ಗಡಿಯಲ್ಲಿ ಇಬ್ಬರು ಯೋಧರನ್ನು ಕೊಂದ ಪಾಕಿಸ್ತಾನ ಸೇನೆ
ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಗುಂಡಿನ ಚಕಮಕಿ. ಪಾಕಿಸ್ತಾನ ಯೋಧರಿಂದ ಅಪ್ರಚೋದಿತ ಗುಂಡಿನ ದಾಳಿ. ಈ ದಾಳಿಗೆ ಇಬ್ಬರು ಭಾರತೀಯ ಯೋಧರ ಸಾವು.
ಶ್ರೀನಗರ, ಜುಲೈ 12: ಜಮ್ಮು ಕಾಶ್ಮೀರದ ಬಳಿಯ ಗಡಿ ನಿಯಂತ್ರಣ ರೇಖೆಯ ಬಳಿಯಲ್ಲಿರುವ ಕೇರಾನ್ ಪ್ರಾಂತ್ಯದಲ್ಲಿ ಪಾಕಿಸ್ತಾನ ಯೋಧರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಯೋಧರು ಬಲಿಯಾಗಿದ್ದಾರೆ. ಯೋಧರ ಹೆಸರು ಹಾಗೂ ಇನ್ನಿತರ ಮಾಹಿತಿಗಳು ತಿಳಿದುಬಂದಿಲ್ಲ.
ಪಾಕಿಸ್ತಾನದ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರೂ ಗುಂಡಿನ ದಾಳಿ ನಡೆಸುವಾಗ ಇಬ್ಬರು ಯೋಧರು ಮೃತಪಟ್ಟಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನವು ಅನೇಕ ಬಾರಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇತ್ತೀಚೆಗಿನ ಇಂಥ ಘಟನೆಗಳಿಂದ, ಬುಧವಾರ (ಜುಲೈ 12) ಮೃತಪಟ್ಟ ಇಬ್ಬರೂ ಸೇರಿದಂತೆ ಮೂವರು ಯೋಧರು ಸಾವಿಗೀಡಾಗಿದ್ದಾರೆ. 12 ಯೋಧರು ಗಾಯಗೊಂಡಿದ್ದಾರೆ.












Click it and Unblock the Notifications