ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಸ್‌ಮಸ್‌ ಆಚರಿಸಲು ಭಾರತದ ಈ 11 ನಗರಗಳೇ ಅತ್ಯುತ್ತಮ

|
Google Oneindia Kannada News

ನವದೆಹಲಿ, ಡಿಸೆಂಬರ್‌ 17: 2022ರ ಕ್ರಿಸ್‌ಮಸ್‌ಗೆ ದಿನಗಣನೆ ಆರಂಭವಾಗಿದ್ದು, ಹಬ್ಬದ ಆಚರಣೆಗೆ ಎಲ್ಲೆಡೆ ಭರದ ಸಿದ್ಧತೆ ಸಾಗುತ್ತಿದೆ. ಜಿಂಗಲ್‌ ಬೆಲ್ಸ್‌ ಹಾಡಿನ ಸದ್ದು ಎಲ್ಲೆಡೆ ಮೊಳಗಲು ಆರಂಭವಾಗಿದ್ದು, ಸಂತನ ಉಡುಗೊರೆಗಾಗಿ ಒಂದಿಷ್ಟು ಮಂದಿ ಕಾತುರದಿಂದ ಕಾಯುತ್ತಿದ್ದಾರೆ.

ಬಣ್ಣ ಬಣ್ಣದ ದೀಪಾಲಂಕಾರ, ಪ್ಲಮ್‌ ಕೇಸ್‌, ಸಿಹಿ ತಿನಿಸು, ಹೀಗೆ ಕ್ರಿಸ್‌ಮಸ್‌ ಬಂತೆಂದರೆ ಒಂದಿಷ್ಟು ಸಂತೋಷದ ಕ್ಷಣಗಳನ್ನು ಜೊತೆಯಲ್ಲಿ ಹೊತ್ತು ತರುತ್ತದೆ. ಕ್ರಿಸ್‌ಮಸ್‌ ಸಿದ್ಧತೆ ಜೋರಾಗಿ ನಡೆಯುತ್ತಿರುತ್ತದೆ. ಭಾರತದಲ್ಲಿ ಬಹುತೇಕ ಎಲ್ಲಾ ಭಾಗಗಳಲ್ಲೂ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ. ಆದರೆ ದೇಶದಲ್ಲಿ ಅದ್ಧೂರಿಯಾಗಿ ಕ್ರಿಸ್‌ಮಸ್‌ ಆಚರಿಸುವ ಪ್ರಮುಖ 11 ನಗರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕ್ರಿಸ್‌ಮಸ್‌, ಹೊಸ ವರ್ಷಕ್ಕೆ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೇವೆ ಕ್ರಿಸ್‌ಮಸ್‌, ಹೊಸ ವರ್ಷಕ್ಕೆ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೇವೆ

ಹಾಗಾದರೆ ಭಾರದಲ್ಲಿ ಪ್ರಮುಖ 11 ನಗರಗಳಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ ಎನ್ನುವುದರ ಬಗ್ಗೆ ತಿಳಿಯೋಣ:

ಗೋವಾದಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಗೋವಾದಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಭಾರತದ ಪ್ರವಾಸಿ ತಾಣಗಳಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ಪಡೆದಿರುವ ಸ್ಥಳ ಗೋವಾ. ಎಳೆಯರಿಂದ ಹಿರಿಯವರವರೆಗೆ ಈ ಸ್ಥಳವನ್ನು ಇಷ್ಟಪಡದವರಿಲ್ಲ. ಕಡಲತೀರ ಹಾಗೂ ಕೆಲ ಐತಿಹಾಸಿಕ ಸ್ಥಳಗಳಿಗೆ ಹೆಸರುವಾಸಿಗಿರುವ ಗೋವಾ ಕ್ರಿಸ್‌ಮಸ್‌ ಆಚರಿಸಲು ಉತ್ತಮವಾದ ಸ್ಥಳವಾಗಿದೆ. ಅನೇಕ ಚರ್ಚ್‌ಗಳಿರುವ ಗೋವಾದಲ್ಲಿ ಮನೆ ಹಾಗೂ ಚರ್ಚ್‌ಗಳಿಗೆ ಹೂವುಗಳಿಂದ ಮತ್ತು ಬಣ್ಣ ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ಕ್ರಿಸ್‌ಮಸ್‌ ಸಮಯದಲ್ಲಿ ಗೋವಾದಲ್ಲಿ ತಡರಾತ್ರಿ ಕರೋಲ್‌ ಮೊಳಗುತ್ತಿರುತ್ತದೆ. ಗೋವಾದಲ್ಲಿ ಕ್ರಿಸ್‌ಮಸ್‌ ಆಚರಣೆ ಬಹಳ ಪ್ರಸಿದ್ಧವಾಗಿದ್ದು, ದೇಶದ ಮೂಲೆ ಮೂಲೆಯಿಂದಲ್ಲದೇ, ವಿದೇಶಿಗರು ಕೂಡ ಗೋವಾ ಕ್ರಿಸ್‌ಮಸ್‌ನಲ್ಲಿ ಭಾಗಿಯಾಗುತ್ತದೆ. ಕಡಲತೀರದಲ್ಲಿ ಕ್ರಿಸ್‌ಮಸ್‌ ಆಚರಣೆಯಂತೂ ಅದ್ಭುತವಾಗಿರುತ್ತದೆ.

ಶಿಲ್ಲಾಂಗ್‌ದಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಶಿಲ್ಲಾಂಗ್‌ದಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಮೇಘಾಲಯದ ಶಿಲ್ಲಾಂಗ್‌ ನಗರದಲ್ಲಿ ಕ್ರಿಸ್‌ಮಸ್‌ ಅನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕ್ರಿಶ್ಚಿಯನ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಶಿಲ್ಲಾಂಗ್‌ನಲ್ಲಿ ಬೀದಿಗಳನ್ನು ಚರ್ಚ್‌ಗಳನ್ನು ಮತ್ತು ಮನೆಗಳನ್ನು ಸುಂದರವಾದ ದೀಪಗಳಿಂದ ಅಲಂಕರಿಸಲಾಗುತ್ತದೆ. ಈಶಾನ್ಯ ಭಾರತದಲ್ಲಿ ಕ್ರಿಸ್‌ಮಸ್‌ ಆಚರಿಸಲು ಶಿಲ್ಲಾಂಗ್‌ ಅತ್ಯುತ್ತಮ ಸ್ಥಳವಾಗಿದೆ. ಕ್ರಿಸ್‌ಮಸ್‌ ಸಮಯದಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಪ್ರಕೃತಿ ಸೌಂದರ್ಯದೊಂದಿದೆ, ಕ್ರಿಸ್‌ಮಸ್‌ನ ವಿಶೇಷವಾದ ತಿಸುಗಳನ್ನು ಸವಿಯುವ ಮೂಲಕ ವಿಶೇಷವಾಗಿ ಕ್ರಿಸ್‌ಮಸ್‌ ಅನ್ನು ಆಚರಿಸಬಹುದು.

ಪಾಂಡಿಚೇರಿಯಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಪಾಂಡಿಚೇರಿಯಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ನಗರ ಸೌಂದರ್ಯ ಮತ್ತೊಂದು ಹೆಸರು ಪಾಂಡಿಚೇರಿ. ಕೇಂದ್ರಾಡಳಿತ ಪ್ರದೇಶವಾಗಿರುವ ಇಲ್ಲಿ ಕ್ರಿಸ್‌ಮಸ್‌ ಅನ್ನು ಬಹಳ ಸುಂದರವಾಗಿ ಆಚರಿಸಲಾಗುತ್ತದೆ. ಇಲ್ಲಿನ ಐತಿಹಾಸಿಕ ಕಟ್ಟಡಗಳು, ಚರ್ಚ್‌ಗಳು ಹಾಗೂ ಕಡಲತೀರಗಳು ಕ್ರಿಸ್‌ಮಸ್‌ ಸಮಯ ಮಾತ್ರವಲ್ಲದೇ ವರ್ಷದ ಪ್ರತಿ ದಿನವೂ ಲಕ್ಷಾಂತರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಮುಖ್ಯವಾಗಿ ಕ್ರಿಸ್‌ಮಸ್‌ ದಿನಗಳಲ್ಲಿ ಬಣ್ಣದ ದೀಪಗಳಿಂದ ಈ ಸುಂದರ ಸಿಟಿ ರಾರಾಜಿಸುತ್ತಿರುತ್ತದೆ. ಪಾಂಡಿಚೇರಿಯಲ್ಲಿ ಐತಿಹಾಸಿಕ ಚರ್ಚ್‌ಗಳು ಹಾಗೂ ಕ್ರಿಶ್ಚಿಯನ್‌ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಹಳ ವಿಶೇಷವಾಗಿ ಹಾಗೂ ಸಾಂಪ್ರದಾಯಕ ಬದ್ಧವಾಗಿ ಇಲ್ಲಿ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ. ಕ್ರಿಸ್‌ಮಸ್‌ ಆಚರಿಸಲು ಪಾಂಡಿಚೇರಿ ಉತ್ತಮ ಆಯ್ಕೆಯಾಗಿದೆ.

ಕೇರಳದಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಕೇರಳದಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಭಾರತದ ಪ್ರವಾಸಿ ತಾಣಗಳಲ್ಲಿ ಕೇರಳ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಪ್ರವಾಸಿ ಸ್ಥಳಗಳು, ಆಹಾರ ಪದ್ಧತಿ, ಉಡುಗೆ ಹೀಗೆ ಅನೇಕ ವಿಚಾರಗಳಲ್ಲಿ ಕೇರಳ ತನ್ನದೇ ಆದ ವಿಶೇಷತೆಹೊಂದಿದೆ. ದೇಶದ ಮೂಲೆ ಮೂಲೆಯಿಂದ ಜನ ಕೇರಳಕ್ಕೆ ಭೇಟಿ ನೀಡಿ ಅಲ್ಲಿ ಸಂಸ್ಕಾರದ ಸೊಬಗನ್ನು ಅನುಭವಿಸುತ್ತಾರೆ.

ಕ್ರಿಸ್‌ಮಸ್‌ ಸಮಯದಲ್ಲಿ ಚರ್ಚ್‌ಗಳನ್ನು ಮತ್ತು ಮನೆಗಳನ್ನು ಸುಂದರವಾದ ದೀಪಗಳಿಂದ ಅಲಂಕರಿಸಲಾಗುತ್ತದೆ. ಕೇರಳದಲ್ಲಿ ಚಿಕ್ಕ ಹಾಗೂ ದೊಡ್ಡ ಚರ್ಚ್‌ಗಳು ಕ್ರಿಸ್‌ಮಸ್‌ ಸಮಯದಲ್ಲಿ ದಿನದ 24ಗಂಟೆಯೂ ತೆರೆದಿರುತ್ತದೆ. ಕ್ರಿಸ್‌ಮಸ್‌ ದಿನ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆಗೆ ಸಾವಿರಾರು ಜನ ಸೇರುತ್ತಾರೆ. ಕೇರಳಕ್ಕೆ ಭೇಟಿ ನೀಡಲೂ ನಿಜಕ್ಕೂ ಇದು ಉತ್ತಮ ಸಮಯವಾಗಿದೆ.

ಮುಂಬೈನಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಮುಂಬೈನಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ವೇಗದ ಜೀವನಕ್ಕೆ ಅತ್ಯುತ್ತಮ ಉದಾಹರಣೆ ಮುಂಬೈ. ಅನೇಕ ವಲಸಿಗರಿಗೆ ಆಶ್ರಯ ತಾಣವಾಗಿರುವ ಮುಂಬೈನಲ್ಲಿ ಕ್ರಿಸ್‌ಮಸ್‌ ಆಚರಣೆ ಬಹಳ ಪ್ರಸಿದ್ಧಿ ಪಡೆದಿದೆ. ಕ್ರಿಸ್‌ಮಸ್‌ ಸಮಯವನ್ನು ಕಳೆಯಲು ಮುಂಬೈ ಉತ್ತಮ ಆಯ್ಕೆಯಾಗಿದೆ.

ಕ್ಯಾಥೋಲಿಕ್ ಜನಸಂಖ್ಯೆಗೆ ಹೆಸರುವಾಸಿಯಾಗಿರುವ ಮುಂಬೈನಲ್ಲಿ ಚರ್ಚ್‌ಗಳನ್ನು ಮತ್ತು ಮನೆಗಳನ್ನು ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ. ಮುಂಬೈ ನಗರದ ಪ್ರತಿಯೊಂದು ಕುಟುಂಬವು ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತದೆ. ಸಂಪೂರ್ಣ ಗರಿ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿರುತ್ತದೆ. ಜೊತೆಗೆ ಧಾರ್ಮಿಕ ಸಂಪ್ರದಾಯದಂತೆ ಇಲ್ಲಿ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ. ಹೀಗಾಗಿ ಕುಟುಂಬದೊಡನೆ ಕ್ರಿಸ್‌ಮಸ್‌ ಆಚರಿಸಲು ಮುಂಬೈ ಅತ್ಯುತ್ತಮ ಸ್ಥಳವಾಗಿದೆ.

ಕೋಲ್ಕತ್ತಾ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಕೋಲ್ಕತ್ತಾ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ವಸಾಹತುಶಾಹಿಗಳ ಭದ್ರಕೋಟೆಯಾಗಿದ್ದ ಕೋಲ್ಕತ್ತಾದಲ್ಲಿ ಕ್ರಿಸ್‌ಮಸ್‌ ಅನ್ನು ಸಂಭ್ರಮದಿಂದ ಆಚರಿಸುತ್ತಾರೆ. ಆಂಗ್ಲೋ-ಇಂಡಿಯನ್ ಸಮುದಾಯವನ್ನು ಬಿಟ್ಟು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಶ್ಚಿಯನರು ಇರದಿದ್ದರೂ, ಕ್ರಿಸ್‌ಮಸ್‌ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಚರ್ಚ್‌ಗಳನ್ನು ಮತ್ತು ಮನೆಗಳನ್ನು ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತದೆ. ಕೋಲ್ಕತ್ತಾದಲ್ಲಿ ಕ್ರಿಸ್‌ಮಸ್‌ ಶಾಂಪಿಂಗ್‌ ವಿಶೇಷವಾಗಿದೆ. ಕಿರಿಯರಿಂದ ಹಿರಿಯವರವರೆಗೂ ಕೋಲ್ಕತ್ತಾದಲ್ಲಿ ಕ್ರಿಸ್‌ಮಸ್‌ ಶಾಂಪಿಂಗ್‌ಗೆ ತೆರಳುತ್ತಾರೆ. ಈ ಸಮಯದಲ್ಲಿ ನಗರ ಎಲ್ಲಾ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ.

ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ದಿನದಿಂದ ದಿನಕ್ಕೆ ಬದಲಾಗುತ್ತಿರುವ ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಬೃಹತ್‌ ಚರ್ಚ್‌ಗಳು ಸೇರಿದಂತೆ ಶಾಪಿಂಗ್‌ ಮಾಲ್‌ಗಳು ದೀಪಾಲಂಕಾರದಿಂದ ನೋಡುಗರನ್ನು ಸೆಳೆಯುತ್ತವೆ. ಬೆಂಗಳೂರು ಹಲವಾರು ಸುಂದರವಾದ ಚರ್ಚುಗಳನ್ನು ಹೊಂದಿದೆ. ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್ ಪ್ಯಾಟ್ರಿಕ್ ಚರ್ಚ್ ಮತ್ತು ಹೊಸೂರಿನ ಆಲ್ ಸೇಂಟ್ಸ್ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ ಈಗಾಗಲೇ ಮನೆ ಮಾಡಿದೆ. ಡಿಸೆಂಬರ್ ಬಂತೆಂದರೆ ಸಿಲಿಕಾನ್‌ ಸಿಟಿ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿರುತ್ತದೆ. ಚರ್ಚ್ ಸ್ಟ್ರೀಟ್‌ ಸೇರಿದಂತೆ ಅನೇಕ ಮಾರುಕಟ್ಟೆಗಳಲ್ಲಿ ಕ್ರಿಸ್‌ಮಸ್‌ ಶಾಂಪಿಂಗ್‌ ಜೋರಾಗಿ ನಡೆಯುತ್ತದೆ. ಪ್ಲಮ್‌ ಕೇಕ್‌, ಶುಂಠಿ ಚಹಾ ಜೊತೆಗೆ ಒಂದಿಷ್ಟು ತಿನಿಸುಗಳು ಕ್ರಿಸ್‌ಮಸ್‌ಗಾಗಿ ವಿಶೇಷವಾಗಿ ತಯಾರಾಗಿರುತ್ತದೆ. ಹೀಗಾಗಿ ಕ್ರಿಸ್‌ಮಸ್‌ ರಜೆ ಕಳೆಯಲು ಬೆಂಗಳೂರು ಉತ್ತಮ ಸ್ಥಳವಾಗಿದೆ.

ಸಿಕ್ಕಿಂನಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಸಿಕ್ಕಿಂನಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಸಿಕ್ಕಿಂ ರಾಜ್ಯವು ಸಣ್ಣ ಪ್ರಮಾಣದಲ್ಲಿ ಕ್ರಿಶ್ಚಿಯನ್ ಜನಸಂಖ್ಯೆಯನ್ನು ಹೊಂದಿದೆ. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಎಲ್ಲರೂ ಒಟ್ಟಾಗಿ ಕ್ರಿಸ್‌ಮಸ್‌ ಆಚರಿಸುತ್ತಾರೆ. ಸಿಕ್ಕಿಂ ಯಾವಾಗಲೂ ಪ್ರವಾಸಿಗರಿಗೆ ಅತ್ಯುತ್ತಮ ಆದ್ಯತೆಯ ಆಯ್ಕೆಯಾಗಿದೆ. ಹಿಮದಿಂದ ಆವೃತವಾದ ಎತ್ತರದ ಹಿಮಾಲಯದ ಶಿಖರಗಳು ನೋಡುಗರ ಕಣ್ಣನ್ನು ತಂಪು ಮಾಡುತ್ತದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಸಿಕ್ಕಿಂನಲ್ಲಿ ಅತಿಯಾದ ಚಳಿ ಇರುತ್ತದೆ. ಹಿಮ ಮಳೆಯ ನಡುವೆ ಕ್ರಿಸ್‌ಮಸ್‌ ನಕ್ಷತ್ರವು ಪ್ರತಿಯೊಂದು ಮನೆಯಲ್ಲಿ ಮಿನುಗುತ್ತಿರುತ್ತದೆ. ಪ್ರತಿಯೊಂದು ಮನೆ ಹಾಗೂ ಚರ್ಚ್‌ಗಳಿಗೂ ದೀಪಾಲಂಕಾರ ಮಾಡಲಾಗಿರುತ್ತದೆ. ಕೇಸ್‌ ಜೊತೆಗೆ ಮಾಂಸಹಾರವು ಸಿಕ್ಕಿಂನ ವಿಶೇಷತೆಯಾಗಿದೆ. ಕ್ರಿಸ್‌ಮಸ್‌ ಸಮಯವನ್ನು ಸುಂದರವಾಗಿ ಕಳೆಯಲು ಸಿಕ್ಕಿಂ ಉತ್ತಮ ಆಯ್ಕೆಯಾಗಿದೆ.

ಮನಾಲಿನಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಮನಾಲಿನಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಮನಾಲಿ ಯಾರಿಗೆ ತಾನೇ ಇಷ್ಟ ಇಲ್ಲ, ವರ್ಷದ ಪ್ರತಿ ದಿನವೂ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಮನಾಲಿ, ಕ್ರಿಸ್‌ಮಸ್‌ ಸಮಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ನಗರವು ವಿವಿಧ ಸ್ಥಳಗಳಗಳು ಹಿಮದಿಂದ ಆವೃತವಾಗಿರುತ್ತದೆ. ಇದೊಂದು ರೋಮ್ಯಾಂಟಿಕ್‌ ಸ್ಥಳವಾಗಿದ್ದು, ನವ ವಿವಾಹಿತರು ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಮನಾಲಿ ಕ್ರಿಸ್‌ಮಸ್‌ ಸಮಯಲ್ಲಿ ಹಿಮಾಚಲ ಕುಲು ಜಾನಪದ ಸಂಗೀತದೊಂದಿಗೆ ರಾರಾಜಿಸುತ್ತಿರುತ್ತದೆ. ಕರೋಲ್ ಸಂಗೀತ ಎಲ್ಲೆಡೆ ಮೊಳಗುತ್ತಿರುತ್ತದೆ. ಕೇಕ್‌ ಸೇರಿದಂತೆ ಇತರ ತಿನಿಸುಗಳೊಂದಿಗೆ ರೆಸ್ಟೋರೆಂಟ್‌ಗಳು ಪ್ರವಾಸಿಗರನ್ನು ಸೆಳೆಯುತ್ತದೆ. ನಿಮ್ಮ ಸಂಗಾತಿಯೊಡನೆ ಕ್ರಿಸ್‌ಮಸ್‌ ಸಮಯವನ್ನು ಕಳೆಯಲು ಮನಾಲಿ ಪ್ರಥಮ ಆಯ್ಕೆಯಾಗಿರಲಿ.

ಚೈನೈನಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಚೈನೈನಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಚೆನೈನಲ್ಲಿ ಬಹಳ ಅದ್ಧೂರಿಯಾಗಿ ಹಾಗೂ ಉತ್ಸಾಹದಿಂದ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ. ತಮಿಳುನಾಡು ರಾಜಧಾನಿ ಚೆನ್ನೈ ಕ್ರಿಶ್ಚಿಯನ್ ಇತಿಹಾಸದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ನಗರದಲ್ಲಿ ಅನೇಕ ಪ್ರಮುಖ ಚರ್ಚ್‌ಗಳಿದ್ದು, ಕ್ರಿಸ್‌ಮಸ್‌ ಸಮಯಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಕ್ರಿಸ್‌ಮಸ್‌ನ ಸಂಜೆಯ ಸಮಯಲ್ಲಿ ನಗರದ ಪ್ರಸಿದ್ಧ ಹೋಟೆಲ್‌ಗಳಲ್ಲಿ ಕ್ರಿಸ್‌ಮಸ್‌ ಪಾರ್ಟಿಗಳನ್ನು ಆಯೋಜಿಸಲಾಗಿರುತ್ತದೆ. ಕ್ರಿಸ್‌ಮಸ್‌ನ ರುಚಿಕರವಾದ ತಿನಿಸುಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಾಂತಾಕ್ಲಾಸ್ ಉಡುಪು ಧರಿಸಿರುವ ವ್ಯಕ್ತಿಗಳು ಉಡುಗೊರೆಗಳನ್ನು ನೀಡುತ್ತಾರೆ. ಕ್ರಿಸ್‌ಮಸ್ ಆಚರಿಸಲು ಚೆನ್ನೈ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಚೈನೈ ಕಡಲತೀರಗಳಲ್ಲಿ ಸಹ ಕ್ರಿಸ್‌ಮಸ್ ಪಾರ್ಟಿಗಳನ್ನು ಆಯೋಜಿಸಲಾಗಿರುತ್ತದೆ.

ದಾದ್ರಾ ಮತ್ತು ನಗರ ಹವೇಲಿಯಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ದಾದ್ರಾ ಮತ್ತು ನಗರ ಹವೇಲಿಯಲ್ಲಿ ಕ್ರಿಸ್‌ಮಸ್‌ ಆಚರಣೆ ಹೇಗಿರಲಿದೆ..?

ಕ್ರಿಸ್‌ಮಸ್‌ ಆಚರಿಸಲು ದಾದ್ರಾ ಮತ್ತು ನಗರ ಹವೇಲಿ ಅತ್ಯುತ್ತಮ ಸ್ಥಳವಾಗಿದೆ. ಡಿಸೆಂಬರ್‌ನಲ್ಲಿ ಸ್ಥಳಕ್ಕೆ ಭೇಟಿ ನೀಡಿದರೆ ನಿಮ್ಮ ಪ್ರವಾಸ ಅತ್ಯುತ್ತಮವಾಗಿ ಪೂರ್ಣಗೊಳ್ಳುತ್ತದೆ. ದಾದ್ರಾ ಮತ್ತು ನಗರ ಹವೇಲಿ ಕ್ರಿಸ್‌ಮಸ್‌ ಆಚರಣೆಯಲ್ಲಿ ಬುಡಕಟ್ಟು ಆಚರಣೆಯು ಸೇರಿಕೊಂಡಿದ್ದು, ಕುತೂಹಲಕಾರಿಯಾಗಿದೆ. ಕ್ರಿಸ್‌ಮಸ್‌ ಸಮಯದಲ್ಲಿ ದಾದ್ರಾ ಮತ್ತು ನಗರ ಹವೇಲಿ ಚರ್ಚ್‌ಗಳನ್ನು ಸುಂದರವಾದ ದೀಪಗಳಿಂದ ಅಲಂಕರಿಸಲಾಗುತ್ತದೆ. ಸಂಜೆಯ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ಪ್ರವಾಸಿಗರು ಕೂಡ ಇದರಲ್ಲಿ ಭಾಗಿಯಾಗಬಹುದು. ಕ್ರಿಸ್‌ಮಸ್‌ ಆಚರಿಸಲು ದಾದ್ರಾ ಮತ್ತು ನಗರ ಹವೇಲಿ ಕೂಡ ಅತ್ಯುತ್ತಮವಾದ ಸ್ಥಳ.

English summary
11 Places to Truly Celebrate Christmas In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X