ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19: ಕರ್ನಾಟಕ ಸೇರಿ 10 ರಾಜ್ಯಗಳಿಂದ ಶೇ.69.1ರಷ್ಟು ಹೊಸ ಪ್ರಕರಣ

|
Google Oneindia Kannada News

ನವದೆಹಲಿ, ಏಪ್ರಿಲ್ 27: ಕರ್ನಾಟಕ ಸೇರಿ ಒಟ್ಟು 10 ರಾಜ್ಯಗಳಿಂದ ಶೇ.69.1ರಷ್ಟು ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ಮತ್ತು ದೆಹಲಿ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಒಂದೇ ದಿನ ಶೇಕಡಾ 69.1 ರಷ್ಟು ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದೆ.

ದೇಶದಲ್ಲಿ ಕೊರೊನಾ ಕೊಂಚ ಇಳಿಕೆ; 3,23,144 ಪ್ರಕರಣ ದಾಖಲುದೇಶದಲ್ಲಿ ಕೊರೊನಾ ಕೊಂಚ ಇಳಿಕೆ; 3,23,144 ಪ್ರಕರಣ ದಾಖಲು

ದೇಶದಲ್ಲಿ ಸಾವಿನ ಪ್ರಮಾಣ (ಸಿಎಫ್ಆರ್) ಕುಸಿಯುತ್ತಿದೆ ಮತ್ತು ಇದು ಪ್ರಸ್ತುತ ಶೇಕಡಾ 1.12 ರಷ್ಟಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,771 ಸಾವುಗಳು ವರದಿಯಾಗಿವೆ. ಹೊಸ ಸಾವಿನ ಪ್ರಕರಣದಲ್ಲಿ ಶೇಕಡಾ 77.3 ರಷ್ಟು ಹತ್ತು ರಾಜ್ಯಗಳಿಂದ ವರದಿಯಾಗಿದೆ.

 10 States Account For 69.1% Of New Covid-19 Cases

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಎಂದರೆ 524 ಸಾವಾಗಿದ್ದರೆ ದೆಹಲಿಯಲ್ಲಿ 380 ಮಂದಿ ನಿಧನವಾಗಿದ್ದಾರೆ. ಭಾರತದ ಚೇತರಿಕೆ 1,45,56,209 ಕ್ಕೆ ಏರಿದ್ದು, 2,51,827 ರೋಗಿಗಳು 24 ಗಂಟೆಗಳ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ.

ಒಂದು ದಿನದಲ್ಲಿ 3,23,144 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದರೆ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,76,36,307 ಕ್ಕೆ ಏರಿದೆ ಎಂದು ಅದು ಹೇಳಿದೆ.

ಕರ್ನಾಟಕ, ಕೇರಳ,ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ಮತ್ತು ರಾಜಸ್ಥಾನಗಳು ಸಹ 10 ರಾಜ್ಯಗಳ ಪಟ್ಟಿಯಲ್ಲಿ ಸೇರಿವೆ. ಒಟ್ಟಾರೆಯಾಗಿ, ಇದುವರೆಗೆ 28 ​​ಕೋಟಿಗೂ ಹೆಚ್ಚು ಕೋವಿಡ್ ಪರೀಕ್ಷೆ ನಡೆದಿವೆ, ಆದರೆ ಪಾಸಿಟಿವ್ ರೇಟಿಂಗ್ ಶೇ. 6.28 ಆಗಿದೆ" ಎಂದು ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರವು ಒಂದೇ ದಿನ 48,700 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಉತ್ತರ ಪ್ರದೇಶದಲ್ಲಿ 33,551, ಕರ್ನಾಟಕದಲ್ಲಿ 29,744 ಹೊಸ ಪ್ರಕರಣ ದಾಖಲಾಗಿದೆ. ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ28,82,204 ತಲುಪಿದೆ ಮತ್ತು ಒಟ್ಟು ಸೋಂಕಿತರ ಪೈಕಿ ಇದು ಶೇ. 16.34 ರಷ್ಟಿದೆ. ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 24 ಗಂಟೆಗಳ ಅವಧಿಯಲ್ಲಿ 68,546 ಪ್ರಕರಣಗಳ ಹೆಚ್ಚಳವಾಗಿದೆ.

English summary
Ten states, including Maharashtra, Uttar Pradesh and Delhi, reported 69.1 per cent of the new COVID-19 cases registered in a day, the Union Health Ministry said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X