2025ರ ಜನವರಿ 1ರಿಂದ ದೇಶದ ಆರ್ಥಿಕ ವಲಯದಲ್ಲಿ ಹೊಸ ಬದಲಾವಣೆ
ಹೊಸ ವರ್ಷ 2025ರಲ್ಲಿ ಭಾರತದಾದ್ಯಂತ ಹಲವು ಪ್ರಮುಖ ಬದಲಾವಣೆಗಳು ಆಗಲಿವೆ. ಪ್ರಮುಖವಾಗಿ ಬ್ಯಾಂಕಿಂಗ್ ಹಾಗೂ ಆರ್ಥಿಕ ವಲಯದಲ್ಲಿ ಹಲವು ಬದಲಾವಣೆಗಳು ಆಗಲಿವೆ. ವೀಸಾ ಅಪಾಯಿಂಟ್‌ಮೆಂಟ್, ರೈತರ ಸಾಲ ಹೆಚ್ಚಳ ಹಾಗೂ ಯುಪಿಐ ಮಿತಿ ಸೇರಿದಂತೆ ಹಲವು ಪ್ರಮುಖ ಬದಲಾವಣೆಗಳು ಆಗಲಿವೆ. ಇದರಿಂದೊಂದಿಗೆ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲೂ ಪ್ರಮುಖ ಬದಲಾವಣೆ ಆಗಲಿವೆ. ಇ- ಬಿಲ್ ಸೇರಿದಂತೆ ಪ್ರಮುಖವಾಗಿ ಆರ್ಥಿಕ ಕ್ಷೇತ್ರದಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ ಎನ್ನುವ ಮಾಹಿತಿ ಇಲ್ಲಿದೆ.
2024 ಮುಕ್ತಾಯವಾಗಿ 2025 ಪ್ರಾರಂಭವಾಗಿದೆ. ಹೊಸ ವರ್ಷದ ಮೊದಲ ದಿನದಿಂದಲೇ ಹಲವು ಪ್ರಮುಖ ಬದಲಾವಣೆಗಳು ಆಗಲಿವೆ. ಕರ್ನಾಟಕ ಸೇರಿದಂತೆ ದೇಶದಲ್ಲಿ ಹೊಸ ವರ್ಷದಿಂದ ಏನೆಲ್ಲ ಬದಲಾವಣೆಗಳು ಆಗಲಿವೆ ಎನ್ನುವ ವಿವರ ಇಲ್ಲಿದೆ. ಮುಖ್ಯವಾಗಿ ನಾಳೆಯಿಂದ UPI ವಹಿವಾಟು ಮಿತಿಗಳು ಹೆಚ್ಚಾಗಲಿವೆ. ಈಗ ಯುಪಿಐ ಮೂಲಕ 5,000 ಸಾವಿರ ರೂಪಾಯಿ ವರ್ಗಾವಣೆ ಮಾಡುವುದಕ್ಕೆ ಅವಕಾಶವಿದ್ದು. ಇದು 10,000 ಸಾವಿರಕ್ಕೆ ಹೆಚ್ಚಳವಾಗಲಿದೆ.

ರೈತರಿಗೆ ಸಾಲ ಮಿತಿ ಹೆಚ್ಚಳ: ಈ ವರ್ಷ ರೈತರಿಗೆ ಸಾಲದ ಮಿತಿ ಹೆಚ್ಚಳವಾಗಲಿದೆ. ಕೃಷಿ ವಲಯಕ್ಕೆ ಹಾಗೂ ರೈತರಿಗೆ ಉತ್ತೇಜನ ಸಿಗಲಿದೆ. 2025ನೇ ಸಾಲಿನ ಜನವರಿ 1ರಿಂದ ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ರೂಪಾಯಿಯ ವರೆಗೆ ಸಾಲ ಪಡೆಯುವುದಕ್ಕೆ ರೈತರು ಅರ್ಹರಾಗಿರಲಿದ್ದಾರೆ. ಈ ಹಿಂದಿನ 1.6 ಲಕ್ಷ ಮಿತಿಯಿಂದ ಇದೀಗ 2 ಲಕ್ಷ ರೂಪಾಯಿಯ ವರೆಗೆ ಹೆಚ್ಚಳ ಮಾಡಲಾಗಿದೆ. ಕೃಷಿ ವಲಯದಲ್ಲಿ ಅಭಿವೃದ್ಧಿ ಇದರ ಉದ್ದೇಶವಾಗಿದೆ.
EPFO ವಿತ್ ಡ್ರಾ ಮಾಡಿಕೊಳ್ಳುವುದು ಇನ್ನಷ್ಟು ಸುಲಭ: ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಗುಡ್‌ನ್ಯೂಸ್ ಕೊಡುತ್ತಿದೆ. 2025ನೇ ಸಾಲಿನ ಜನವರಿ 1ರಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಅಡಿಯಲ್ಲಿ ಯಾವುದೇ ಬ್ಯಾಂಕಿನಿಂದ ತಮ್ಮ ಪಿಂಚಣಿ ಮೊತ್ತವನ್ನು ಪಡೆಯುವುದಕ್ಕೆ ಅವಕಾಶ ಇರಲಿದೆ. ಈ ಬದಲಾವಣೆಯು ನಿವೃತ್ತರಾಗಿರುವವರು ತಮ್ಮ ಹಣವನ್ನು ಹಿಂಪಡೆಯುವುದಕ್ಕೆ ಸಹಕಾರಿಯಾಗಿದೆ.
ವೀಸಾ ಪ್ರಕ್ರಿಯೆ ಬದಲಾವಣೆ: ಮುಂದಿನ ವರ್ಷದಿಂದ ಅಂದರೆ, ನಾಳೆಯಿಂದ ದೇಶದಲ್ಲಿ ವಲಸೆರಹಿತ ವೀಸಾ ಅರ್ಜಿದಾರರು ತಮ್ಮ ಅಪಾಯಿಂಟ್‌ಮೆಂಟ್‌ಗಳನ್ನು ಒಂದು ಬಾರಿ ಉಚಿತವಾಗಿ ಮರುಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇರಲಿದೆ. ಆದರೆ, ಇದರಲ್ಲಿ ಹೆಚ್ಚಿನ ಬದಲಾವಣೆ ಅಥವಾ ಎರಡನೇ ಬಾರಿ ಅರ್ಜಿ ಸಲ್ಲಿಸುವುದು ಹಾಗೂ ಶುಲ್ಕ ಪಾವತಿಸಬೇಕಾಗುತ್ತದೆ.
H-1B ವೀಸಾ ಪರೀಕ್ಷೆ: H-1B ವೀಸಾ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ ಆಗಲಿದೆ. ಇದರಲ್ಲಿ ಹೊಸ ನಿಯಮಗಳು 2025ನೇ ಸಾಲಿನ ಜನವರಿ 17 ರಿಂದ ಜಾರಿಗೆ ಬರಲಿವೆ. ಈ ಬದಲಾವಣೆಗಳು ಉದ್ಯೋಗ ನೀಡುವವರಿಗೆ ಹೆಚ್ಚಿನ ಆದ್ಯತೆ ಕೊಡಲಿವೆ. ಭಾರತೀಯ F-1 ವೀಸಾ ಹೊಂದಿರುವವರಿಗೆ ಈ ವೀಸಾ ಸುಲಭವಾಗಿ ಸಿಗುವಂತೆ ಮಾಡಲಾಗುತ್ತಿದೆ.
ಷೇರು ಮಾರುಕಟ್ಟೆ: ಜನವರಿ 1ರ 2025 ರಿಂದ, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೆನ್ಸೆಕ್ಸ್ ಉತ್ಪನ್ನಗಳ ಮುಕ್ತಾಯ ದಿನಾಂಕದಲ್ಲಿ ಬದಲಾವಣೆ ಮಾಡಲಿದೆ. ಇದನ್ನು ಶುಕ್ರವಾರದಿಂದ ಮಂಗಳವಾರಕ್ಕೆ ಬದಲಾಯಿಸಲಾಗುತ್ತದೆ. ಈ ಹೊಂದಾಣಿಕೆಯು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಮತ್ತು ವ್ಯಾಪಾರ ಮಾಡುವವರ ಮೇಲೆ ಪರಿಣಾಮ ಬೀರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಇದರೊಂದಿಗೆ ಜಿಎಸ್‌ಟಿ ಹಾಗೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆಯನ್ನು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications