ಸೇನೆಯನ್ನು ಟೀಕಿಸಿದ್ದ ಅಜಂ ಖಾನ್ ವಿರುದ್ಧ ಪ್ರಕರಣ ದಾಖಲು
ರಾಂಪುರ(ಉತ್ತರ ಪ್ರದೇಶ), ಜುಲೈ 1: ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಜಂ ಖಾನ್ ಅವರ ವಿರುದ್ಧ ಒತ್ತರ ಪ್ರದೇಶದ ಎರಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇತ್ತೀಚೆಗಷ್ಟೆ ಸೇನೆಯ ವಿರುದ್ಧ ಮಾತನಾಡಿದ್ದ ಅಜಂ ಖಾನ್, "ಕಾಶ್ಮೀರ, ಅಸ್ಸಾಂ, ಜಾರ್ಖಂಡ್ ಗಳಲ್ಲಿ ಸೈನಿಕರ ಮೇಲೆ ಮಹಿಳೆಯರು ದಾಳಿ ನಡೆಸಿದ್ದಾರೆ. ಮಾತ್ರವಲ್ಲ ಅವರ ಗುಪ್ತಾಂಗಳನ್ನು ಕತ್ತರಿಸಿದ್ದಾರೆ. ಸತ್ಯ ಏನೆಂದರೆ ಮಹಿಳೆಯರು ಅನಿವಾರ್ಯವಾಗಿ ಸೇನೆಯ ಅತ್ಯಾಚಾರಿಗಳ ವಿರುದ್ಧ ತಿರುಗಿ ಬೀಳಬೇಕಾಗಿದೆ. ಇದು ಹಿಂದೂಸ್ಥಾನ ತಲೆ ತಗ್ಗಿಸುವ ವಿಚಾರ' ಎಂದಿದ್ದರು.
ಸೈನಿಕರ ವಿರುದ್ಧ ಇಂಥ ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಅಜಂ ಖಾನ್ ವಿರುದ್ಧ ದೇಶದಾದ್ಯಂತ ಟೀಕೆ ವ್ಯಕ್ತವಾಗಿತ್ತು. ಅಜಂ ಖಾನ್, ಭಾರತದಲ್ಲಲ್ಲದೆ ಬೇರೆ ಮುಸ್ಲಿಂ ದೇಶದಲ್ಲಿದ್ದಿದ್ದರೆ ಇಷ್ಟರಲ್ಲೇ ಅವರ ತಲೆಕಡಿಯಲಾಗುತ್ತಿತ್ತು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಹ ಪ್ರತಿಕ್ರಿಯಿಸಿದ್ದರು.

ಇದೀಗ ಖಾನ್ ವಿರುದ್ಧ ಉತ್ತರ ಪ್ರದೇಶದ ರಾಂಪುರ ಮತ್ತು ಹಜ್ರತ್ ಜಂಗ್ ನಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಇಂಥ ಬೇಜವಾಬ್ದಾರಿ ಹೇಳಿಕೆ ನೀಡಿದ್ದರ ಬಗ್ಗೆ ಪೊಲೀಸರು ಎಂಥ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications