Vande Bharat Express Trains: ಶೀಘ್ರವೇ 10 ಹೊಸ ರೈಲುಗಳ ಲೋಕಾರ್ಪಣೆ, ರಾಜ್ಯ, ಮಾರ್ಗಗಳ ಮಾಹಿತಿ, ಅಂಕಿ ಅಂಶ,
ನವದೆಹಲಿ, ಡಿಸೆಂಬರ್ 12: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ವಂದೇ ಭಾರತ್ ಎಕ್ಸಪ್ರೆಸ್ ರೈಲು (Vande Bharat Express Train) ಜನಪ್ರಿಯತೆ ಹೆಚ್ಚುತ್ತಿದೆ. ಹೀಗಾಗಿ ರೈಲು ಸಂಖ್ಯೆಯಲ್ಲಿಯು ಏರಿಕೆ ಆಗುತ್ತಿದೆ. ಜೊತೆಗೆ ಈವರೆಗೆ ಇಲ್ಲದ ರೈಲು ಮಾರ್ಗದಲ್ಲಿ ಹೊಸದಾಗಿ ವಂದೇ ಭಾರತ್ ರೈಲುಗಳನ್ನು ರೈಲ್ವೆ ಇಲಾಖೆ ನಿಯೋಜಿಸಲು ಪ್ಲಾನ್ ಮಾಡಿದೆ. ಈ ಸಂಬಂಧ ಆದಷ್ಟು ಶೀಘ್ರವೇ 10 ಹೊಸ ರೈಲುಗಳು ಲೋಕಾರ್ಪಣೆ ಆಗಲಿವೆ. ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ.
ವಂದೇ ಭಾರತ್ (ವಿಬಿ) ಎಕ್ಸ್‌ಪ್ರೆಸ್ ರೈಲುಗಳತ್ತ ಪ್ರಯಾಣಿಕರು ಮುಖ ಮಾಡುತ್ತಿದ್ದಾರೆ. ಆರಾಮದಾಯಕ ಮತ್ತು ಸುವ್ಯವಸ್ಥಿತ ಸೌಲಭ್ಯವು ಜನರಿಗೆ ಇಷ್ಟವಾಗುತ್ತಿದೆ. ಹೀಗಾಗಿ ಈ ರೈಲುಗಳ ಬಳಕೆ ಹೆಚ್ಚುತ್ತಿದ್ದು, ಹೊಸ ಮಾರ್ಗಗಳಲ್ಲಿಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪರಿಚಯವಾಗಲಿವೆ. ಈ ಮೂಲಕ ಭಾರತೀಯ ರೈಲ್ವೆಯು ದೇಶಾದ್ಯಂತ ಕ್ರಮೇಣ ಅವುಗಳ ಸಂಖ್ಯೆ ಹೆಚ್ಚಿಸುವಲ್ಲಿ ನಿರತವಾಗಿದೆ.

ಒಟ್ಟು ಹೊಸದಾಗಿ 10 ವಂದೇ ಭಾರತ್ ರೈಲುಗಳು ಕಾರ್ಯಚರಣೆ ಆರಂಭಿಸಲಿವೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. ಈ ಪೈಕಿ ಹೊಸದಾಗಿ ಸಿಕಂದರಾಬಾದ್ ಮತ್ತು ಪುಣೆ ನಡುವೆ ವಂದೇ ಭಾರತ್ ಸೇವೆಯನ್ನು ಪ್ರಾರಂಭಿಸಲು ದಕ್ಷಿಣ ಮಧ್ಯ ರೈಲ್ವೆ (SCR) ಯೋಜಿಸಿದೆ. ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ.
ತೆಲುಗು ದೇಶಗಳಲ್ಲಿ 'ವಿಬಿ' ರೈಲು ವಿಸ್ತರಣೆ
ದಕ್ಷಿಣ ಮಧ್ಯ ರೈಲ್ವೆ (SCR) ಈಗಾಗಲೇ ಎರಡು ತೆಲುಗು ರಾಜ್ಯಗಳಲ್ಲಿ ನಾಲ್ಕು ವಂದೇ ಭಾರತ್ ರೈಲುಗಳನ್ನು ನಿರ್ವಹಿಸುತ್ತಿದೆ. ಅದಲ್ಲದೇ ಪ್ರಯಾಣಿಕರಲ್ಲಿ ಸ್ವದೇಶಿ ತಂತ್ರಜ್ಞಾನ ಜೊತೆಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾದ ಹೈಸ್ಪೀಡ್ ರೈಲುಗಳ ಜನಪ್ರಿಯತೆ ಹೆಚ್ಚುತ್ತಿವೆ. ಈ ಕಾರಣದಿಂದ SCR ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದೆ.

ದೇಶಾದ್ಯಂತ 33 'ವಿಬಿ' ರೈಲುಗಳ ಸೇವೆ ಇದೆ
ಈ ನಿರೀಕ್ಷಿತ ವಂದೇ ಭಾರತ್ ರೈಲುಗಳು ಲಭ್ಯವಾದರೆ, ಎಲ್ಲಾ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಎಸ್‌ಸಿಆರ್ ರೈಲ್ವೆ ಅಧಿಕಾರಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 33 ರೈಲುಗಳನ್ನು ರೈಲ್ವೆ ಇಲಾಖೆ ಪರಿಚಯಿಸಿದೆ. ಇದು ಪ್ರಸ್ತುತ ದೇಶಾದ್ಯಂತ ವಿವಿಧ ನಗರಗಳು ಮತ್ತು ರಾಜ್ಯಗಳ ನಡುವೆ ಸಂಪರ್ಕ ಸಾಧಿಸುತ್ತಿವೆ. ನಿತ್ಯ ಸಾವಿರಾರು ಪ್ರಯಾಣಿಕರು ಇದರ ಲಾಭ ಪಡೆದಿದ್ದಾರೆ.
ಬೇಡಿಕೆ ಕಡೆಗಳಲ್ಲಿ ಹೊಸ ರೈಲುಗಳು ಆರಂಭ
ವಂದೇ ಭಾರತ್ ರೈಲುಗಳ ಆಕ್ಯುಪೆನ್ಸಿ ಅನುಪಾತವು ತುಂಬಾ ಹೆಚ್ಚಾಗಿದೆ. ಏಕೆಂದರೆ ಅವುಗಳು ಇಲ್ಲಿಯವರೆಗೆ ಬೇರೆ ರೈಲುಗಳಲ್ಲಿ ಲಭ್ಯವಿಲ್ಲದ ಕೆಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಈ ವಂದೇ ಭಾರತ್ ರೈಲುಗಳು ಹೊಂದಿವೆ. ಈ ರೈಲುಗಳಿಗೆ ಹೆಚ್ಚಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ರೈಲ್ವೆ ಸಚಿವಾಲಯವು ಪ್ರಯಾಣಿಕರ ಅಗತ್ಯತೆ ಇರುವ ಕಡೆಗಳಲ್ಲಿ ಹೊಸದಾಗಿ ಈ ರೈಲುಗಳನ್ನು ಪರಿಚಯಿಸಲು ಮುಂದಾಗಿದೆ.
ಆದಷ್ಟು ಶೀಘ್ರವೇ ದೇಶಾದ್ಯಂತ 10 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪ್ರಾರಂಭವಾಗಲಿವೆ. ಒಂದನ್ನು ಸಿಕಂದರಾಬಾದ್-ಪುಣೆ ಮಾರ್ಗದಲ್ಲಿ ಪರಿಚಯಿಸಲಾಗುವುದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಏಕೆಂದರೆ ಇಲ್ಲಿ ಅತ್ಯಧಿಕ ಜನ ಸಂಚಾರ ಇರುವ ಕಾರಣ ಇಲ್ಲಿ ಬೇಡಿಕೆ ಮನಗಂಡು ಒಂದು ಒಂದೇ ಭಾರತ್ ರೈಲು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಹೊಸ 10 ವಿಬಿ ರೈಲುಗಳ ಮಾರ್ಗಗಳ ಪಟ್ಟಿ
ಸಿಕಂದರಾಬಾದ್-ಪುಣೆ ಜೊತೆಗೆ ವಾರಣಾಸಿ-ಲಖನೌ, ಪಾಟ್ನಾ-ಜಲ್ಪೈಗುರಿ, ಮಡಗಾಂವ್-ಮಂಗಳೂರು, ಮುಂಬೈ-ಕೊಲ್ಹಾಪುರ, ಮುಂಬೈ-ಜಲ್ನಾ, ದೆಹಲಿ-ಅಮೃತಸರ, ಇಂದೋರ್-ಸೂರತ್, ಪುಣೆ-ವಡೋದರಾ ಮತ್ತು ಟಾಟಾನಗರ-ವಾರಣಾಸಿ ವಿಭಾಗಗಳ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಶೀಘ್ರವೇ ಕಾರ್ಯಾಚರಣೆ ಆರಂಭಿಸಲಿವೆ.












Click it and Unblock the Notifications