Holi Festival Special Train: ಹೋಳಿ ಪ್ರಯುಕ್ತ 15 ವಿಶೇಷ ರೈಲು ಸಂಚಾರ: ಮಾರ್ಗ, ದಿನಾಂಕ ವೇಳಾಪಟ್ಟಿ ಮಾಹಿತಿ
ನವದೆಹಲಿ, ಮಾರ್ಚ್ 12: ದೇಶವು ಬಣ್ಣದ ಹಬ್ಬ ಹೋಳಿ ಹಬ್ಬದಾಚರಣೆಗೆ ಸಜ್ಜಾಗುತ್ತಿದೆ. ಈ ಮಧ್ಯೆ ಭಾರತೀಯ ರೈಲ್ವೆ ಇಲಾಖೆಯ ಹೋಳಿ ಹಬ್ಬದ ಪ್ರಯುಕ್ತ 15 ವಿಶೇಷ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ. ಈ ಮೂಲಕ ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈ ವಿಶೇಷ ರೈಲುಗಳ, ಮಾರ್ಗ, ಸಮಯ, ಸಂಪೂರ್ಣ ಪಟ್ಟಿಯ ಮಾಹಿತಿ ಇಲ್ಲಿದೆ.
ಭಾರತೀಯ ರೈಲ್ವೆಯು ಬಿಡಲಿರುವ ರೈಲುಗಳ ಪೈಕಿ ಒಂದೆರಡು ರೈಲುಗಳು ಜಾರ್ಖಂಡ್‌ನ ಧನ್‌ಬಾದ್ ಮೂಲಕ ಪ್ರಯಾಣ ಬೆಳೆಸುವ ರೈಲುಗಳು ಬಿಹಾರ ರಾಜ್ಯದ ಮೂರು ನಿಲ್ದಾಣಗಳಲ್ಲಿ ನಿಲುಗಡೆ ಕೊಡಲಿವೆ. ಅದೇ ರೀತಿ ಉಳಿದ ರೈಲುಗಳು ಎಲ್ಲಿಂದ ಎಲ್ಲಿಗೆ ಸಂಚರಿಸಲಿವೆ ಎಂಬುದರ ಬಗ್ಗೆ ರೈಲ್ವೆ ಇಲಾಖೆ ವೇಳಾಪಟ್ಟಿ ಮಾಹಿತಿ ನೀಡಿದೆ.

ದೆಹಲಿ-ವಾರಣಾಸಿ ಸೇರಿ ವಿವಿಧೆಡೆ ರೈಲು ಸೇವೆ
ಭಾರತೀಯ ರೈಲ್ವೆಯ ಉತ್ತರ ವಿಭಾಗವು 15 ಕ್ಕೂ ಹೆಚ್ಚು ಹೆಚ್ಚುವರಿ ರೈಲುಗಳನ್ನು ಹಬ್ಬದ ಪ್ರಯುಕ್ತ ಕಾರ್ಯಾಚರಣೆ ನಡೆಸಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಒಟ್ಟು 06 ಆರು ರೈಲುಗಳು ಕತ್ರಾ, ವಾರಣಾಸಿ ಮತ್ತು ಸಹರಾನ್‌ಪುರದಂತಹ ನಗರಗಳಿಗೆ ಸಂಪರ್ಕ ಸಾಧಿಸಲಿವೆ. ಹಬ್ಬದ ವೇಳೆ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಈ ರೈಲುಗಳು ಅನುಕೂಲವಾಗಲಿವೆ.
ಇನ್ನೂ ಸಹರಸಾದಿಂದ ಅಂಬಾಲಾಕ್ಕೆ ಮತ್ತು ಪಾಟ್ನಾ ಮತ್ತು ಗಯಾ ನಗರಗಳಿಂದ ದೆಹಲಿಯ ಆನಂದ್ ವಿಹಾರ್‌ಗೆ ರೈಲು ಸೇವೆ ಲಭ್ಯವಿರಲಿವೆ ಎಂದು ರೈಲ್ವೆ ವೇಳಾಪಟ್ಟಿ ಮಾಹಿತಿ ನೀಡಿದೆ.

ಮಾರ್ಚ್‌ನಲ್ಲಿ 112 ವಿಶೇಷ ರೈಲು
ಇದಷ್ಟೇ ಅಲ್ಲದೇ ಈ ಮಾರ್ಚ್ ತಿಂಗಳು ಹಬ್ಬದ ಋತು ಆಗಿರುವುದರಿಂದ ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸುವುದರ ಭಾಗವಾಗಿ 112 ಹೋಳಿ ವಿಶೇಷ ರೈಲು ಸೇವೆಗಳನ್ನು ನಡೆಸುವುದಾಗಿ ಸೆಂಟ್ರಲ್ ರೈಲ್ವೇ ತಿಳಿಸಿದೆ.
ಈ ರೈಲುಗಳ ಪಟ್ಟಿಯಲ್ಲಿ ಎಲ್‌ಟಿಟಿ ಮುಂಬೈ ನಿಲ್ದಾಣದಿಂದ -ಬನಾರಸ್‌ಗೆ ವೀಕ್ಲಿ ವಿಶೇಷ ರೈಲು ಆರು ಭಾರಿ (6 ಸರ್ವೀಸ್) ಸಂಚರಿಸಲಿದೆ. ಎಲ್‌ಟಿಟಿ ಮುಂಬೈನಿಂದ ದಾನಪುರ ಸೂಪರ್‌ಫಾಸ್ಟ್ ವಿಶೇಷ ರೈಲುಗಳು, ಎಲ್‌ಟಿಟಿ ಮುಂಬೈ-ಸಮಸ್ತಿಪುರ ಸಾಪ್ತಾಹಿಕ ಸೂಪರ್‌ಫಾಸ್ಟ್ ರೈಲು ನಾಲ್ಕು ಬಾರಿ ಸಂಚರಿಸಲಿವೆ.
ಎಲ್‌ಟಿಟಿ ಮುಂಬೈ-ಪ್ರಯಾಗರಾಜ್ ವೀಕ್ಲಿ (ಸಾಪ್ತಾಹಿಕ) ಸೂಪರ್‌ಫಾಸ್ಟ್ ಎಸಿ ವಿಶೇಷ ರೈಲು, ಎಲ್‌ಟಿಟಿ ಮುಂಬೈನಿಂದ ಥಿವಿಮ್ ಗೆ ವೀಕ್ಲಿ (ಸಾಪ್ತಾಹಿಕ) ಎಸಿ ವಿಶೇಷ ರೈಲುಗಳು 6 ಸೇವೆ ಒದಗಿಸಲಿವೆ.

ಹೋಳಿ 2024: ವಿಶೇಷ ರೈಲುಗಳ ಸಂಖ್ಯೆ, ಮಾರ್ಗ ಪಟ್ಟಿ
* ಹಬ್ಬದ ವಿಶೇಷ ರೈಲು (04033) ನವದೆಹಲಿ ಮತ್ತು ಉಧಂಪುರ ಮಧ್ಯೆ ಕಾರ್ಯನಿರ್ವಹಿಸಲಿದ್ದು, ಮಾರ್ಚ್ 22 ಮತ್ತು 29 ರಂದು ನವದೆಹಲಿಯಿಂದ ಸೇವೆ ಆರಂಭಿಸುತ್ತದೆ.
* ವಿಶೇಷ ರೈಲು (04034) ಮಾರ್ಚ್ 23 ಮತ್ತು 30 ರಂದು ಉಧಮ್‌ಪುರದಿಂದ ನವದೆಹಲಿಗೆ ಸಂಚರಿಸಲಿದೆ. ಸೋನಿಪತ್, ಪಾಣಿಪತ್, ಕರ್ನಾಲ್, ಕುರುಕ್ಷೇತ್ರ, ಅಂಬಾಲಾ ಕ್ಯಾಂಟ್, ಲುಧಿಯಾನ ಕ್ಯಾಂಟ್, ಜಲಂಧರ್ ಕ್ಯಾಂಟ್, ಪಠಾಣ್‌ಕೋಟ್ ಕ್ಯಾಂಟ್ ಮತ್ತು ಜಮ್ಮು ತಾವಿಯಲ್ಲಿ ನಿಲುಗಡೆ ನೀಡಲಿದೆ.
* ವೈಷ್ಣೋ ದೇವಿಗೆ ಮತ್ತೊಂದು ವಿಶೇಷ ರೈಲು ಮಾರ್ಚ್ 24 ಮತ್ತು 31ರ ನಡುವೆ ಹೊಸ ದೆಹಲಿಯಿಂದ ಬುಧವಾರ ಮತ್ತು ಭಾನುವಾರದಂದು ವಾರಕ್ಕೆ ಎರಡು ಬಾರಿ ಸೇವೆ ನೀಡಲಿದೆ. ಮರಳಿ ಇದೇ ರೈಲು ಮಾರ್ಚ್ 25ರಿಂದ ಏಪ್ರಿಲ್ 1 ರವರೆಗೆ ಇದೇ ಮಾರ್ಗದಲ್ಲಿ ಸಂಚರಿಸಲಿದೆ. ಇದು ವಾರದಲ್ಲಿ ಎರಡು ದಿನ ಅಂದರೆ ಗುರುವಾರ ಹಾಗೂ ಸೋಮವಾರ ಸೇವೆ ನೀಡಲಿದೆ.
* ನವದೆಹಲಿಯಿಂದ ವಾರಣಾಸಿಗೆ ಹೋಳಿ ವಿಶೇಷ ರೈಲುಗಳು ಸಂಚರಿಸಲಿವೆ. ಮಾರ್ಚ್ 21 ಮತ್ತು 30ರ ಮಧ್ಯೆ ವಾರದಲ್ಲಿ ಮೂರು ದಿನಗಳು (ಸೋಮವಾರ, ಗುರುವಾರ ಮತ್ತು ಶನಿವಾರ) ಓಡಾಡಲಿವೆ.
* ಮಾರ್ಚ್ 22 ಮತ್ತು 31ರ ಮಧ್ಯೆ ವಾರದಲ್ಲಿ ಮೂರು ದಿನ (ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ) ವಾರಣಾಸಿಯಿಂದ ದೆಹಲಿಗೆ ಹೆಚ್ಚುವರಿ ರೈಲುಗಳು ಸಂಚರಿಸಲಿವೆ.
* ಇದೇ ರೀತಿ ಕತ್ರಾದಿಂದ ವಾರಣಾಸಿಗೆ ವಾರಕ್ಕೆ ಒಂದು ಭಾರಿ (ಭಾನುವಾರ) ಹೋಳಿ ವಿಶೇಷ ರೈಲು ಸೇವೆ ನೀಡಲಿದೆ. ಇದು ಕತ್ರಾದಿಂದ ಹೊರಟು ಮಂಗಳವಾರ ವಾರಣಾಸಿ ತಲುಪಿ ಮತ್ತೆ ಹಿಂತಿರುಗುತ್ತದೆ.
* ವಿಶೇಷ ರೈಲು ಮಾರ್ಚ್ 23 ರಂದು ಹೌರಾದಿಂದ ಬನಾರಸ್‌ಗೆ ಸಂಚಾರ ನಡೆಸಲಿದೆ. ಈ ರೈಲು ದುರ್ಗಾಪುರ, ಅಸನ್ಸೋಲ್, ಭಕ್ತಿಯಾರ್‌ಪುರ್, ದೀನದಯಾಳ್ ಉಪಾಧ್ಯಾಯ ಜಂಕ್ಷನ್, ಪಾಟ್ನಾ, ಅರ್ರಾ, ಬಕ್ಸರ್ ಹಾಗೂ ವಾರಣಾಸಿ ನಿಲ್ದಾಣಗಳಲ್ಲಿ ನಿಲ್ಲಲ್ಲಿದೆ.
* ದೆಹಲಿಯಿಂದ ವಿಶೇಷ ರೈಲು ತುಂಡ್ಲಾ, ಪಾಣಿಪತ್ ಮತ್ತು ಆಗ್ರಾಕ್ಕೆ ಮಾರ್ಚ್ 21 ರಿಂದ 24 ರವರೆಗೆ ಪ್ರತಿದಿನ ಕಾರ್ಯಾಚರಣೆ ನಡೆಸಲಿದೆ. ಪ್ರಯಾಣಿಕರು ರೈಲ್ವೆ ಇಲಾಖೆಯ ವೇಳಾಪಟ್ಟಿ ನೋಡಿಕೊಂಡು ಸಂಚರಿಸಲಿವೆ. ಈ ವಿಶೇಷ ರೈಲುಗಳ ಸೇವೆಯನ್ನು ಪಡೆಯುವಂತೆ ರೈಲ್ವೆ ಇಲಾಖೆ ತಿಳಿಸಿದೆ.












Click it and Unblock the Notifications