Gold: ಚಿನ್ನ ಕಳ್ಳರು ಲಾಕ್, ಬರೋಬ್ಬರಿ 120 ಕೆಜಿ ಚಿನ್ನ ವಶಕ್ಕೆ!
ಚಿನ್ನದ ಬೆಲೆ ಈಗ 1 ಲಕ್ಷ ರೂಪಾಯಿಗೆ ಬಂದು ತಲುಪಿದೆ, ಹೀಗಿದ್ದಾಗ ಬಡವರು & ಮಧ್ಯಮ ವರ್ಗದ ಜನರು ಒಂದು ಗ್ರಾಂ ಚಿನ್ನ ಖರೀದಿ ಮಾಡುವುದು ಕೂಡ ಕಷ್ಟವಾಗಿದೆ. ಅದರಲ್ಲೂ ಮದುವೆ ಮತ್ತು ಶುಭ ಸಮಾರಂಭ ಬಂದ ಸಮಯದಲ್ಲಿ ಚಿನ್ನದ ಬೆಲೆ ಬಗ್ಗೆಯೇ ಭಯ ಜಾಸ್ತಿ ಕಾಡುತ್ತದೆ. ಹೀಗಿದ್ದಾಗ ಒಂದಲ್ಲ.. ಎರಡಲ್ಲ.. ಬರೋಬ್ಬರಿ 120 ಕೆಜಿ ಚಿನ್ನ ಇದೀಗ ಸೀಜ್ ಆಗಿದೆ. ಲೆಕ್ಕ ಇಲ್ಲದ ಭರ್ಜರಿ 120 ಕೆಜಿ ಚಿನ್ನ ಲಾಕ್ ಆಗಿರುವುದು ಆಘಾತ ತಂದಿದೆ. ಹಾಗಾದ್ರೆ ಇಷ್ಟೊಂದು ಚಿನ್ನ ಸಿಕ್ಕಿದ್ದು ಎಲ್ಲಿ? ಈ ಚಿನ್ನದ ಒಟ್ಟು ಮೌಲ್ಯ ಎಷ್ಟು ಕೋಟಿ ರೂಪಾಯಿ? ಬನ್ನಿ ತಿಳಿಯೋಣ.
ಅಂದಹಾಗೆ, ಇದೀಗ 120 ಕೆಜಿ ಚಿನ್ನ ಲಾಕ್ ಆಗಿರುವುದು ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ. ಕೇರಳ ರಾಜ್ಯದ ತ್ರಿಶೂರ್‌ನ ಚಿನ್ನಾಭರಣ ತಯಾರಿಕಾ ಘಟಕಗಳ ಮೇಲೆ ಅನುಮಾನ ಬಂದು ದಾಳಿಯ ನಡೆಸಲಾಗಿದೆ. ಕೇರಳದ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು ತ್ರಿಶೂರ್‌ನ ಚಿನ್ನಾಭರಣ ತಯಾರಿಕಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪರಿಶೀಲನೆ ನಡೆಸುವಾಗ ಅಕ್ರಮದ ವಾಸನೆ ಕೇರಳದ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ ಮೂಗಿಗೆ ಬಡಿದಿದೆ. ಕೂಡಲೇ ಅಲರ್ಟ್ ಆಗಿರುವ ಅಧಿಕಾರಿಗಳು ಏನು ಮಾಡಿದ್ರು ಗೊತ್ತೆ? ಮುಂದೆ ಓದಿ.

700 ಅಧಿಕಾರಿಗಳು & 78 ಜಾಗ!
ಕೇರಳದ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಒಟ್ಟು 700 ಅಧಿಕಾರಿಗಳ ತಂಡ ಈ ರೀತಿ ಒಂದೇ ಬಾರಿ ದಿಢೀರ್ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ಒಟ್ಟು 700 ಅಧಿಕಾರಿಗಳ ತಂಡದ ಕಾರ್ಯಾಚರಣೆ ವೇಳೆ, 78 ಕಡೆಗಳಲ್ಲಿ ಶೋಧ ನಡೆದಿದೆ. ಈ ವೇಳೆ ಆಭರಣಗಳ ತಯಾರಿಕಾ ಘಟಕಗಳು ಹಾಗೂ ಆಭರಣದ ಅಂಗಡಿಗಳ ಮೇಲೂ ದಾಳಿ ನಡೆಸಲಾಗಿತ್ತು. ಹೀಗೆ ದಾಳಿ ನಡೆಸಿ ಪರಿಶೀಲನೆ ಮಾಡಿದ ಸಮಯದಲ್ಲಿ ಅಂಗಡಿಗಳ & ಆಭರಣಗಳ ತಯಾರಿಕಾ ಘಟಕಗಳ ಬಿಲ್‌ಗಳ ಮೇಲೆ ಡೌಟ್ ಕೂಡ ಬಂದಿದೆ. ಬಿಲ್ & ತೆರಿಗೆ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದ ಆರೋಪ ಕೇಳಿಬಂದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.
ಯಾರಿಗೂ ತಿಳಿಯದಂತೆ ದಿಢೀರ್ ದಾಳಿ!
ಚಿನ್ನದ ಅಕ್ರಮ ನಡೆಯುತ್ತಿದೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ರಹಸ್ಯ ಕಾರ್ಯಚರಣೆ ನಡೆಸಲು ಪ್ಲಾನ್ ಮಾಡಲಾಗಿತ್ತು. ಈ ಕಾರಣಕ್ಕೆ ಕೇರಳದ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಒಟ್ಟು 700 ಅಧಿಕಾರಿಗಳ ತಂಡವನ್ನು ರೆಡಿ ಮಾಡಲಾಗಿತ್ತು. ಹಾಗೇ ಕಾರ್ಯಾಚರಣೆಗೆ ರೆಡಿ ಆಗಿದ್ದ ಅಧಿಕಾರಿಗಳಲ್ಲಿ ಬಹುತೇಕರಿಗೆ ಈ ವಿಚಾರ ಗೊತ್ತೇ ಇರಲಿಲ್ಲ ಎನ್ನಲಾಗಿದೆ.
ಎಲ್ಲರನ್ನೂ ಒಂದೇ ಬಾರಿ ಬಸ್‌ಗಳಲ್ಲಿ ರಹಸ್ಯವಾಗಿ ಕರೆದುಕೊಂಡು ಬಂದು ಪರಿಶೀಲನೆಗೆ ಬಿಡಲಾಗಿತ್ತು ಎನ್ನಲಾಗಿದೆ. ಕೇರಳದ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು ತ್ರಿಶೂರ್‌ನ ವಿವಿಧ ಕಡೆ ಹುಡುಕಾಟ ನಡೆಸಿದ್ದು ಸುಮಾರು 120 ಕೆಜಿ ಚಿನ್ನ ಲಾಕ್ ಆಗಿದೆ. ಹಾಗೂ ಇನ್ನೂ ಹೆಚ್ಚಿನ ಮಾಹಿತಿಯನ್ನ ಇದೀಗ ನಿರೀಕ್ಷೆ ಮಾಡಲಾಗುತ್ತಿದ್ದು, ಅಲ್ಲದೆ ಈ ಕಾರ್ಯಾಚರಣೆ ಕೇರಳದ ವಿವಿಧ ಜಾಗಗಳಲ್ಲಿ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.












Click it and Unblock the Notifications