ಕೊರೊನಾ: 17ನೇ ಶತಮಾನದ ಮಹಾನ್ ತಪಸ್ವಿಯ ಕಾಲಜ್ಞಾನದಲ್ಲಿ ಉಲ್ಲೇಖ!

ವಿಶ್ವವನ್ನೇ ಭಯದ ಕೂಪಕ್ಕೆ ತಳ್ಳಿರುವ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುಹೆಚ್ಚು ಜನರನ್ನು ಆಹುತಿ ಪಡೆದುಕೊಳ್ಳುತ್ತಲೇ ಇದೆ. ಭಾರತದಲ್ಲಿ ಇದುವರೆಗೆ 258 ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಜನ ಸಾವನ್ನಪ್ಪಿದ್ದಾರೆ.

ಈ ಮಾರಣಾಂತಿಕ ವೈರಸ್ ನಿಂದ ಮುಕ್ತಿಯಾವಾಗ ಎನ್ನುವ ವಿಚಾರದಲ್ಲಿ ಜ್ಯೋತಿಷಿ, ಸ್ವಾಮೀಜಿಗಳಾದಿಯಾಗಿ ಹಲವರು ಭವಿಷ್ಯವನ್ನು ನುಡಿದು, 'ಭಾರತೀಯರು ಈ ಕಾಯಿಲೆಗೆ ಭಯ ಪಡಬೇಕಾಗಿಲ್ಲ' ಎಂದು ಒಟ್ಟಾರೆಯಾಗಿ ಹೇಳಿದ್ದಾರೆ.

ಈ ನಡುವೆ, ಹದಿನೇಳನೇ ಶತಮಾನದ ತಪಸ್ವಿಯೊಬ್ಬರು ತಮ್ಮ ಕಾಲಜ್ಞಾನದಲ್ಲಿ ಕೊರೊನಾ ವೈರಸ್ ಹೆಸರು ಉಲ್ಲೇಖಿಸದೇ, ಅಪಾರ ಪ್ರಮಾಣದಲ್ಲಿ ಸಾವುನೋವು ಸಂಭವಿಸುತ್ತದೆ ಎಂದು ಹೇಳಿದ್ದಾರೆ ಎನ್ನುವ ಸುದ್ದಿ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.

ಅಂದು ತಪಸ್ವಿಗಳು ಹೇಳಿದ್ದು, ಕೊರೊನಾ ವೈರಸ್ ಉಲ್ಲೇಖಿಸಿಯೇ ಎಂದು ಸಾಮಾಜಿಕ ತಾಣದಲ್ಲಿ ಕೆಲವರು ವಾದಿಸುತ್ತಿದ್ದರೆ, ಎಲ್ಲವನ್ನು, ಎಲ್ಲದಕ್ಕೂ ತಾಳೆ ಹಾಕೋಕೆ ಹೋಗಬೇಡಿ ಎನ್ನುವ ಮಾತೂ ಕೇಳಿಬರುತ್ತಿದೆ. ಕಾಲಜ್ಞಾನದಲ್ಲಿ ಹೇಳಿದ್ದೇನು?

ಪೊತ್ತಲೂರು ಶ್ರೀ.ವೀರಬ್ರಹ್ಮೇಂದ್ರಸ್ವಾಮಿ

ಪೊತ್ತಲೂರು ಶ್ರೀ.ವೀರಬ್ರಹ್ಮೇಂದ್ರಸ್ವಾಮಿ

ಪೊತ್ತಲೂರು ಶ್ರೀ.ವೀರಬ್ರಹ್ಮೇಂದ್ರಸ್ವಾಮಿ, ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಹದಿನೇಳನೇ ಶತಮಾನದಲ್ಲಿ ಜೀವಿತವಾಗಿದ್ದವರು ಮತ್ತು ಪರಿಪೂರ್ಣಾಚಾರ್ಯ ಮತ್ತು ಪ್ರಕೃತಾಂಬ ದಂಪತಿಗಳಿಗೆ ಜನಿಸಿದವರು. ಸರಸ್ವತಿ ನದಿ ಹರಿಯುವ ಬ್ರಹ್ಮಂಡಪುರಂ ಗ್ರಾಮದಲ್ಲಿ ಹುಟ್ಟಿ, ವಾರಣಾಸಿಯ ಅತ್ರಿ ಮಹಾಮುನಿಯ ಆಶ್ರಮದಲ್ಲಿ ಬೆಳೆದರು. ಇದಾದ ನಂತರ, ಚಿಕ್ಕಬಳ್ಳಾಪುರದ ಪಾಪಾಗ್ನಿ ಮಠದ ಮುಖ್ಯಸ್ಥರಿಗೆ ಇವರನ್ನು ನೀಡಲಾಯಿತು. ಇವರಿಗೆ ವೀರಂ ಬೋಟ್ಲಯ್ಯ ಎಂದು ನಾಮಕರಣ ಮಾಡಲಾಯಿತು.

ಕಾಲಜ್ಞಾನಂ ಕೃತಿಯ ಸಾಲೊಂದು, ಈಗ ಸಿಕ್ಕಾಪಟ್ಟೆ ವೈರಲ್

ಕಾಲಜ್ಞಾನಂ ಕೃತಿಯ ಸಾಲೊಂದು, ಈಗ ಸಿಕ್ಕಾಪಟ್ಟೆ ವೈರಲ್

ಪಾಪಾಗ್ನಿ ಮಠದಲ್ಲಿ ವೀರಂ ಬೋಟ್ಲಯ್ಯ ಎಂದು ಕರೆಯಲಾಗಿದ್ದ ವೀರಬ್ರಹ್ಮೇಂದ್ರ ಸ್ವಾಮಿ 11ನೇ ವಯಸ್ಸಿನಲ್ಲಿ ಕಾಳಿಕಾಂಬ ಸಪ್ತಶತಿಯನ್ನು ಬರೆದರು. ತಮ್ಮ ಆಧ್ಯಾತ್ಮಿಕ ಪಯಣವನ್ನು ಆರಂಭಿಸಿದ ವೀರಂ ಬೋಟ್ಲಯ್ಯ ಹಲವಾರು ಕೃತಿಗಳನ್ನು ಬರೆದು ಪೊತ್ತಲೂರು ವೀರಬ್ರಹ್ಮೇಂದ್ರಸ್ವಾಮಿ ಎಂದೇ ಹೆಸರಾದರು. ಇವರು ಬರೆದ ಕಾಲಜ್ಞಾನಂ ಕೃತಿಯ ಸಾಲೊಂದು, ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈಶಾನ್ಯ ದಿಕ್ಕಿನಲ್ಲಿ ವಿಷಗಾಳಿ ಹುಟ್ಟಿತಯ್ಯಾ

ಈಶಾನ್ಯ ದಿಕ್ಕಿನಲ್ಲಿ ವಿಷಗಾಳಿ ಹುಟ್ಟಿತಯ್ಯಾ

ಆ ತೆಲುಗು ಕೃತಿಯ ಕನ್ನಡ ಭಾಷಾಂತರ ಹೀಗಿದೆ, "ಈಶಾನ್ಯ ದಿಕ್ಕಿನಲ್ಲಿ ವಿಷಗಾಳಿ ಹುಟ್ಟಿತಯ್ಯಾ.. ಲಕ್ಷಮಂದಿ ಪ್ರಜೆಗಳು ಸತ್ತರಯ್ಯಾ.. ಕೋರಂಟಿ ಅನ್ನೋ ರೋಗ ಕೋಟಿ ಮಂದಿಗೆ ತಗುಲಿ ಕೋಳಿ ಹಾಗೆ ಕೂಗಿ ಸತ್ತರಯ್ಯಾ". ಇದು ವೀರಬ್ರಹ್ಮೇಂದ್ರಸ್ವಾಮಿಯ ಕಾಲಜ್ಞಾನಂ ಕೃತಿಯ ಅನುವಾದ.

ಚೀನಾ ದೇಶ, ಭಾರತಕ್ಕೆ ಈಶಾನ್ಯ ದಿಕ್ಕಿನಲ್ಲಿ, ಅದಕ್ಕೇ ಕೊರೊನಾ ಹೋಲಿಕೆ

ಚೀನಾ ದೇಶ, ಭಾರತಕ್ಕೆ ಈಶಾನ್ಯ ದಿಕ್ಕಿನಲ್ಲಿ, ಅದಕ್ಕೇ ಕೊರೊನಾ ಹೋಲಿಕೆ

ಚೀನಾ ದೇಶ, ಭಾರತಕ್ಕೆ ಈಶಾನ್ಯ ದಿಕ್ಕಿನಲ್ಲಿ ಇರುವುದರಿಂದ, ಈಗಿನ ಕೊರೊನಾ ಕಾಯಿಲೆಯನ್ನು ತಪಸ್ವಿ ಬರೆದ ಕಾಲಜ್ಞಾನಂ ಕೃತಿಯ ಸಾಲಿಗೆ ಹೋಲಿಕೆ ಮಾಡಲಾಗುತ್ತಿದೆ. ಸುಮಾರು ಮುನ್ನೂರು ವರ್ಷಕ್ಕೆ ಮುನ್ನವೇ, ವೀರಬ್ರಹ್ಮೇಂದ್ರಸ್ವಾಮಿ ತಮ್ಮ ಕಾಲಜ್ಞಾನದಲ್ಲಿ ಉಲ್ಲೇಖ ಮಾಡಿದ್ದಾರೆಂದು ಮಾತನಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+