ಉಗ್ರರು ಒಳನುಳಲು ತೋಡಿದ್ದ 20 ಅಡಿ ಸುರಂಗ ಪತ್ತೆ ಹಚ್ಚಿದ ಬಿಎಸ್ ಎಫ್

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada
ಜಮ್ಮು-ಕಾಶ್ಮೀರ, ಫೆಬ್ರವರಿ 14: ಪಾಕಿಸ್ತಾನದಿಂದ ಉಗ್ರರು ಭಾರತದೊಳಗೆ ನುಸುಳಲು ತೋಡಿದ್ದ ಎರಡೂವರೆ ಅಡಿ ಅಗಲದ, 20 ಮೀಟರ್ ಉದ್ದದ ಸುರಂಗವೊಂದನ್ನು ಗಡಿ ಭದ್ರತಾ ಪಡೆಯವರು ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪತ್ತೆ ಹಚ್ಚಿದ್ದಾರೆ. ಸಾಂಬಾದ ರಾಮ್ ಘರ್ ವಲಯದಲ್ಲಿ ಸೋಮವಾರ ಸುರಂಗ ಪತ್ತೆಯಾಗಿದೆ ಎಂದು ಬಿಎಸ್ ಎಫ್ ಅಧಿಕಾರಿ ಧರ್ಮೇಂದ್ರ ಪಾರೀಕ್ ತಿಳಿಸಿದ್ದಾರೆ.

ಸುರಂಗವು ಇನ್ನೂ ಪೂರ್ತಿಯಾಗಿಲ್ಲ, ಬೇಲಿಯವರೆಗೆ ತಲುಪುವ ಮುಂಚೆಯೇ ಅದನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ. ಗಡಿಯ ಬೇಲಿ ಕೆಳಭಾಗದಲ್ಲಿ ಸುರಂಗ ಪತ್ತೆಯಾಗಿದ್ದು, ಅಂತರರಾಷ್ಟ್ರೀಯ ಗಡಿ ರೇಖೆಯ 200 ಕಿ.ಮೀ. ದೂರದಲ್ಲಿ ಬಿಎಸ್ ಎಫ್ ಯೋಧರು ತಾಲೀಮು ನಡೆಸುವ ವೇಳೆ ಸುರಂಗ ತೋಡಿರುವುದು ಗೊತ್ತಾಗಿದೆ.[ಜಮ್ಮು ಕಾಶ್ಮೀರ ಬಂಡಿಪೋರಾ ಎನ್ಕೌಂಟರ್, 3 ಸೈನಿಕರು ಹುತಾತ್ಮ]

20-Foot Tunnel From Pakistan Found By BSF

ಗಡಿ ನಿಯಂತ್ರಣ ರೇಖೆ ಬಳಿ ಸರ್ವೇಲೆನ್ಸ್ ಹಾಕಿರುವುದರಿಂದ ಸುಲಭಕ್ಕೆ ಭಾರತದೊಳಕ್ಕೆ ನುಸುಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಇಂಥ ಸುರಂಗಗಳನ್ನು ತೋಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿ ಭೂಮಿಯ ಕೆಳಭಾಗದಲ್ಲಿ ತೋಡಿದ ಸುರಂಗಗಳನ್ನು ಪತ್ತೆ ಹಚ್ಚಲು ಯಾವುದೇ ಸಾಧನಗಳಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.[ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ]

"ನಾವು ತನಿಖೆ ನಡೆಸಿದಾಗ ಸುರಂಗದ ನಿರ್ಮಾಣ ಇನ್ನೂ ಆಗುತ್ತಿರುವುದು ಪತ್ತೆಯಾಯಿತು. ಇದರಿಂದ ಭವಿಷ್ಯದಲ್ಲಿ ದೇಶದೊಳಗೆ ನುಗ್ಗಿ ಬರುವ ಉಗ್ರರ ಪ್ರಯತ್ನಕ್ಕೆ ಈಗಲೇ ತಡೆಯೊಡ್ಡಿದಂತಾಯಿತು" ಎಂದು ಬಿಎಸ್ ಎಫ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 20-metre tunnel dug from Pakistan to help terrorists infiltrate into India has been found by the Border Security Force near the India-Pakistan International Border.
Please Wait while comments are loading...