ಉತ್ತರ ಪ್ರದೇಶ: ತ್ರಿವಳಿ ತಲಾಖ್ ನೀಡಿದ ವ್ಯಕ್ತಿಗೆ ಎರಡು ಲಕ್ಷ ರು. ದಂಡ
ಲಕ್ನೋ, ಜೂನ್ 12: ತನ್ನ 22 ವರ್ಷದ ಪತ್ನಿಗೆ ಟ್ರಿಪಲ್ ತಲಾಖ್ ನೀಡಿದ್ದ ವ್ಯಕ್ತಿಯೊಬ್ಬನಿಗೆ ಸಂಭಾಲದ ರೈಸತಿ ಪ್ರದೇಶದಲ್ಲಿರುವ ಮದರ್ಸಾ ಖಲೀಲ್ ಉಲ್ ಉಲೂಮ್ ತುರ್ಕ ಸಮುದಾಯದ ಪಂಚಾಯಿತಿ 2 ಲಕ್ಷ ರು. ದಂಡ ವಿಧಿಸಿದೆ.
ಆದರೆ, ವ್ಯಕ್ತಿಯ ಮಾಹಿತಿಯನ್ನು ಪಂಚಾಯ್ತಿ ಬಹಿರಂಗಗೊಳಿಸಿಲ್ಲ.
45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ 22 ವರ್ಷದ ಯುವತಿಯೊಬ್ಬಳ ಜತೆಗೆ ಇತ್ತೀಚೆಗೆ ವಿವಾಹವಾಗಿದ್ದ. ಆದರೆ, ಅವರ ನಡುವೆ ಭಾರೀ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ, ಆಕೆಗೆ ಮೂರು ಬಾರಿ ತಲಾಖ್ ಹೇಳುವ ಮೂಲಕ ಪತಿ ಆಕೆಗೆ ವಿಚ್ಛೇದನ ನೀಡಿದ್ದ.

ಇದರ ವಿರುದ್ಧ ಆ ಯುವತಿಯ ಕುಟುಂಬ ತುರ್ಕ ಪಂಚಾಯ್ತಿಗೆ ದೂರು ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪಂಚಾಯ್ತಿ, ತ್ರಿವಳಿ ತಲಾಖ್ ನೀಡಿದ ವ್ಯಕ್ತಿಗೆ ಎರಡೂವರೆ ಲಕ್ಷ ರು. ದಂಡ ವಿಧಿಸಿರುವುದಲ್ಲದೆ, ಮದುವೆಯ ವೇಳೆ ಯುವತಿಯ ಮನೆಯಿಂದ ವಸೂಲಿ ಮಾಡಿಕೊಂಡಿದ್ದ ವರದಕ್ಷಿಣೆಯನ್ನು ಹಿಂದಿರುಗಿಸುವಂತೆ ವ್ಯಕ್ತಿಗೆ ಸೂಚಿಸಿದೆ.












Click it and Unblock the Notifications