1.45 ಕೋಟಿಗೆ ತಲುಪಿದ ದೇಶದ ಕೋವಿಡ್ ಪ್ರಕರಣಗಳ ಸಂಖ್ಯೆ

ನವದೆಹಲಿ, ಏಪ್ರಿಲ್ 17: ದೇಶದಲ್ಲಿ ಶನಿವಾರ 2,34,692 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದು ದೇಶದಲ್ಲಿ ಈವರೆಗೆ ದಾಖಲಾದ ಅತ್ಯಧಿಕ ದೈನಂದಿನ ಪ್ರಕರಣವಾಗಿದೆ. ಸತತ ಮೂರನೇ ದಿನ ದೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ದೇಶದ ಒಟ್ಟಾರೆ ಕೋವಿಡ್ ಸಂಖ್ಯೆ 1.45 ಕೋಟಿ ದಾಟಿದೆ.

ಕಳೆದ 24 ಗಂಟೆಗಳಲ್ಲಿ 1,341 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಹಾಗೆಯೇ 1,23,354 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ದೇಶದಲ್ಲಿನ ಒಟ್ಟು ಕೋವಿಡ್ ಪ್ರಕರಣ 1,45,26,609ಕ್ಕೆ ಏರಿಕೆಯಾಗಿದೆ. ಇದುವರೆಗೂ ಒಟ್ಟು 1,26,71,220 ಮಂದಿ ಚೇತರಿಸಿಕೊಂಡಿದ್ದಾರೆ.

ದೇಶದಲ್ಲಿ ಶನಿವಾರದ ವೇಳೆಗೆ 16,79,740 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಇದುವರೆಗೂ ಮಹಾಮಾರಿಗೆ 1,75,649 ಮಂದಿ ಬಲಿಯಾಗಿದ್ದಾರೆ. ಇದರ ಜತೆಗೆ ಲಸಿಕೆ ಅಭಿಯಾನವೂ ನಡೆಯುತ್ತಿದ್ದು, ಒಟ್ಟು 11,99,37,641 ಡೋಸ್ ಲಸಿಕೆಗಳನ್ನು ನೀಡಲಾಗಿದೆ.

2.34 New Coronavirus Cases, 1341 Deaths And 123354 Discharged In Last 24 Hours

ಶನಿವಾರ ವರದಿಯಾದ ಪ್ರಕರಣಗಳಲ್ಲಿ ಮಹಾರಾಷ್ಟ್ರ ರಾಜ್ಯವೊಂದೇ ಶೇ 27.15ರಷ್ಟು ಪಾಲನ್ನು ಹೊಂದಿದೆ. ಐದು ರಾಜ್ಯಗಳಿಂದ ಶೇ 59.79ರಷ್ಟು ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಈವರೆಗಿನ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 63,729 ಮಂದಿಗೆ ಸೋಂಕು ತಗುಲಿದ್ದರೆ, ದೆಹಲಿಯಲ್ಲಿ 19,486 ಪ್ರಕರಣಗಳು ವರದಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+