ಬಿಹಾರದಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ: 2 ಸಾವು
ಪಾಟ್ನಾ, ನವೆಂಬರ್ 25: ಅಪರಿಚಿತ ದುಷ್ಕರ್ಮಿಗಳು ಇಬ್ಬರು ವ್ಯಾಪಾರಿಗಳ ಮೇಲೆ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಇಬ್ಬರೂ ವ್ಯಾಪಾರಿಗಳು ಹತ್ಯೆಗೀಡಾದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ರಿಟೇಲರ್ ಬಳಿಯಿಂದ ಹಣ ಪಡೆಯಲು ಬಸ್ ಸ್ಟ್ಯಾಂಡ್ ವೊಂದರ ಬಳಿ ಹೋಗುತ್ತಿದ್ದ ಇಬ್ಬರು ವ್ಯಾಪಾರಿಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಓರ್ವ ಮೃತನಾಗಿದ್ದರೆ ಇನ್ನೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಇಲ್ಲಿನ ಮರ್ಹೌರಾ ಎಂಬ ಪ್ರದೇಶದಲ್ಲಿ 45 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.
ಎರಡೂ ಘಟನೆಯಲ್ಲಿ ಮೃತರಾದವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications