ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

900 ವರ್ಷದ ನಟರಾಜ ಮೂರ್ತಿ ಸೇರಿ 157 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ ಅಮೆರಿಕ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 26: ಡ್ಯಾನ್ಸಿಂಗ್‌ ಗಣೇಶ ಹಾಗೂ 900 ವರ್ಷದ ನಟರಾಜ ಮೂರ್ತಿ ಸೇರಿದಂತೆ ಕಳ್ಳ ಸಾಗಣೆ ಮಾಡಲಾಗಿದ್ದ ಸುಮಾರು 157 ಪುರಾತನ ವಸ್ತುಗಳನ್ನು ಯುಎಸ್‌, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಹಸ್ತಾರಿಸಿದೆ. ಈ ಮೂಲಕ ನರೇಂದ್ರ ಮೋದಿ ಅಮೆರಿಕ ಪ್ರವಾಸವು ಅಂತ್ಯವಾಗಿದೆ.

ಅಮೆರಿಕವು ಭಾರತಕ್ಕೆ ಸೇರಿದ ಪುರಾತನ ವಸ್ತುಗಳನ್ನು ಭಾರತಕ್ಕೆ ವಾಪಸ್‌ ನೀಡಿರುವ ಈ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯದ ವಕ್ತಾರ ಅರೀಂದಾಮ್‌ ಬಾಗ್ಚಿ ಟ್ವೀಟ್‌ ಮೂಲಕ ನೀಡಿದ್ದಾರೆ.

ಅಮೆರಿಕ ಪ್ರವಾಸ ಮುಗಿಸಿ ಬಂದ ಮೋದಿಗೆ ಭವ್ಯ ಸ್ವಾಗತಅಮೆರಿಕ ಪ್ರವಾಸ ಮುಗಿಸಿ ಬಂದ ಮೋದಿಗೆ ಭವ್ಯ ಸ್ವಾಗತ

"ಈ 157 ಪುರಾತನ ವಸ್ತುಗಳನ್ನು ಭಾರತದಿಂದ ಕಳ್ಳ ಸಾಗಣೆ ಮಾಡಲಾಗಿತ್ತು. ಇದೀಗ ಅಮೆರಿಕವು ಅವುಗಳನ್ನು ಭಾರತಕ್ಕೆ ವಾಪಸ್‌ ನೀಡಿದೆ. ಈ ಪುರಾತನ ವಸ್ತುಗಳಲ್ಲಿ ತಾಮ್ರ ಮಾನವರೂಪವು ಇದೆ. ಇದು ಸುಮಾರು ಕ್ರಿಸ್ತಪೂರ್ವ 2000 ದಷ್ಟು ಹಳೆಯದ್ದಾಗಿದೆ ಎನ್ನಲಾಗಿದೆ. ಇನ್ನು ಟೆರಾಕೋಟಾ ಹೂದಾನಿಯೂ ಇದ್ದು ಇದು 2 ನೇ ಶತಮಾನದಷ್ಟು ಹಳೆಯದ್ದು ಎನ್ನಲಾಗಿದೆ. ಈ ಪೈಕಿ ಸುಮಾರು 45 ರಷ್ಟು ಪುರಾತನ ವಸ್ತುಗಳು ಕ್ರಿಸ್ತಪೂರ್ವ ಯುಗಕ್ಕೆ ಸೇರಿದ್ದು," ಎಂದು ಸರ್ಕಾರ ಹೇಳಿದೆ.

 157 smuggled antiques, Including Dancing Ganesha, 900-yr-old Natraj returned by US to PM Modi

ಜೋ ಬೈಡೆನ್‌ ಜನವರಿಯಲ್ಲಿ ಅಮೆರಿಕದ 46 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರನ್ನು ಭೇಟಿಯಾಗಿದ್ದಾರೆ. ಕ್ವಾಡ್‌ ಸಭೆಗಳಲ್ಲಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ.

ಇನ್ನು ಜೋ ಬೈಡೆನ್‌ರನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯಾದ ಬಳಿಕ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿ ಕಚೇರಿ, "ಉಭಯ ನಾಯಕರು ಕಳ್ಳತನ, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ವಸ್ತುಗಳ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲುವ ಬಗ್ಗೆ ಮಾತನಾಡಿದ್ದಾರೆ," ಎಂದು ತಿಳಿಸಿದೆ.

ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ಪಾಠವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ಪಾಠ

"ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಮೆರಿಕವು ಪುರಾತನ ವಸ್ತುಗಳನ್ನು ವಾಪಾಸ್‌ ನೀಡಿರುವುದು ನಮ್ಮ ದೇಶಕ್ಕೆ ಸೇರಿದ ಪುರಾತನ ವಸ್ತುಗಳನ್ನು ಹಾಗೂ ಪುರಾತನ ಕಲಾಕೃತಿಗಳನ್ನು ಮರಳಿ ದೇಶಕ್ಕೆ ತರುವಲ್ಲಿ ಮೋದಿ ಸರ್ಕಾರ ಮಾಡಿದ ನಿರಂತರ ಪ್ರಯತ್ನದ ಫಲವಾಗಿದೆ," ಎಂದು ಹೇಳಿದೆ.

ಇನ್ನು ಯುಎಸ್‌ ಭಾರತಕ್ಕೆ ವಾಪಾಸ್‌ ನೀಡಿರುವ ಪುರಾತನ ವಸ್ತುಗಳ ಪೈಕಿ 1.5 ಮೀಟರ್‌ ಉದ್ದದ ಮರಳುಗಲ್ಲಿನಲ್ಲಿರುವ ರೇವಂತನ ಮೂರ್ತಿ (ಹಿಂದೂ ದೇವತೆ) ಇದೆ. 8.5 ಸೆಂಟಿ ಮೀಟರ್‌ನ ನಟರಾಜ ವಿಗ್ರಹವಿದೆ. ಇದು 12 ಶತಮಾನದ್ದು ಆಗಿದೆ. ಹಾಗೆಯೇ 56 ಟೆರಾಕೋಟಾ ವಿಗ್ರಹ, ವಸ್ತುಗಳು ಇದೆ. ಇನ್ನು 18 ನೇ ಶತಮಾನದ ಖಡ್ಗವೂ ಇದೆ, ಅದರ ಕವಚದಲ್ಲಿ ಪರ್ಷಿಯನ್ ಶಾಸನವು ಗುರು ಹರಗೋಬಿಂದ್ ಸಿಂಗ್ ಉಲ್ಲೇಖ ಮಾಡು‌ತ್ತಾರೆ. ಇದಲ್ಲದೇ ಲಕ್ಷ್ಮಿ ನಾರಾಯಣ್, ಬುದ್ಧ, ವಿಷ್ಣು, ಶಿವ ಪಾರ್ವತಿ ಮತ್ತು 24 ಜೈನ ತೀರ್ಥಂಕರರು ಮತ್ತು ಇತರ ದೇವತೆಗಳ ಪ್ರತಿಮೆಗಳನ್ನು ಕೂಡಾ ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿಸಲಾಗಿದೆ.

ಇನ್ನು "ಈ ಪೈಕಿ ಅರ್ಧದಷ್ಟು ಪುರಾತನ ವಸ್ತುಗಳು ಸಾಂಸ್ಕೃತಿಕವಾಗಿದ್ದರೆ, ಅರ್ಧದಷ್ಟು ಧಾರ್ಮಿಕ ಪುರಾತನ ವಸ್ತುಗಳಾಗಿದೆ. 60 ಹಿಂದೂ ಪುರಾತನ ವಸ್ತುಗಳಾದರೆ. 16 ಬೌದ್ಧ ಹಾಗೂ ಜೈನ ಪರಂಪರೆಗೆ ಸೇರಿದ್ದು ಆಗಿದೆ," ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಹಿಂದೂ ಕಲಾಕೃತಿಗಳಲ್ಲಿ ಮೂರು ಬ್ರಹ್ಮನದ್ದು, ರಥವನ್ನು ಚಲಾಯಿಸುವ ಸೂರ್ಯ, ವಿಷ್ಣು ಹಾಗೂ ಆತನ ಸಹಚರರು, ದಕ್ಷಿಣ ಮೂರ್ತಿಯಾಗಿ ಶಿವ, ಡ್ಯಾನ್ಸಿಂಗ್‌ ಗಣೇಶ ಇದರಲ್ಲಿ ಸೇರಿದೆ. ಸ್ಟಾಂಡಿಂಗ್‌ ಬುದ್ದನ ಮೂರ್ತಿ, ಬೋದಿಸತ್ವ ಮಂಜುಶ್ರೀ ಹಾಗೂ ತಾರಾ ವಿಗ್ರಹ ವೂ ಸೇರಿದೆ. ಜೈನ ತೀರ್ಥಾಂಕರನ ಮೂರ್ತಿ, ಪದ್ಮಾಸನ ತೀರ್ಥಕರ ಹಾಗೂ ಜೈನ ಚೌಬಿಸಿ ಜೈನ ಕಲಾಕೃತಿ ಕೂಡಾ ಇದೆ.

(ಒನ್‌ಇಂಡಿಯಾ ಸುದ್ದಿ)

English summary
157 smuggled antiques, Includes Dancing Ganesha, 900-yr-old Natraj returned by US to Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X