ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಇನ್ನೂ 50 ಭಾರತೀಯರು

ನವದೆಹಲಿ, ಮಾರ್ಚ್ 18; ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ನಡೆಸುತ್ತಿರುವ ಆಪರೇಷನ್ ಗಂಗಾ ಇನ್ನೂ ಮುಂದುವರೆದಿದೆ. ಸುಮಾರು 50 ಭಾರತೀಯರು ಅಲ್ಲಿ ಉಳಿದಿದ್ದು, 15-20 ಜನರು ವಾಪಸ್ ಬರಲು ಬಯಸಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಈ ಕುರಿತು ಮಾತನಾಡಿದ್ದು, "ಯುದ್ಧ ಮುಂದುವರೆಯುತ್ತಲೇ ಇದೆ. ಆದರೆ ಅಲ್ಲಿಂದ ಮರಳುವವರನ್ನು ನಾವು ವಾಪಸ್ ಕರೆತರುತ್ತೇವೆ. ಅದಕ್ಕಾಗಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ" ಎಂದರು.

"15 ರಿಂದ 20 ಭಾರತೀಯರು ವಾಪಸ್ ಬರಲು ಬಯಸಿದ್ದಾರೆ. ಯುದ್ಧ ನಡೆಯುತ್ತಿದ್ದರೂ ನಾವು ಅವರು ವಾಪಸ್ ಆಗಲು ಬೇಕಾದ ಸಹಕಾರವನ್ನು ನೀಡುತ್ತೇವೆ. ವಾಪಸ್ ಬರಲು ಬಯಸಿರುವ ಎಲ್ಲಾ ಭಾರತೀಯರನ್ನು ನಾವು ಸಂಪರ್ಕಿಸಿದ್ದೇವೆ" ಎಂದು ಅರಿಂದಮ್ ಬಗ್ಚಿ ಹೇಳಿದರು.

ಮೂರು ದಿನಗಳ ಹಿಂದೆ ಸಿಕ್ಕಿರುವ ಮಾಹಿತಿ ಅನ್ವಯ ಉಕ್ರೇನ್‌ನಲ್ಲಿ 50 ಭಾರತೀಯರು ಸಿಲುಕಿದ್ದಾರೆ. ಇವರಲ್ಲಿ 15 ರಿಂದ 20 ಜನರು ದೇಶಕ್ಕೆ ವಾಪಸ್ ಆಗಲು ಬಯಸಿದ್ದಾರೆ. ಉಳಿದವರು ಈಗಲೇ ಮರಳುವುದಿಲ್ಲ. ವಾಪಸ್ ಬರಲು ಬಯಸಿದವರನ್ನು ಕರೆತರಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

22,500 ಜನರು ವಾಪಸ್

22,500 ಜನರು ವಾಪಸ್

'ಆಪರೇಷನ್ ಗಂಗಾ' ಕಾರ್ಯಾಚರಣೆ ಅಡಿ ಪೂರ್ವ ಯುರೋಪ್ ರಾಷ್ಟ್ರಗಳಿಂದ ಇದುವರೆಗೂ 22,500 ಜನರನ್ನು ವಾಪಸ್ ಕರೆತರಲಾಗಿದೆ. ಕೆಲವು ಭಾರತೀಯರು ಇನ್ನೂ ಉಕ್ರೇನ್‌ನಲ್ಲಿ ಉಳಿದಿದ್ದು, ಅವರಲ್ಲಿ 15-20 ಜನರು ವಾಪಸ್ ಆಗಲು ಬಯಸಿದ್ದಾರೆ. ಆಪರೇಷನ್ ಗಂಗಾ ಕಾರ್ಯಾಚರಣೆ ಇನ್ನೂ ಜಾರಿಯಲ್ಲಿದ್ದು, ದೇಶಕ್ಕೆ ವಾಪಸ್ ಆಗಲು ಬಯಸುವವರನ್ನು ಕರೆತರಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಹೇಳಿದೆ.

ಕಾರ್ಯಾಚರಣೆ ಇನ್ನೂ ಮುಗಿದಿಲ್ಲ

ಕಾರ್ಯಾಚರಣೆ ಇನ್ನೂ ಮುಗಿದಿಲ್ಲ

ಆಪರೇಷನ್ ಗಂಗಾ ಕಾರ್ಯಾಚರಣೆ ಮುಗಿದಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಕಾರ್ಯಾಚರಣೆ ಇನ್ನೂ ಪೂರ್ಣಗೊಂಡಿಲ್ಲ. ಭಾರತಕ್ಕೆ ವಾಪಸ್‌ ಆಗುವವರನ್ನು ನಾವು ಕರೆತರುತ್ತೇವೆ. ಪೋಲೆಂಡ್‌ನ ವಾರ್ಸಾದಿಂದ ವಿಶೇಷ ವಿಮಾನ ಸಂಚಾರ ನಡೆಸಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಭಾರತೀಯರ ಸ್ಥಳಾಂತರ

ಭಾರತೀಯರ ಸ್ಥಳಾಂತರ

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ಬಳಿಕ ಭಾರತ ಸರ್ಕಾರ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲು ಆಪರೇಷನ್‌ ಗಂಗಾ ಎಂಬ ಕಾರ್ಯಾಚರಣೆ ಆರಂಭಿಸಿತು. ಮೊದಲು ಏರ್ ಇಂಡಿಯಾ ವಿಶೇಷ ವಿಮಾನಗಳ ಮೂಲಕ ಭಾರತೀಯನ್ನು ಕರೆತರುವ ಕಾರ್ಯ ಆರಂಭಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯರನ್ನು ಮರಳಿ ಕರೆತರುವ ಆಪರೇಶನ್ ಗಂಗಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಲು ಸರಣಿ ಸಭೆಗಳನ್ನು ನಡೆಸಿದರು.

ವಾಯುಪಡೆಯ ವಿಮಾನ ಬಳಕೆ

ವಾಯುಪಡೆಯ ವಿಮಾನ ಬಳಕೆ

ಭಾರತೀಯ ಪ್ರಜೆಗಳನ್ನು ಉಕ್ರೇನ್‌ ಗಡಿ ಭಾಗದ ದೇಶಗಳಿಂದ ಉಚಿತವಾಗಿ, ಸುರಕ್ಷಿತ ಕರೆತರಲು ಆಪರೇಷನ್ ಗಂಗಾ ಕಾರ್ಯಾಚರಣೆ ಚುರುಕುಗೊಳಿಸಲಾಯಿತು. ಪ್ರಧಾನಿ ಮೋದಿ ವಿವಿಧ ರಾಷ್ಟ್ರಗಳಿಗೆ ತಮ್ಮ ವಿಶೇಷ ಪ್ರತಿನಿಧಿಗಳಾಗಿ ನಾಲ್ವರು ಸಚಿವರನ್ನು ಕಳಿಸಿದರು. ಅಲ್ಲದೇ ಅಪರೇಷನ್ ಗಂಗಾ ಕಾರ್ಯಾಚರಣೆಗೆ ಸಹಕಾರ ನೀಡುವಂತೆ ಪ್ರಧಾನಿಗಳು ವಾಯುಪಡೆಗೆ ಸೂಚನೆ ನೀಡಿದರು. ಬಳಿಕ ವಾಯುಪಡೆ ವಿಮಾನಗಳನ್ನು ಬಳಕೆ ಮಾಡಲು ಆರಂಭಿಸಲಾಯಿತು. ಉಕ್ರೇನ್ ಗಡಿಗಳಲ್ಲಿ ಮಾನವೀಯ ಪರಿಸ್ಥಿತಿಯನ್ನು ಎದುರಿಸಲು ಉಕ್ರೇನ್‌ಗೆ ಪರಿಹಾರ ಪೂರೈಕೆಯನ್ನು ಸಹ ಮಾಡಲಾಯಿತು.

ಆಪರೇಷನ್ ಗಂಗಾ ಯಶಸ್ವಿ

ಆಪರೇಷನ್ ಗಂಗಾ ಯಶಸ್ವಿ

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ಬಳಿಕ ಅಲ್ಲಿ ಸಿಲುಕಿರುವ ನಾಗರಿಕರನ್ನು ಕರೆತರುವ ಕಾರ್ಯ ಆರಂಭಿಸಿದ ಮೊದಲ ರಾಷ್ಟ್ರ ಭಾರತ. ಪ್ರಧಾನಿ ನರೇಂದ್ರ ಮೋದಿ ಆಪರೇಷನ್ ಗಂಗಾ ಕಾರ್ಯಾಚರಣೆ ಬಗ್ಗೆ ಮಾತನಾಡಿ, "ನಿತ್ಯ ಸಾವಿರಾರು ಭಾರತೀಯರನ್ನು ಉಕ್ರೇನ್ ಯುದ್ಧಭೂಮಿಯಿಂದ ಸುರಕ್ಷಿವಾಗಿ ಹೊರಗೆ ಕರೆತರುತ್ತಿದ್ದೇವೆ. ಇಂಥ ಕಾರ್ಯಾಚರಣೆ ಪ್ರಬಲ ವಿದೇಶಿ ರಾಷ್ಟ್ರಗಳಿಂದಲೂ ಕೂಡಾ ಸಾಧ್ಯವಾಗಿಲ್ಲ" ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+