1901ರ ಬಳಿಕ ಎಂಟನೇ ಅತಿ ಹೆಚ್ಚು ಬೆಚ್ಚಗಿನ ವರ್ಷ 2020

ನವದೆಹಲಿ, ಜನವರಿ 05: 1901ರ ಬಳಿಕ 2020 ಎಂಟನೇ ಅತಿ ಹೆಚ್ಚು ಬೆಚ್ಚಗಿನ ವರ್ಷ ಎಂದು ಕರೆಸಿಕೊಂಡಿದೆ. 2016ಕ್ಕಿಂತಲೂ 2020ರಲ್ಲಿ ಅತಿ ಹೆಚ್ಚು ಬೆಚ್ಚಗಿನ ವಾತಾವರಣವಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.

ವರ್ಷದಲ್ಲಿ, ದೇಶದಲ್ಲಿ ಸರಾಸರಿ ಭೂ ಮೇಲ್ಮೈಗಾಳಿಯ ಉಷ್ಣತೆಯು ಸಾಮಾನ್ಯಕ್ಕಿಂತ 0.29 ಡಿಗ್ರಿ ಸೆಲ್ಸಿಯಸ್‌ನಷ್ಟು ಇತ್ತು.

1901 ರಾಷ್ಟ್ರವ್ಯಾಪಿ ದಾಖಲೆಯ ವರ್ಷವಾಗಿದ್ದರಿಂದ 2020 ದಾಖಲೆಯ ಎಂಟನೇ ಅತ್ಯಂತ ಬೆಚ್ಚಗಿನ ವರ್ಷವಾಗಿದೆ. ಆದಾಗ್ಯೂ 2016 ರಲ್ಲಿ +0.71 ಡಿಗ್ರಿ ಸೆಲ್ಸಿಯಸ್ ಭಾರತದಲ್ಲಿ ಕಂಡುಬಂದ ಅತ್ಯಧಿಕ ತಾಪಮಾನಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ.

2020 Was 8th Warmest Year Since 1901 In India, says IMD

ಐದು ಬೆಚ್ಚಗಿನ ವರ್ಷ: 2016(+0.76 ಡಿಗ್ರಿ ಸೆಲ್ಸಿಯಸ್),2009(+0.55ಡಿಗ್ರಿ ಸೆಲ್ಸಿಯಸ್),2017(+0.541 ಡಿಗ್ರಿ ಸೆಲ್ಸಿಯಸ್),2010(+0.539ಡಿಗ್ರಿ ಸೆಲ್ಸಿಯಸ್), 2015(0.42ಡಿಗ್ರಿ ಸೆಲ್ಸಿಯಸ್) ಇತ್ತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಚಳಿಗಾಲದಲ್ಲೇ ಅತ್ಯಂತ ಕಡಿಮೆ ಶೀತ ವಾತವರಣ ದಾಖಲಾಗಿದ್ದು, ಜನ ಜೀವನ ಗಡಗಡ ನಡುಗಿ ಹೋಗಿದೆ.

ಇದೀಗ ಕನಿಷ್ಠ ಉಷ್ಣಾಂಶ 5.5 ಡಿಗ್ರಿಗೆ ಏರಿಕೆಯಾಗಿದೆ, ಆದರೂ ಗಾಳಿಯ ಶುದ್ಧತೆ ಕಡಿಮೆ ಇದೆ. ಈ ಗಾಳಿ ನೇರ ಉಸಿರಾಟಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಲಾಗಿದೆ.

ಸಫ್ಜಜಂಗ್‍ನ ಮಾಪಕ ಕೇಂದ್ರದಲ್ಲಿ 3.9 ಡಿಗ್ರಿ ಸೆಲ್ಸಿಯಸ್ ಶೀತ ವಾತವರಣ ದಾಖಲಾಗಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಅತ್ಯಂತ ಕನಿಷ್ಠ ತಾಪಮಾನ 3.4 ಡಿಗ್ರಿ ದಾಖಲಾಗಿದೆ.

ಬಯಲು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ ಅಥವಾ ಅದಕ್ಕಿಂತ ಕಡಿಮೆ ಇರುವಾಗ ಹವಾಮಾನ ಇಲಾಖೆ ಶೀತಲ ಗಾಳಿಯನ್ನು ಘೋಷಿಸುತ್ತದೆ. ದೆಹಲಿ, ಹರ್ಯಾಣದ ಕೆಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+