54 ವರ್ಷದಿಂದ ನಾಗಾಲ್ಯಾಂಡ್ ವಿಧಾನಸಭೆಗೆ ಮಹಿಳೆಯ ಆಯ್ಕೆಯಾಗಿಲ್ಲ

Posted By:
Subscribe to Oneindia Kannada

ಆ ರಾಜ್ಯ ಉದಯವಾಗಿ 54 ವರ್ಷವಾಗಿದೆ. ಈ ವರೆಗೆ 12 ಸಾರ್ವತ್ರಿಕ ವಿಧಾನಸಭೆ ಚುನಾವಣೆಗಳಾಗಿವೆ. ಆದರೆ ಈ ವರೆಗೆ ಒಬ್ಬ ಮಹಿಳೆ ಕೂಡ ಜನಪ್ರತಿನಿಧಿಯಾಗಿ ಆಯ್ಕೆ ಆಗಿಲ್ಲ. ಅಂದ ಹಾಗೆ ಈ ರಾಜ್ಯ ಯಾವುದು ಗೊತ್ತಾ? ನಾಗಾಲ್ಯಾಂಡ್. ಇಲ್ಲಿ ಈ ತಿಂಗಳ 27ನೇ ತಾರೀಕು ವಿಧಾನಸಭೆ ಚುನಾವಣೆ. ಮಾರ್ಚ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

60 ಸದಸ್ಯ ಬಲದ ಇಲ್ಲಿನ ವಿಧಾನಸಭೆಗೆ 195 ಮಂದಿ ಸ್ಪರ್ಧಿಸುತ್ತಿದ್ದಾರೆ. ಈ ಪೈಕಿ ಐವರು ಮಹಿಳಾ ಸ್ಪರ್ಧಿಗಳಿದ್ದಾರೆ. ಇನ್ನು ಆಡಳಿತಾರೂಢ ಪಕ್ಷವಾದ ನಾಗಾ ಪೀಪಲ್ಸ್ ಫ್ರಂಟ್ ನಿಂದ ಈ ಬಾರಿ ಯಾವುದೇ ಮಹಿಳಾ ಅಭ್ಯರ್ಥಿ ಸ್ಪರ್ಧಿಸುತ್ತಿಲ್ಲ. ಈ ಬಗ್ಗೆ ಆ ಪಕ್ಷದ ಅಧ್ಯಕ್ಷರು ಇತ್ತೀಚೆಗೆ ಮಾತನಾಡಿ, ಯಾವುದೇ ಮಹಿಳೆ ಸ್ಪರ್ಧಿಸಲು ಆಸಕ್ತಿ ತೋರಿಲ್ಲ ಎಂದು ಹೇಳಿದ್ದಾರೆ.

ಚುನಾವಣೆಗೂ ಮುನ್ನವೇ ಗೆದ್ದ ನಾಗಾಲ್ಯಾಂಡ್ ಮುಖ್ಯಮಂತ್ರಿ ಅಭ್ಯರ್ಥಿ!

ಬಿಜೆಪಿಯಿಂದ ಸ್ಪರ್ಧಿಸಿರುವ, ಮಾಜಿ ಸಚಿವರ ಪತ್ನಿ ರಖಿಲಾ, ಅಧಿಕಾರದಲ್ಲಿರುವ ಪುರುಷರು ಏನನ್ನು ಸಾಧಿಸಿ ತೋರಿಸಲು ಆಗಿಲ್ಲವೋ ಅದನ್ನು ನಾನು ಮಾಡಿ ತೋರಿಸುತ್ತೇನೆ ಎಂದು ಹೇಳುತ್ತಾರೆ. ಇನ್ನು ಈ ಬಾರಿ ನಾಗಾಲ್ಯಾಂಡ್ ವಿಧಾನಸಭೆಗೆ ಸ್ಪರ್ಧೆಯಲ್ಲಿರುವ ಐವರು ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಚೆನ್ನಾಗಿ ಪ್ರಚಾರ ಮಾಡುತ್ತಿದ್ದಾರೆ.

12 assembly elections later, Nagaland yet to elect a woman candidate

ರನೋ ಶೈಜಾ ಎಂಬ ಮಹಿಳೆ ಯುನೈಟೆಡ್ ಡೆಮಾಕ್ರಟಿಕ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾದ ಏಕೈಕ ಮಹಿಳೆ. ಅದು 1977ನೇ ಇಸವಿಯಲ್ಲಿ. ವಯೋಸಹಜ ಅನಾರೋಗ್ಯದಿಂದ ಆಕೆ 2015ರಲ್ಲಿ ನಿಧನರಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even after 54 years of statehood and 12 assembly elections, Nagaland is yet to see any woman representative in the Assembly.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X