ದೆಹಲಿ ಕೃಷಿ ಪ್ರತಿಭಟನೆ ಹೈಲೇಟ್ ಮಾಡಿದ್ದ 2 ಟ್ವಿಟ್ಟರ್ ಖಾತೆಗಳಿಗೆ ನಿರ್ಬಂಧ

ನವದೆಹಲಿ, ಜೂನ್ 14: ಕೇಂದ್ರ ಸರ್ಕಾರದ ವಿರುದ್ಧ ರೈತರ ಹೋರಾಟಗಳ ವರದಿ ಪಸರಿಸಿದ್ದ, ರೈತರ ಅಳಲು ನಿರೂಪಿಸುವಲ್ಲಿ ಸಹಾಯವಾಗಿದ್ದ ಎರಡು ಪ್ರಮುಖ ಟ್ವಿಟ್ಟರ್ ಖಾಗೆಗಳನ್ನು ಕಳದ ಒಂದು ವರ್ಷದಿಂದ ತಡೆ ಹಿಡಿಯಲಾಗಿದೆ. ಇದರ ಹಿಂದೆ ಬಿಜೆಪಿ ಕೈವಾಡವಿರುವ ಬಗ್ಗೆ ಅನುಮಾನವು ವ್ಯಕ್ತವಾಗುತ್ತಿದೆ.

ಕೃಷಿ ಪ್ರತಿಭಟನೆಗೆ ಸಂಬಂಧಿಸಿದ ಎರಡು ಪ್ರಮುಖ ಟ್ವಿಟರ್ ಖಾತೆಗಳಾದ @Tractor2twitr ಮತ್ತೊಂದು @kisanektamorcha (ಈ ಕಿಸಾನ್ ಏಕ್ತಾ ಮೋರ್ಚಾದ ಅಧಿಕೃತ ಖಾತೆ). ಇವೆರಡು ಕಳೆದ ಒಂದು ವರ್ಷದಿಂದ ಚಾಲ್ತಿಯಲ್ಲಿದಂತೆ ಮಾಡಲಾಗಿದೆ.

2 prominent Twitter accounts

ಕೇಂದ್ರ ಸರ್ಕಾರದ ಆಡಳಿತ ವಿರುದ್ಧ ದೆಹಲಿಯಲ್ಲಿ ಸಾವಿರಾರು ರೈತರ ಹೋರಾಟವನ್ನು ನಿರೂಪಣೆ ಮಾಡುವಲ್ಲಿ, ಪ್ರತಿಭಟನೆಯ ಮುಖ್ಯ ಅಂಶಗಳು, ಮುಂದಿನ ನಡೆ ಸೇರಿದಂತೆ ಎಲ್ಲ ಚಟುವಟಿಕೆಗಳ ಬಗ್ಗೆ ಇವೆರಡು ಟ್ವಿಟರ್ ಖಾತೆಗಳು ವರದಿ ಬಿತ್ತರಿಸುತ್ತಿದ್ದವು. ಮೂಲಗಳ ಪ್ರಕಾರ ಕಳೆದ 2022ರ ಜುಲೈನಲ್ಲಿ ಈ ಎರಡೂ ಖಾತೆಗಳನ್ನು ತಡೆಹಿಡಿಯಿದಾಗ, @Tractor2twitr ಖಾತೆಗೆ 53,000 ಅನುಯಾಯಿ (followers) ಇದ್ದರೆ, @kisanektamorcha ಟ್ವಿಟ್ಟರ್ ಖಾತೆಯು 4.68 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿತ್ತು.

ಖಾತೆ ತಡೆದ ಹಿಡಿರುವ ಸಂಬಂಧ @Tractor2twitr ಖಾತೆಯ ಪರ್ಯಾಯ ಖಾತೆಯಾದ @Tractor2twitr_P ಖಾತೆಯಲ್ಲಿ ಮೊನ್ನೆ ಸೋಮವಾರ ಟ್ವೀಟ್ ಮಾಡಲಾಗಿದೆ. ಮೇಲಿನ ಎರಡು ಖಾತೆ ಸೇರಿದಂತೆ ಕೆಲವು ಟ್ವಿಟ್ಟರ್ ಖಾತೆಗಳನ್ನು ತಡೆ ಹಿಡಿಯಲಾಗಿದೆ.

ಕೇಂದ್ರದ ವಿರುದ್ಧ ಕೋರ್ಟ್‌ ಮೆಟ್ಟಿಲೇರಲಿರುವ ಟ್ವಿಟರ್

ಭಾರತದಲ್ಲಿ @Tractor2twitr, @kisanektamorcha ಮತ್ತು ಇತರ ಹಲವು ಖಾತೆಗಳಿಗೆ ನಿರ್ಬಂಧ ಹೇರಲಾಗಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟ್ವಿಟ್ಟರ್ ಕಾನೂನು ಮೊಕದ್ದಮೆ ಹೂಡಲಿದೆ. ಈ ಹಿಂದೆ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಟ್ವಿಟರ್ ಭಾರತ ಸರ್ಕಾರದಿಂದ ಬೆದರಿಕೆ ಎದುರಿಸಿತ್ತು ಎಂದು ಟ್ವಿಟರ್‌ನ ಸಹ-ಸಂಸ್ಥಾಪಕ ಜ್ಯಾಕ್ ಡೋರ್ಸೆ ಆರೋಪಿಸಿದ್ದಾರೆ.

ವಾಸ್ತವವಾಗಿ @Tractor2twitr ವಿಶೇಷ ಅಭಿಯಾನ ನಡೆಸುವ ಮೂಲಕ ಪಂಜಾಬಿ ನೆಟ್ಟಿಗರನ್ನು ಟ್ವಿಟರ್ ನತ್ತ ಸೆಳೆಯುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತ್ತು. ಇದು ಕೇಂದ್ರಕ್ಕೆ ಮತ್ತಷ್ಟು ತೊಂದರೆ ತಂದೊಡ್ಡಿತು. ಏಕೆಂದರೆ ಅಲ್ಲಿಯವರೆಗೆ ಪಂಜಾಬಿಗಳಿಗೆ ಟ್ವಿಟರ್‌ಗಿಂತ ಫೇಸ್‌ಬುಕ್‌ ಕಡೆಗೆ ಹೆಚ್ಚು ಆಸಕ್ತರಾಗಿದ್ದರು.

ಹೀಗೆ ಇವೆರೆಡು ಟ್ವಿಟ್ಟರ್ ಹ್ಯಾಂಡಲ್‌ಗಳು ರೈತರ ಹೋರಾಟ, ಕೇಂದ್ರದ ನಡೆ ಕುರಿತು ಮಾಡಿದ ವರದಿ ಹೆಚ್ಚು ಚರ್ಚೆಗೆ ಬರಲಾರಂಭಿಸಿತು. ರೈತರ ಪರವಾದ ನಿರೂಪಣೆಗೆ ಹೆಚ್ಚು ಆದ್ಯತೆ ನೀಡಿತು. ಕಿಸಾನ್ ಏಕ್ತಾ ಮೋರ್ಚಾ ತನ್ನ ಅಧಿಕೃತ ಹ್ಯಾಂಡಲ್ ಅನ್ನು ಪ್ರಾರಂಭಿಸಿ ರೈತರ ಕುರಿತು ಅಧಿಕೃತ ಮಾಹಿತಿ ಬಿತ್ತರಿಸಲು ಶುರು ಮಾಡಿತು.

ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದ ಟ್ವಿಟ್ಟರ್‌ ಖಾತೆಗಳು

ಲಖಿಂಪುರ ಖೇರಿಯಲ್ಲಿ ರೈತರ ವಿರುದ್ಧ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್‌ಗೆ ಸೇರಿದ ವಿಡಿಯೋ ತುಣಕನ್ನು ಸಾಕಷ್ಟು ಜನರಿಗೆ ತಲುಪಿಸುವಲ್ಲಿ ಈ @Tractor2twitr ಹ್ಯಾಂಡರ್ ಯಶಸ್ವಿಯಾಯಿತು. ಇವೆರಡು ಖಾತೆಗಳ ಜೊತೆಗೆ ಡಯಾಸ್ಪೊರಾ, ಪ್ರಮುಖ ಪಂಜಾಬಿ ಗಾಯಕರು ಮತ್ತು ನಟರು ಸೇರಿದಂತೆ ಹಲವಾರು ಪಂಜಾಬಿ ನೆಟ್ಟಿಗರು ಒಟ್ಟಾಗಿ ರೈತರ ಚಟುವಟಿಕೆಗಳತ್ತ ಆಸಕ್ತಿ ವಹಿಸಿದರು.

ರೈತರ ಪರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಟ್ವಿಟ್ಟರ್ ಖಾತೆಗಳಲ್ಲಿ ಪ್ರಶ್ನೆಗಳು ಏಳಲು ಶುರುವಾದವು. ಕೆಲವು ಸಂದರ್ಭಗಳಲ್ಲಿ ಟ್ವಿಟ್ಟರ್‌ನಲ್ಲಿನ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಸೃಷ್ಟಿ ಆಯಿತು. ನೆಟ್ಟಿಗರನ್ನು ಒಂದೂಗೂಡಿಸುವಷ್ಟರ ಮಟ್ಟಿಗೆ ಪ್ರಭಾವ ಬೀರಲಾರಂಭಿಸಿತು. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಕೃಷಿ ಚಳುವಳಿಯನ್ನು ಬೆಂಬಲಿಸುವಲ್ಲಿ ಈ ಟ್ವಿಟ್ಟರ್ ಖಾತೆಗಳು ಪ್ರಮುಖ ಪಾತ್ರ ವಹಿಸಿದವು.

ಕೇವಲ ರೈತರ ಸಮಸ್ಯೆಗಳ ಕುರಿತಾದ ಪೋಸ್ಟಗಳನ್ನು ಮಾಡುವುದರ ಜೊತೆಗೆ ಅರಣ್ಯ ರಕ್ಷಣೆ, ಮತ್ತೇವಾರ ಕೈಗಾರಿಕಾ ಯೋಜನೆಯನ್ನು ವಿರೋಧಿಸುವ ಸಾರ್ವಜನಿಕ ಚಳವಳಿಯ ಕುರಿತು ಹಾಗೂ ಝಿರಾ ವಿರುದ್ಧದ ಆಂದೋಲನಕ್ಕೆ ಹೆಚ್ಚು ಹೆಚ್ಚು ಪ್ರಸಾರಗೊಳ್ಳುವಂತೆ ಮಾಡುವಲ್ಲಿ ಟ್ವೀಟ್ ಪೋಸ್ಟ್‌ಗಳು ಹೆಚ್ಚು ಸಹಕಾರಿಯಾಗಿವೆ. ಹೀಗೆ ಸರ್ಕಾರ ನಡೆ ಖಂಡಿಸಿರುವ, ಪ್ರತಿಭಟನೆಗೆ ಕಾರಣಗಳನ್ನು ಪ್ರಸಾರ/ಪೋಸ್ಟ್ ಮಾಡಿದ ಟ್ವಿಟ್ಟರ್‌ ಹ್ಯಾಂಡಲ್‌ಗಳಿಗೆ ವರ್ಷದಿಂದ ನಿರ್ಬಂಧ ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+