ಭಾರತದಲ್ಲಿ ಇಂದು 14,199 ಕೋವಿಡ್ ಪ್ರಕರಣ ಪತ್ತೆ
ನವದೆಹಲಿ, ಫೆಬ್ರವರಿ 22: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ದೈನಂದಿನ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇದರಿಂದ ಸಕ್ರಿಯ ಪ್ರಕರಣಗಳಲ್ಲಿ ಮತ್ತೆ ಗಣನೀಯ ಏರಿಕೆಯಾಗಿದ್ದು, ಪುನಃ 1.50 ಲಕ್ಷದ ಗಡಿಯನ್ನು ಸಕ್ರಿಯ ಪ್ರಕರಣಗಳು ತಲುಪಿವೆ.
ಭಾರತದಲ್ಲಿ ಇಂದು 14,199 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 9,695 ಮಂದಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಪ್ರಕರಣಗಳು 100ಕ್ಕಿಂತ ಕಡಿಮೆ ಇರುವುದು ಸಮಾಧಾನಕರ. ಕಳೆದ 24 ಗಂಟೆಗಳಲ್ಲಿ 83 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಒಟ್ಟು ಪ್ರಕರಣಗಳ ಸಂಖ್ಯೆ 1,10,05,850ಕ್ಕೆ ಏರಿಕೆಯಾಗಿದೆ. ಇದುವರೆಗೂ ಒಟ್ಟು 1,06,99,410 ಸೋಂಕಿತರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ 1,56,385ಕ್ಕೆ ತಲುಪಿದೆ. ಜತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,50,055ಕ್ಕೆ ಹೆಚ್ಚಳವಾಗಿದೆ. ದೇಶದಲ್ಲಿ ಒಟ್ಟು 1,11,16,854 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ ಅರ್ಧ ಮಿಲಿಯನ್ ದಾಟಿದೆ. ಇದು ಜಗತ್ತಿನಲ್ಲೇ ಅತ್ಯಧಿಕವಾಗಿದೆ. ಈ ಪಟ್ಟಿಯಲ್ಲಿ ಭಾರತ ನಾಲ್ಕನೆ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಇದುವರೆಗೂ 28,765,423 ಸೋಂಕಿತರು ಪತ್ತೆಯಾಗಿದ್ದು, ಅವರಲ್ಲಿ 5,11,133 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಭಾರತ ಎರಡನೆಯ ಸ್ಥಾನದಲ್ಲಿದೆ. ಬ್ರೆಜಿಲ್ ಮೂರನೇ (10,168,174) ಸ್ಥಾನದಲ್ಲಿದ್ದು, 2,46,560 ಸಾವಿನ ಸಂಖ್ಯೆಯ ಕಾರಣ ಎರಡನೆಯ ಸ್ಥಾನದಲ್ಲಿದೆ. ಇನ್ನು ಮೆಕ್ಸಿಕೋ 2,038,276 ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ. ಅವರಲ್ಲಿ 2,46,560 ಮಂದಿ ಮೃತಪಟ್ಟಿದ್ದಾರೆ.












Click it and Unblock the Notifications