176 ಸರಕಾರಿ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ, ಇದೂ ಸ್ವಚ್ಛ ಕಾರ್ಯ!

ಸಾರ್ವಜನಿಕ ಹಿತಾಸಕ್ತಿ ಕಾರಣಕ್ಕೆ 176 ಸರಕಾರಿ ಅಧಿಕಾರಿಗಳನ್ನು ನಿವೃತ್ತರಾಗುವಂತೆ ಹೇಳಲಾಗಿದೆ ಎಂದು ಲೋಕಸಭೆಯಲ್ಲಿ ಬುಧವಾರ ಮಾಹಿತಿ ನೀಡಲಾಯಿತು.

"ಲಭ್ಯವಿರುವ ಮಾಹಿತಿ ಪ್ರಕಾರ, ಆರ್ಥಿಕ ನಿಯಮ 56 (j) ಮತ್ತು ಅದೇ ನಿಯಮದ ಶಿಫಾರಸು ಮಾಡಿದಂತೆ ಕೇಂದ್ರ ನಾಗರಿಕ ಸೇವೆಯ 53 ಮಂದಿ A ವೃಂದದ ಅಧಿಕಾರಿಗಳು ಹಾಗೂ 123 ಮಂದಿ B ವೃಂದದ ಅಧಿಕಾರಿಗಳನ್ನು ಜುಲೈ 1, 2014 ರಿಂದ ಅಕ್ಟೋಬರ್ 31, 2017ರವರೆಗೆ ಕೆಲಸದಿಂದ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ" ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರ ನೀಡಿದ್ದಾರೆ.

176 non-performing government officers retired in public interest

ಸರಕಾರಿ ನೌಕರರ ಸೇವೆಯ ಪರಾಮರ್ಶೆ ಮಾಡಲು ಆರ್ಥಿಕ ನಿಯಮ 56 (j) ಅಡಿಯಲ್ಲಿ ಅವಕಾಶ ಇದೆ. ಎರಡು ಬಾರಿ ಆ ರೀತಿ ಪರಿಶೀಲನೆ ಮಾಡಲಾಗುತ್ತದೆ. ಸೇವಾವಧಿ ಹದಿನೈದು ವರ್ಷ ಪೂರೈಸಿದಾಗ ಮೊದಲ ಬಾರಿ ಹಾಗೂ ಇಪ್ಪತ್ತೈದು ವರ್ಷ ಪೂರೈಸಿದಾಗ ಎರಡನೇ ಬಾರಿಗೆ ಪರಿಶೀಲಿಸಲಾಗುತ್ತದೆ.

2953 ಅಖಿಲ ಭಾರತ ಸೇವೆಗಳಲ್ಲಿರುವವರು ಸೇರಿ 11828 ಎ ವೃಂದದ ಅಧಿಕಾರಿಗಳು ಹಾಗೂ 19714 ಬಿ ವೃಂದದ ಅಧಿಕಾರಿಗಳ ಸೇವಾ ಸಾಧನೆ ಪರಿಶೀಲಿಸಿ, ಭ್ರಷ್ಟರು ಹಾಗೂ ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರುವವರನ್ನು ತೆಗೆಯಲಾಗುವುದು ಎಂದು ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+