಮಿಲಿಟರಿ ತಂತ್ರಜ್ಞಾನ ಮತ್ತು ಉಪಕರಣಗಳಿಂದ ಖರೀದಿಸುವುದರಲ್ಲಿ ಬೇರೆ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಕಳೆದ ತಿಂಗಳು ಏರ್‌ಬಸ್‌ನಿಂದ 56 ಸಾರಿಗೆ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿತ್ತು. "ಇದೇ ಒಪ್ಪಂದದ ಭಾಗವಾಗಿ, ಭಾರತದಲ್ಲಿ 40 ತಯಾರಿಸಲಾಗುವುದು, 16 ವಿಮಾನಗಳನ್ನು ಫ್ಲೈವೇ ಸ್ಥಿತಿಯಲ್ಲಿ ವಿತರಿಸಲಾಗುವುದು," ಎಂದು ರಕ್ಷಣಾ ಕಾರ್ಯದರ್ಶಿ ಇಂದು ಹೇಳಿದರು. ಖಾಸಗಿ ಕಂಪನಿಯೊಂದು ಭಾರತದಲ್ಲಿ ಮಿಲಿಟರಿ ವಿಮಾನವನ್ನು ತಯಾರಿಸುವ ಈ ರೀತಿಯ ಮೊದಲ ಯೋಜನೆ ಇದಾಗಿದೆ ಎಂದು ಅವರು ಹೇಳಿದರು.

ಯಾವಾಗ ಸಿಗುತ್ತೆ ಹಾರಲು ಸಿದ್ಧವಾದ ವಿಮಾನಗಳು?

ಯಾವಾಗ ಸಿಗುತ್ತೆ ಹಾರಲು ಸಿದ್ಧವಾದ ವಿಮಾನಗಳು?

ಸರ್ಕಾರದಅಧಿಕೃತ ಹೇಳಿಕೆಯ ಪ್ರಕಾರ, ಮೊದಲ 16 ಫ್ಲೈ-ಅವೇ ಅಥವಾ ಕಾರ್ಯನಿರ್ವಹಿಸಲು ಸಿದ್ಧವಾದ ವಿಮಾನಗಳನ್ನು ಸೆಪ್ಟೆಂಬರ್ 2023 ಮತ್ತು ಆಗಸ್ಟ್ 2025ರ ನಡುವೆ ಸ್ವೀಕರಿಸಲು ನಿರ್ಧರಿಸಲಾಗಿದೆ. ಮೊದಲ ಗುಜರಾತ್ ನಿರ್ಮಿತ ವಿಮಾನವು ಸೆಪ್ಟೆಂಬರ್ 2026ರಲ್ಲಿ ಸಿಗುತ್ತದೆ ಎಂದು ನಿರೀಕ್ಷಿಸಲಾಗಿದೆ.

"ಭಾರತೀಯ ವಾಯುಪಡೆಯ ಅವ್ರೋ ವಿಮಾನದ ಬದಲಿಗೆ ಹೊಸ C-295 ಸಾರಿಗೆ ವಿಮಾನವನ್ನು ನೀಡುತ್ತದೆ. ಇದು ತ್ವರಿತ ಪ್ರತಿಕ್ರಿಯೆಗಾಗಿ ಮತ್ತು ಪಡೆಗಳು ಮತ್ತು ಸರಕುಗಳನ್ನು ಬೀಳಿಸಲು ಹಿಂಭಾಗದ ರಾಂಪ್ ಬಾಗಿಲನ್ನು ಹೊಂದಿದೆ. ಅರೆ-ಸಿದ್ಧ ಮೇಲ್ಮೈಗಳಿಂದ ಸಣ್ಣ ಟೇಕ್-ಆಫ್/ಲ್ಯಾಂಡ್ ಇದರ ಮತ್ತೊಂದು ವೈಶಿಷ್ಟ್ಯವಾಗಿದೆ. ಈ ವಿಮಾನವು ಐಎಎಫ್‌ನ ಲಾಜಿಸ್ಟಿಕ್ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ," ಎಂದು ಹೇಳಿಕೆ ತಿಳಿಸಿದೆ.

English summary
22 000 Crore Project With Tatas And Airbus to Gujarat ahead of Assembly Election. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X