ಲಡಾಕ್: ಹಿಮಪಾತಕ್ಕೆ ಮೂವರು ಬಲಿ, ಹಿಮದಡಿ ಸಿಲುಕಿದ 10 ಮಂದಿ
ಲೇಹ್, ಜನವರಿ 18: ಲಡಾಕಿನ ಖರ್ದುಂಗ್ ಲಾ ಪಾಸ್ ನಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಹಿಮಪಾತದಲ್ಲಿ 10 ಜನ ಹಿಮದಡಿ ಸಿಲುಕಿಕೊಂಡಿದ್ದು, ಮೂವರು ಸಾವಿಗೀಡಾಗಿದ್ದಾರೆ.
ಹಿಮದಡಿಯಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಗುರುವಾರವೇ ಕಾಶ್ಮೀರದ 9 ಜಿಲ್ಲೆಗಳಿಗೆ ಹಿಮಪಾತವಾಗುವ ಸಂಭವವಿದೆ ಎಂದು ಮೊದಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಅನಂತ್ ನಾಗ್, ಬುದ್ಗಾಮ್, ಬಾರಮುಲ್ಲಾ, ಬಂಡಿಪೊರ, ಗಂಡೆರಬಲ್, ಕಾರ್ಗಿಲ್, ಕುಲ್ಗಾಮ್, ಕುಪ್ವಾರ ಮತ್ತು ಲೇಹ್ ಗಳಲ್ಲಿ ಹಿಮಪಾತ ಸಂಭವಿಸುವ ಸಂಭವವಿದೆ ಎಂದು ಮುನ್ನಚ್ಚರಿಕೆ ನೀಡಲಾಗಿತ್ತು.

ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹಿಮಮಳೆ ಬೀಳುತ್ತಲೇ ಇದೆ. ಹಿಮದಡಿ ಸಿಲುಕಿಕೊಂಡ ಹತ್ತು ಜನರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications