ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯ: ಯುವತಿ ಬಂಧನ

ಅಪ್ರಾಪ್ತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಯುವತಿಯೊಬ್ಬರನ್ನು ಕೇರಳದ ಕೊಟ್ಟಾಯಂನ ರಾಮಪುರಂ ಪೊಲೀಸರು ಬಂಧಿಸಿದ್ದಾರೆ.

ಕೊಟ್ಟಾಯಂ (ಕೇರಳ), ಏಪ್ರಿಲ್ 3: ತನ್ನ ಮಗನ ಮೇಲೆ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆಂದು ಆರೋಪಿಸಿದ, ತಾಯಿಯ ದೂರಿನನ್ವಯ 21 ವರ್ಷದ ಯುವತಿಯನ್ನು ಕೇರಳದ ಕೊಟ್ಟಾಯಂ ನ ರಾಮಪುರಂ ಪೊಲೀಸರು ಬಂಧಿಸಿದ್ದಾರೆ.

17 ವರ್ಷದ ಅಪ್ರಾಪ್ತನನ್ನು ಪ್ರೀತಿಸುತ್ತಿದ್ದ 21 ವರ್ಷದ ಯುವತಿ, ಯುವಕನ ಕುಟುಂಬದ ವಿರೋಧದ ನಡುವೆಯೂ ಆತನ ಮನೆಯಲ್ಲಿ ತಂಗಿದ್ದಳು. ಜೊತೆಗೆ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಳು ಎಂದು ಆರೋಪಿಸಿ, ರಾಮಪುರಂ ಪೊಲೀಸ್ ಠಾಣೆಯಲ್ಲಿ ಯುವಕನ ತಾಯಿ ದೂರು ದಾಖಲಿಸಿದ್ದರು.[ಪ್ರೇಮ ನಿರಾಕರಣೆ: ಭದ್ರಾವತಿಯಲ್ಲಿ ಯುವಕನ ಮೇಲೆ ಯುವತಿ ಹಲ್ಲೆ!]

21 year old girl arrests by Kerala police under POCSO act

ದೂರಿನನ್ವಯ ಯುವತಿಯ ವಿಚಾರಣೆಗೆ ಪೊಲೀಸರು ಬಂದಾಗ ಯುವತಿ ಮನೆಯಿಂದ ಆಚೆ ಬಾರದೆ, ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಪ್ರಯತ್ನಿಸುತ್ತಿದ್ದಳು. ನಂತರ ಪೊಲೀಸರೇ ಮನೆಯೊಳಗೆ ಹೋಗಿ, ಆಕೆಯನ್ನು ಪೋಕ್ಸೋ (ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ) ಕಾಯಿದೆಯಡಿ ಬಂಧಿಸಿದ್ದಾರೆ.[ಜರ್ಮನ್ ಮಹಿಳೆ ಮೇಲೆ ಹಾಡಹಗಲೇ ಸಾಮೂಹಿಕ ಅತ್ಯಾಚಾರ]

ಎರ್ನಾಕುಲಂ ಮೂಲದ ಈ ಯುವತಿಗೂ, 17 ವರ್ಷದ ಯುವಕನಿಗೂ ಫೇಸ್ ಬುಕ್ ಮೂಲಕ ಸಂಪರ್ಕವಾಗಿತ್ತು ಎಂಬುದು ವಿಚಾರಣೆಯ ವೇಳೆ ತಿಳಿದುಬಂದಿದ್ದು, ಅಪ್ರಾಪ್ತ ಯುವಕನನ್ನೂ ವಿಚಾರಣೆಗೊಳಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+