ದೇಶದಲ್ಲಿ 56,944 ಪೊಲೀಸರಿಗೆ ವಿಐಪಿಗಳನ್ನು ಕಾಯುವುದೇ ಕೆಲಸ!

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 18: ದೇಶದಲ್ಲಿ 19.26 ಲಕ್ಷ ಪೊಲೀಸರಿದ್ದಾರೆ. ಇವರಲ್ಲಿ 56,944 ಜನರಿಗೆ ವಿಐಪಿಗಳನ್ನು ಕಾಯುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ. ಆದರೆ ಸಾಮಾನ್ಯ ಜನರ ವಿಚಾರಕ್ಕೆ ಬಂದರೆ 663 ಜನರಿಗೆ ಭದ್ರತೆಗೆ ಕೇವಲ ಓರ್ವ ಪೊಲೀಸ್ ಮಾತ್ರ ಇದ್ದಾರೆ.

ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ದಾಖಲೆಗಳು ಈ ಮಾಹಿತಿಯನ್ನು ಹೊರ ಹಾಕಿವೆ.

56,944 ಪೊಲೀಸರು 20,828 ವಿಐಪಿಗಳ ಭದ್ರತೆಯ ಹೊಣೆ ಹೊತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರಕಾರ ವಿಐಪಿ ಸಂಸ್ಕೃತಿಗೆ ಕೊಕ್ ನೀಡಲು ಮುಂದಾಗಿತ್ತು. ಆದರೆ ರಾಜ್ಯಗಳು ಅವುಗಳದ್ದೇ ಆದ ನಿಯಮಗಳನ್ನು ಪಾಲನೆ ಮಾಡುತ್ತಿರುವುದರಿಂದ ದೊಡ್ಡ ಸಂಖ್ಯೆಯ ಪೊಲೀಸ್ ಅಧಿಕಾರಿಗಳು ವಿಐಪಿಗಳ ಭದ್ರತಾ ಕೆಲಸಕ್ಕೆ ನಿಯೋಜಿತರಾಗಿದ್ದಾರೆ.

19.26 lakh cops in India: 56,944 protect 20,828 VIPs

ಹಲವು ವಿಐಪಿಗಳು ಜೀವ ಬೆದರಿಕೆ ಎದುರಿಸುತ್ತಿರುವುದರಿಂದ ಅವರೆಲ್ಲರಿಗೂ ವಿಶೇಷ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಬಿಹಾರದಲ್ಲಿ ಅತೀ ಹೆಚ್ಚಿನ ಅಂದರೆ 3,200 ವಿಐಪಿಗಳಿಗೆ ಭದ್ರತೆ ನೀಡಲಾಗಿದ್ದು, 6,248 ಪೊಲೀಸ್ ಸಿಬ್ಬಂದಿಗಳು ಭದ್ರತಾ ಕೆಲಸ ನಿರ್ವಹಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 2,207 ವಿಐಪಿಗಳ ಭದ್ರತೆಯನ್ನು 4,233 ಪೊಲೀಸರು ನೋಡಿಕೊಳ್ಳುತ್ತಾರೆ.

ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳೇ ಉತ್ತಮವಾಗಿದ್ದು ಮಹಾರಾಷ್ಟ್ರದಲ್ಲಿ 74 ವಿಐಪಿಗಳಿಗೆ 961 ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಕೇರಳದಲ್ಲಿ ಕೇವಲ 57 ಜನರಿಗೆ 214 ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ.

ಇನ್ನು ಲಕ್ಷದ್ವೀಪದಲ್ಲಿ ಒಬ್ಬರೇ ಒಬ್ಬರು ವಿಐಪಿಗೂ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆಗೊಳಿಸಿಲ್ಲ. ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿಯಲ್ಲಿ ಮಾತ್ರ ಅತೀ ಹೆಚ್ಚಿನ 489 ವಿಐಪಿಗಳಿಗೆ 7,420 ಪೊಲೀಸರು ಭದ್ರತೆ ನೀಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The data compiled by the Bureau of Police Research and Development shows that out of the 19.26 lakh police officers in the country, 56,944 are deployed for the security of 20,828 VIPs.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ