Get Updates
Get notified of breaking news, exclusive insights, and must-see stories!

ಸಿಖ್ ಹತ್ಯಾಕಾಂಡ ಕೇಸ್ ರೀಓಪನ್: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್‌ಗೆ ಸಂಕಷ್ಟ

ನವದೆಹಲಿ, ಜೂನ್ 15: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. 1984ರ ಸಿಖ್ ಹತ್ಯಾಕಾಂಡದ ಹಳೆಯ ಮುಚ್ಚಿದ ಪ್ರಕರಣಗಳನ್ನು ಮತ್ತೆ ತೆರೆಯಲು ಗೃಹ ಸಚಿವಾಲಯ ಅನುಮತಿ ನೀಡಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ವಿರುದ್ಧದ 1984ರ ಸಿಖ್ ವಿರೋಧಿ ಗಲಭೆಯ ಮುಚ್ಚಿದ ಕೇಸುಗಳನ್ನು ಪುನಃ ತೆರೆದು ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಎಸ್‌ಐಟಿಗೆ ಸೂಚನೆ ನೀಡಿದೆ ಎಂದು ಶಿರೋಮಣಿ ಅಕಾಲಿದಳದ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ಗಾಂಧಿ ಕುಟುಂಬದಿಂದಾಗಿ ಜೆಡ್ ಪ್ಲಸ್ ಭದ್ರತೆಯಲ್ಲಿ ಎಂಜಾಯ್ ಮಾಡುತ್ತಿದ್ದ ಸಜ್ಜನ್ ಕುಮಾರ್ ಅವರಂತೆಯೇ ಕಮಲ್ ನಾಥ್ ಅವರೂ ಈ ಪ್ರಕರಣದ ಪುನರ್ ತನಿಖೆಯಿಂದ ಖಂಡಿತವಾಗಿಯೂ ಜೈಲು ಸೇರಲಿದ್ದಾರೆ. ಅವರ ವಿರುದ್ಧದ ಹೊಸ ತನಿಖೆ ಪೂರ್ಣಗೊಂಡ ಬಳಿಕ 1984ರ ಸಿಖ್ ವಿರೋಧಿ ಗಲಭೆಯಲ್ಲಿ ಅವರ ಪಾಲ್ಗೊಳ್ಳುವಿಕೆ ನ್ಯಾಯಾಲಯದಲ್ಲಿ ಸಾಬೀತಾಗಲಿದೆ ಎಂದು ಹೇಳಿದ್ದಾರೆ.

2019ರ ಏಪ್ರಿಲ್ 9ರಂದು ಗೃಹ ಸಚಿವಾಲಯ ಹೊರಡಿಸಿರುವ ಆದೇಶವನ್ನು ಉಲ್ಲೇಖಿಸಿ ಸಿರ್ಸಾ ಈ ಹೇಳಿಕೆ ನೀಡಿದ್ದಾರೆ.

ಮುಚ್ಚಿದ ಪ್ರಕರಣಗಳಿಗೆ ಮರುಜೀವ

ಮುಚ್ಚಿದ ಪ್ರಕರಣಗಳಿಗೆ ಮರುಜೀವ

1984ರ ಗಲಭೆಗೆ ಸಂಬಂಧಿಸಿದಂತೆ ರಾಜಧಾನಿ ದೆಹಲಿಯ ಪ್ರದೇಶದಲ್ಲಿ ದಾಖಲಾಗಿದ್ದ ಗಂಭೀರ ಅಪರಾಧ ಪ್ರಕರಣಗಳು ಮತ್ತು ಮುಚ್ಚಿಹೋದ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸುವಂತೆ ಎಸ್‌ಐಟಿಗೆ ಅದೇಶಿಸಲಾಗಿದೆ. ಈ ಆದೇಶದ ಅನ್ವಯ ಎಸ್‌ಐಟಿ ದಾಖಲೆಗಳನ್ನು ಹೊಸದಾಗಿ ಸಿದ್ದಪಡಿಸಿ ತನಿಖೆ ಆರಂಭಿಸಬೇಕಿದೆ.

ಕಮಲ್ ನಾಥ್ ಹೆಸರು ಉಲ್ಲೇಖಿಸಿರಲಿಲ್ಲ

ಕಮಲ್ ನಾಥ್ ಹೆಸರು ಉಲ್ಲೇಖಿಸಿರಲಿಲ್ಲ

ಗುರುದ್ವಾರ ರಕಬ್ ಗಂಜ್ ಸಾಹಿಬ್‌ನಲ್ಲಿ ಇಬ್ಬರು ಸಿಖ್ಖರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ 1984 ನವೆಂಬರ್ 1ರಂದು ದಾಖಲಾದ ಎಫ್‌ಐಆರ್‌ನಲ್ಲಿ ಕಮಲ್ ನಾಥ್ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿರಲಿಲ್ಲ ಎಂದು ಸಿರ್ಸಾ ಆರೋಪಿಸಿದ್ದಾರೆ.

ಮನವಿ ಮಾಡಿದ್ದ ಡಿಎಸ್‌ಜಿಎಂಸಿ

ಮನವಿ ಮಾಡಿದ್ದ ಡಿಎಸ್‌ಜಿಎಂಸಿ

ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ಕಮಲ್ ನಾಥ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಎಸ್‌ಐಟಿಯನ್ನು ಸಂಪರ್ಕಿಸಿತ್ತು. ಆದರೆ, ತಾಂತ್ರಿಕ ಕಾರಣವೊಡ್ಡಿ ಎಫ್‌ಐಆರ್ ದಾಖಲು ಮಾಡಿರಲಿಲ್ಲ. ಈಗ ಕಮಲ್ ನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಲು ಗೃಹ ಸಚಿವಾಲಯ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

ಗೇಟ್ ಮುಂದೆ ಇದ್ದ ಕಮಲ್ ನಾಥ್

ಗೇಟ್ ಮುಂದೆ ಇದ್ದ ಕಮಲ್ ನಾಥ್

ಹಿರಿಯ ಪತ್ರಕರ್ತ ಸಂಜಯ್ ಸೂರಿ ಮತ್ತು ಡಿಎಸ್‌ಜಿಎಂಸಿಯ ನಿವೃತ್ತ ಉದ್ಯೋಗಿ ಮುಖ್ತಿಯಾರ್ ಸಿಂಗ್ ಈ ಪ್ರಕರಣದಲ್ಲಿ ಸಾಕ್ಷಿಗಳಾಗುವ ಸಾಧ್ಯತೆ ಇದೆ. ಗುಂಪೊಂದು ಇಬ್ಬರು ಸಿಖ್ಖರನ್ನು ಹತ್ಯೆ ಮಾಡುವ ಸಂದರ್ಭದಲ್ಲಿ ಕಮಲ್ ನಾಥ್ ಗುರುದ್ವಾರ ರಕಬ್ ಗಂಜ್ ಸಾಹಿಬ್ ಪ್ರವೇಶದ ಮುಂಭಾಗದಲ್ಲಿದ್ದರು ಎಂದು ಸಾಕ್ಷ್ಯ ಹೇಳಲು ಇಬ್ಬರೂ ಸಿದ್ಧರಿದ್ದಾರೆ ಎಂದು ಸಿರ್ಸಾ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+