ಮಣಿಪುರದಲ್ಲಿ ಬಾಂಬ್ ಸ್ಫೋಟ: ಇಬ್ಬರು ಸೈನಿಕರ ಸಾವು
ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಂತಿರುವ ಮೊರೆಹ್ ಎಂಬ ಪಟ್ಟಣದಲ್ಲಿ ಜೂನ್ 3ರ ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ ನಡೆದಿರುವ ಸ್ಫೋಟದಲ್ಲಿ ಇಬ್ಬರು ಸೈನಿಕರು ಮೃತರಾಗಿದ್ದಾರೆ.
ಇಂಫಾಲ್ (ಮಣಿಪುರ), ಜೂನ್ 3: ಬಾಂಗ್ಲಾದೇಶಕ್ಕೆ ಹೊಂದಿಕೊಂಡಂತಿರುವ ಮಣಿಪುರ ರಾಜ್ಯದ ಮೊರೇ ಎಂಬ ಪಟ್ಟಣದಲ್ಲಿ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ಮಧ್ಯಾಹ್ನ ಸುಮಾರು 2: 30ಕ್ಕೆ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ನಾಲ್ವರು ಗಾಯಗೊಂಡಿರುವಾದಿಗೆ ಪ್ರಾಥಮಿಕ ವರದಿಗಳು ಹೇಳಿವೆ.

ಕೆಲವೇ ದಿನಗಳ ಹಿಂದೆ ಈ ಪ್ರಾಂತ್ಯದಲ್ಲಿ ಆಗಿದ್ದ ಸ್ಫೋಟದಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು. ಇದೀಗ, ಇಲ್ಲಿ ಮತ್ತೊಂದು ಸ್ಫೋಟ ನಡೆದಿರುವುದು ಇಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ.












Click it and Unblock the Notifications