ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ನ ಗಿರ್ ಅರಣ್ಯದಲ್ಲಿ 11 ಸಿಂಹಗಳ ಕಳೇಬರಗಳು ಪತ್ತೆ

|
Google Oneindia Kannada News

Recommended Video

ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ 11 ಸಿಂಹಗಳ ಕಳೇಬರಗಳು ಪತ್ತೆ | Oneindia Kannada

ಗಾಂಧೀನಗರ್ (ಗುಜರಾತ್), ಸೆಪ್ಟೆಂಬರ್ 21: ಗುಜರಾತ್ ನ ಗಿರ್ ಅರಣ್ಯದಲ್ಲಿ 11 ಸಿಂಹಗಳ ಕಳೇಬರಗಳು ಪತ್ತೆಯಾಗಿದ್ದು, ರಾಜ್ಯ ಸರಕಾರವು ತನಿಖೆಗೆ ಆದೇಶ ನೀಡಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ಮೃತ ಸಿಂಹಗಳು ಗಿರ್ ಪೂರ್ವ ವಲಯದ, ಅದರಲ್ಲೂ ದಲ್ಖನಿಯಾ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಗಿರ್ ಪೂರ್ವ ಅರಣ್ಯ ವ್ಯಾಪ್ತಿಯಲ್ಲಿ ಹನ್ನೊಂದು ಸಿಂಹಗಳ ಕಳೇಬರ ಪತ್ತೆಯಾಗಿವೆ" ಎಂದು ಡೆಪ್ಯೂಟಿ ಕನ್ಸರ್ವೇಟರ್ ಪಿ.ಪುರುಷೋತ್ತಮ ತಿಳಿಸಿದ್ದಾರೆ. ಅಂದಹಾಗೆ ಆಡಳಿತಾತ್ಮಕ ಕಾರಣಕ್ಕಾಗಿ ಗಿರ್ ಅರಣ್ಯ ಪ್ರದೇಶವನ್ನು ಪೂರ್ವ ಹಾಗೂ ಪಶ್ಚಿಮ ಭಾಗ ಎಂದು ವಿಂಗಡಣೆ ಮಾಡಿಕೊಳ್ಳಲಾಗಿದೆ.

ಇದು ಸಿಂಹಗಳ ಜಗತ್ತು, ಎಷ್ಟೊಂದು ಇಂಟರೆಸ್ಟಿಂಗ್ ವಿಚಾರಗಳು! ಇದು ಸಿಂಹಗಳ ಜಗತ್ತು, ಎಷ್ಟೊಂದು ಇಂಟರೆಸ್ಟಿಂಗ್ ವಿಚಾರಗಳು!

ಹೆಣ್ಣು ಸಿಂಹದ ಕಳೇಬರವು ಬುಧವಾರ ಅಮ್ರೇಲಿ ಜಿಲ್ಲೆಯ ರಜುಲಾ ಬಳಿಯಿರುವ ಅರಣ್ಯದಲ್ಲಿ ಪತ್ತೆಯಾಗಿದೆ. ಗಿರ್ ಅರಣ್ಯದ ದಲ್ಖನಿಯಾ ವ್ಯಾಪ್ತಿಯಲ್ಲಿ ಅದೇ ದಿನ ಮೂರು ಸಿಂಹಗಳು ಮೃತಪಟ್ಟಿರುವುದು ತಿಳಿದುಬಂದಿದೆ. ಕಳೆದ ಕೆಲ ದಿನಗಳಲ್ಲೇ ಇತರ ಏಳು ಸಿಂಹಗಳ ಕಳೇಬರಗಳು ಪತ್ತೆಯಾಗಿವೆ.

ಮರಣೋತ್ತರ ವರದಿಯ ನಿರೀಕ್ಷೆಯಲ್ಲಿ

ಮರಣೋತ್ತರ ವರದಿಯ ನಿರೀಕ್ಷೆಯಲ್ಲಿ

ಮೃತ ಪ್ರಾಣಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಜುನಾಗಢದ ಪಶುವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಧಿಕಾರಿಗಳು ಮರಣೋತ್ತರ ವರದಿಯ ನಿರೀಕ್ಷೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರಕಾರವು ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ಪ್ರಿನ್ಸಿಪಾಲ್ ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ (ವನ್ಯಜೀವಿ) ತನಿಖೆ ನಡೆಸಲಿದ್ದಾರೆ.

ಪ್ರಾಥಮಿಕ ವರದಿಗಳು ಹೀಗೆ ಹೇಳುತ್ತಿವೆ

ಪ್ರಾಥಮಿಕ ವರದಿಗಳು ಹೀಗೆ ಹೇಳುತ್ತಿವೆ

ಪ್ರಾಥಮಿಕ ವರದಿಗಳ ಪ್ರಕಾರ, ಎಂಟು ಸಿಂಹಗಳು ಹೊಡೆದಾಡಿಕೊಂಡು ಸಾವನ್ನಪ್ಪಿವೆ. ಉಳಿದ ಮೂರು ಹೇಗೆ ಮೃತಪಟ್ಟಿವೆ ಎಂದು ತಿಳಿಯಲು ಮರಣೋತ್ತರ ವರದಿಯೇ ಬರಬೇಕು ಎಂದು ಸಂಬಂಧಪಟ್ಟ ಇಲಾಖೆಯ ಡಾ.ರಾಜೀವ್ ಗುಪ್ತಾ ಎಂಬುವರು ಮಾಹಿತಿ ನೀಡಿದ್ದಾರೆ.

ರೈನೊ ಬೇಟೆಯಾಡಲು ಹೋಗಿ ಸಿಂಹಗಳಿಗೆ ಭೋಜನವಾದರು ಮೂರು ಮಂದಿ! ರೈನೊ ಬೇಟೆಯಾಡಲು ಹೋಗಿ ಸಿಂಹಗಳಿಗೆ ಭೋಜನವಾದರು ಮೂರು ಮಂದಿ!

ಹೆಣ್ಣು ಹಾಗೂ ಮರಿ ಸಿಂಹಗಳಿಗೆ ಹೆಚ್ಚು ಹಾನಿ

ಹೆಣ್ಣು ಹಾಗೂ ಮರಿ ಸಿಂಹಗಳಿಗೆ ಹೆಚ್ಚು ಹಾನಿ

ಹೊಡೆದಾಟದಿಂದ ಆಗುವ ಗಾಯಗಳಿಂದಾಗಿ ಬಹುಪಾಲು ಸಿಂಹಗಳು ಸಾವನ್ನಪ್ಪಿವೆ. ಈ ರೀತಿಯ ಹೊಡೆದಾಟದಲ್ಲಿ ಮುಖ್ಯವಾಗಿ ಹೆಣ್ಣು ಸಿಂಹಗಳಿಗೆ ಹಾಗೂ ಮರಿಗಳಿಗೆ ಅಪಾಯವಾಗುತ್ತವೆ. ಕಳೆದ ಮೂರರಿಂದ ನಾಲ್ಕು ವರ್ಷದಲ್ಲಿ ಈ ರೀತಿಯಾಗಿದ್ದನ್ನು ಗಮನಿಸುತ್ತಾ ಬಂದಿದ್ದೇವೆ. ಇದರಲ್ಲಿ ಯಾವುದೇ ಹೊರಗಿನವರ ಕೈವಾಡ ಕಂಡುಬರುತ್ತಿಲ್ಲ ಎಂದು ವನ್ಯಪ್ರಾಣಿ ತಜ್ಞರಾದ ಎ.ಕೆ.ಸಕ್ಸೇನಾ ಅಭಿಪ್ರಾಯ ಪಟ್ಟಿದ್ದಾರೆ.

ಗಿರ್ ಅರಣ್ಯ ಪ್ರದೇಶದಲ್ಲಿ 520 ಸಿಂಹಗಳಿವೆ

ಗಿರ್ ಅರಣ್ಯ ಪ್ರದೇಶದಲ್ಲಿ 520 ಸಿಂಹಗಳಿವೆ

2015ರ ಗಣತಿ ಪ್ರಕಾರ ಗಿರ್ ಅರಣ್ಯ ಪ್ರದೇಶದಲ್ಲಿ 520 ಸಿಂಹಗಳಿವೆ. ಈ ಮಧ್ಯೆ ರಾಜ್ಯಸಭಾ ಸದಸ್ಯ ಪರಿಮಳ್ ನಥ್ವಾನಿ ಮಾತನಾಡಿ, ವಿದ್ಯುತ್ ಸ್ಪರ್ಶ, ವಿಷ ಪ್ರಾಶನ ಅಥವಾ ಉರುಳಿಗೆ ಸಿಲುಕಿ ಸಿಂಹಗಳು ಸಾವನ್ನಪ್ಪಿದ್ದರೆ ಅವುಗಳ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳು ವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳು

English summary
The carcasses of 11 lions were found in Gujarat’s Gir forest, prompting the state government to order an inquiry, officials said Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X