ಯುದ್ಧ ವಿಮಾನಗಳ 2 ನಿಮಿಷದ ಡ್ರಿಲ್, ಸಕತ್ ಥ್ರಿಲ್

Posted By:
Subscribe to Oneindia Kannada

ಲಕ್ನೋ, ಅಕ್ಟೋಬರ್ 24: ಉತ್ತರ ಪ್ರದೇಶದ ಲಕ್ನೋ - ಆಗ್ರಾ ಹೆದ್ದಾರಿಯಲ್ಲಿ 20 ಯುದ್ಧ ವಿಮಾನಗಳು ನಡೆಸಿದ ಡ್ರಿಲ್ ಸಕತ್ ಥ್ರಿಲ್ ನೀಡಿದೆ.

ಭಾರತೀಯ ವಾಯುಪಡೆಯ 20 ಯುದ್ಧ ವಿಮಾನಗಳು ಹೆದ್ದಾರಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿ ನಂತರ ಹಾರಾಟ ನಡೆಸಿದವು.

ಸೇನಾ ತುರ್ತು ಸಂದರ್ಭಗಳಲ್ಲಿ ಸೇನಾಪಡೆಯ ರನ್ ವೇ ಗಳಿಗಾಗಿ ಕಾಯದೇ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಯುದ್ಧ ವಿಮಾನಗಳನ್ನು ಇಳಿಸುವ ಮತ್ತು ಟೇಕ್ ಆಫ್ ಮಾಡುವ ಸಂಬಂಧ ಈ ಹಿಂದೆ ಸೇನಾಧಿಕಾರಿಗಳು ಯೋಜನೆ ರೂಪಿಸಿದ್ದರು. ಅದರಂತೆ ಸುಖೋಯ್, ಎಎನ್ 32 ಯುದ್ಧ ವಿಮಾನಗಳು ಸೇರಿದಂತೆ 20 ವಿಮಾನಗಳನ್ನು ಉನ್ನೊ ಜಿಲ್ಲೆ ಹೆದ್ದಾರಿಯಲ್ಲಿ ಯಶಸ್ವಿಯಾಗಿ ಇಳಿಸಲಾಯಿತು.

ಬಂಗರಮೌ ಬಳಿ ಹೆದ್ದಾರಿಯಲ್ಲಿ ಯುದ್ಧ ವಿಮಾನಗಳನ್ನು ಇಳಿಸುವ ತಾಲೀಮು ನಡೆದಿದೆ. ಎಎನ್‌-23 ಟ್ರಾಸ್‌‌ಪೋರ್ಟ್‌, ಮೀರಜ್‌ 2000 ಹಾಗೂ ಸುಕಿಯೋ 30 ಎಂಕೆಐ ಸೇರಿದಂತೆ 20 ಯುದ್ಧ ವಿಮಾನ ಹಾರಾಟದ ಮೂಲಕ ಹೆದ್ದಾರಿಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್‌ ಮಾಡಿಸಲಾಗಿದೆ.

ತ್ವರಿತ ಕಾರ್ಯಾಚರಣೆಗೆ ಅಣಿ

ತ್ವರಿತ ಕಾರ್ಯಾಚರಣೆಗೆ ಅಣಿ

ದೇಶಕ್ಕೆ ಶತ್ರುಗಳ ಬೆದರಿಕೆ ಸಂದರ್ಭದಲ್ಲಿ ತ್ವರಿತ ಕಾರ್ಯಾಚರಣೆಗೆ ಅಣಿಯಾಗುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆ ಈ ತಾಲೀಮು ಹಮ್ಮಿಕೊಂಡಿದೆ.

ತುರ್ತು ಸಮಯದಲ್ಲಿ ಲ್ಯಾಂಡಿಂಗ್‌

ತುರ್ತು ಸಮಯದಲ್ಲಿ ಲ್ಯಾಂಡಿಂಗ್‌

ತುರ್ತು ಸಮಯದಲ್ಲಿ ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್‌ ಮಾಡಲು ರಸ್ತೆಗಳನ್ನು ಬಳಸುವ ಉದ್ದೇಶ ಇದಾಗಿದೆ. ವಾಯುಪಡೆಯ ಈ ಸಾಹಸವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಹೆದ್ದಾರಿಯಲ್ಲಿ ಸೇರಿದ್ದರು.

ಯುದ್ಧ ವಿಮಾನಗಳ ಯಶಸ್ವಿ ತಾಲೀಮು

ಯುದ್ಧ ವಿಮಾನಗಳ ಯಶಸ್ವಿ ತಾಲೀಮು

ಕೆಲ ನಿಮಿಷಗಳ ಕಾಲ ರಸ್ತೆಯ ಮೇಲಿಂದ 15 ರಿಂದ 20 ಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಿದ ವಿಮಾನಗಳು ನಂತರ ಯಶಸ್ವಿಯಾಗಿ ರಸ್ತೆಯ ಮೇಲೆ ಇಳಿದವು. ಇದಕ್ಕಾಗಿ ಕೆಲವು ಗಂಟೆಗಳ ಕಾಲ ಹೆದ್ದಾರಿಯನ್ನು ಬಂದ್‌ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಖೋಯ್ ಯುದ್ಧ ವಿಮಾನ

ಸುಖೋಯ್ ಯುದ್ಧ ವಿಮಾನ

ಸುಖೋಯ್ 30ಎಂಕೆಐ, ಎಎನ್ 32 ಯುದ್ಧ ವಿಮಾನಗಳು, ಸೂಪರ್ ಹರ್ಕ್ಯೂಲಸ್, ಜಾಕ್ವಾಸ್, ಮಿರಾಜ್ ಸೇರಿದಂತೆ 20 ವಿಮಾನಗಳನ್ನು ಉನ್ನೊ ಜಿಲ್ಲೆ ಹೆದ್ದಾರಿಯಲ್ಲಿ ಯಶಸ್ವಿಯಾಗಿ ಇಳಿಸಲಾಯಿತು. 2015ರಲ್ಲಿ ಕೂಡಾ ಇದೇ ರೀತಿ ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸಲಾಯಿತು.

ವಿಮಾನಗಳ ಯಶಸ್ವಿ ತಾಲೀಮು

ವಾಯುಪಡೆಯ ಈ ಸಾಹಸವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಹೆದ್ದಾರಿಯಲ್ಲಿ ಸೇರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Air Force conducted a touchdown exercise on the Agra Expressway near Bangarmau in Unnao district about 65 km from Uttar Pradesh capital Lucknow on Tuesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ