ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳಕ್ಕೆ ಮುಂಗಾರು 2 ದಿನ ತಡ, ಕರ್ನಾಟಕಕ್ಕೆ ಯಾವಾಗ?

|
Google Oneindia Kannada News

ಬೆಂಗಳೂರು, ಜೂನ್ 6: ಭಾರತೀಯ ಹವಾಮಾನ ಇಲಾಖೆ ಈ ಹಿಂದೆ ನೀಡಿದ್ದ ಮಾಹಿತಿ ಪ್ರಕಾರ ಇಂದು(ಜೂನ್ 6) ಮುಂಗಾರು ಕೇರಳವನ್ನು ಪ್ರವೇಶಿಸಬೇಕಿತ್ತು. ಆದರೆ ಎರಡು ದಿನ ತಡವಾಗಿ ಪ್ರವೇಶಿಸಲಿದೆ ಎನ್ನುವ ಮಾಹಿತಿಯನ್ನು ಈಗ ನೀಡಿದೆ.

ಅದಕ್ಕೂ ಮೊದಲು ಜೂನ್ 1 ರಂದೇ ಮುಂಗಾರು ಪ್ರವೇಶವಾಗುತ್ತದೆ ಎಂದು ಹೇಳಲಾಗಿತ್ತು ಬಳಿಕ ಐದು ದಿನ ತಡವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು ಈಗ ಇನ್ನೂ ಎರಡು ದಿನ ತಡವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರ್ನಾಟಕದಲ್ಲಿ ಗುಡುಗು, ಮಿಂಚು ಸಹಿತ ಮಳೆ, ಇನ್ನು 3-4 ದಿನ ಕರ್ನಾಟಕದಲ್ಲಿ ಗುಡುಗು, ಮಿಂಚು ಸಹಿತ ಮಳೆ, ಇನ್ನು 3-4 ದಿನ

ಈ ಬಾರಿಯ ಮುಂಗಾರಿಗೂ 'ಎಲ್ ನಿನೊ' ಚಂಡಮಾರುತ ಅಡ್ಡಗಾಲು ಹಾಕಲಿದ್ದು ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ವಾಯುವ್ಯ ಮತ್ತು ಮಧ್ಯ ಭಾಗಗಳಲ್ಲಿ ಮಳೆ ಕಡಿಮೆಯಾಗಲಿದೆ.

ದಕ್ಷಿಣ ಭಾರತ, ಮಧ್ಯ ಭಾರತಕ್ಕೆ ಏಳು ದಿನ ತಡ

ದಕ್ಷಿಣ ಭಾರತ, ಮಧ್ಯ ಭಾರತಕ್ಕೆ ಏಳು ದಿನ ತಡ

ದಕ್ಷಿಣ ಭಾರತ ಹಾಗೂ ಮಧ್ಯ ಭಾರತಕ್ಕೆ ಮುಂಗಾರು ಏಳು ದಿನ ತಡವಾಗಿ ಪ್ರವೇಸಿಸಲಿದೆ. ಆದರೆ ಮಧ್ಯ ಭಾರತಕ್ಕೆ ಇದು ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ಬೇಗ ಮುಂಗಾರು ಪ್ರವೇಶವಾಗಲಿದೆ. ಸಾಮಾನ್ಯ ಮುಂಗಾರಿಗಿಂತಲೂ ಕಡಿಮೆ ಪ್ರಮಾಣದ ಮಳೆಯಾಗಲಿದೆ ಎಂದು ತಿಳಿದುಬಂದಿದೆ.

ಜೂನ್ 10ಕ್ಕೆ ಈಶಾನ್ಯ ಭಾರತಕ್ಕೆ ಮುಂಗಾರು ಲಗ್ಗೆ

ಜೂನ್ 10ಕ್ಕೆ ಈಶಾನ್ಯ ಭಾರತಕ್ಕೆ ಮುಂಗಾರು ಲಗ್ಗೆ

ಮುಂಗಾರು ಕೇರಳವನ್ನು ಪ್ರವೇಶಿಸಿ ಒಂದೆರೆಡು ದಿನದಗಳಲ್ಲೇ ಈಶಾನ್ಯ ಭಾರತವನ್ನು ಪ್ರವೇಶಿಸಲಿದೆ. ಖಾಸಗಿ ಹವಾಮಾನ ಇಲಾಖೆ ಸ್ಕೈಮೆಟ್ ಈ ಹಿಂದೆ ಜೂನ್ 4 ರಂದು ಮುಂಗಾರು ಪ್ರವೇಶವಾಗುವುದಾಗಿ ತಿಳಿಸಿತ್ತು ಇದೀಗ ಜೂನ್ 7ರಂದು ಕೇರಳಕ್ಕೆ ಮುಂಗಾರು ಆಗಮಿಸಲಿದೆ ಎಂದು ಮಾಹಿತಿ ನೀಡಿದೆ.

ಬೆಂಗಳೂರಲ್ಲಿ ಗುಡುಗು-ಮಿಂಚು ಸಹಿತ ಜೋರು ಮಳೆಬೆಂಗಳೂರಲ್ಲಿ ಗುಡುಗು-ಮಿಂಚು ಸಹಿತ ಜೋರು ಮಳೆ

ಅಂಡಮಾನ್ ನಿಕೋಬಾರ್‌ಗೆ ಮುಂಗಾರು ಪ್ರವೇಶಿಸಿದೆ

ಅಂಡಮಾನ್ ನಿಕೋಬಾರ್‌ಗೆ ಮುಂಗಾರು ಪ್ರವೇಶಿಸಿದೆ

ಭಾರತೀಯ ಹವಾಮಾನ ಇಲಾಖೆ ನೀಡಿದ್ದ ಮಾಹಿತಿಯಂತೆಯೇ ಮೇ 18ಕ್ಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪವನ್ನು ಮುಂಗಾರು ಪ್ರವೇಶಿಸಿದೆ. ಶನಿವಾರದ ನಂತರವೇ ಕೇರಳದಲ್ಲಿ ಮಳೆಯಾಗಲಿದೆ. ಎಲ್‌ನಿನೋ ಕಾರಣದಿಂದಲಾಗಿ ಜೂನ್ ಹಾಗೂ ಜುಲೈನಲ್ಲಿ ಮಳೆಯು ಕಡಿಮೆಯಾಗಲಿದೆ.

ಕರ್ನಾಟಕಕ್ಕೆ ಮುಂಗಾರು ಪ್ರವೇಶ ಯಾವಾಗ

ಕರ್ನಾಟಕಕ್ಕೆ ಮುಂಗಾರು ಪ್ರವೇಶ ಯಾವಾಗ

ಕೇರಳಕ್ಕೆ ಮುಂಗಾರುಪ್ರವೇಶಿಸಿ ಎರಡು ದಿನಗಳ ಬಳಿಕ ಕರ್ನಾಟಕವನ್ನು ಪ್ರವೇಸಿಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂದರೆ ಜೂನ್ 8ರಂದು ಮುಂಗಾರು ಕೇರಳವನ್ನು ಪ್ರವೇಶಿಸಿದರೆ ಜೂನ್ 10 ಅಥವಾ 11ಕ್ಕೆ ಮುಂಗಾರು ಕರ್ನಾಟಕವನ್ನು ಪ್ರವೇಸಿಲಿದೆ. ಆದರೆ ಅದಕ್ಕೂ ಮುನ್ನ ಬೆಂಗಳೂರು ಸೇರಿದಂತೆ ಹಲವೆಡೆ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬರುತ್ತಿದೆ.

English summary
Two days late Monsoon may Hit Kerala , which expected to arrive over Kerala two days later Than its Normal Date June 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X