10 ನಿಮಿಷ ಡೆಲಿವರಿ ಭೂತಕ್ಕೆ ಬ್ರೇಕ್: ಹೊಸ ಆತಂಕದಲ್ಲಿ ಗಿಗ್ ಕಾರ್ಮಿಕರು
ಹತ್ತೇ ನಿಮಿಷದಲ್ಲಿ ಡೆಲಿವರಿ ಎನ್ನುವ ಭೂತಕ್ಕೆ ಬ್ರೇಕ್ ಬಿದ್ದಿದ್ದು. ಸ್ವಿಗ್ಗಿ, ಜೆಪ್ಟೋ ಹಾಗೂ ಬ್ಲಿಂಕಿಟ್ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರು ಇದೀಗ ನಿರಾಳರಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅವರಿಗೆ ಹೊಸದೊಂದು ಆತಂಕ ಶುರುವಾಗಿದೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದಾಗಿ ಗಿಗ್‌ಕಾರ್ಮಿಕರು ತುಸು ನಿಟ್ಟುಸಿರುವ ಬಿಡುವಂತೆ ಆಗಿದೆ. ಆದರೆ ಇದೇ ಸಂದರ್ಭದಲ್ಲಿ ಅವರಿಗೆ ಉದ್ಯೋಗದಲ್ಲಿ ಮತ್ತೊಂದು ಸಮಸ್ಯೆ ಎದುರಾಗುವ ಆತಂಕ ಶುರುವಾಗಿದೆ.
ಬೆಂಗಳೂರು, ಮುಂಬೈ ಹಾಗೂ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸ್ವಿಗ್ಗಿ, ಜೆಪ್ಟೋ, ಬ್ಲಿಂಕಿಟ್ ಹಾಗೂ ಜೋಮಾಟೊ ಗಿಗ್ ಕಾರ್ಮಿಕರಿಗೆ 10 ನಿಮಿಷಗಳಲ್ಲಿ ಡೆಲಿವರಿ ಎನ್ನುವುದು ಭಾರೀ ಸಂಕಷ್ಟವನ್ನು ತಂದೊಡ್ಡಿತ್ತು. ಮಾನಸಿಕ ಒತ್ತಡ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ, ಅಪಘಾತಗಳು ಸಂಭವಿಸುತ್ತಿದ್ದವು. ಇದೀಗ ಈ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಕ್ಕಿದೆ. ಕ್ವಿಕ್ ಕಾಮರ್ಸ್ ಮತ್ತು ಫುಡ್ ಡೆಲಿವರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಡೆಲಿವರಿ ಸಿಬ್ಬಂದಿಗೆ ರಿಲೀಫ್ ದೊರಕಿದೆ. ಆದರೆ ಇದೇ ಸಂದರ್ಭದಲ್ಲಿ ಗಿಗ್ ಕಾರ್ಮಿಕರು ಆದಾಯ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ.

ಗಿಗ್ ಕಾರ್ಮಿಕರು 10 ಡೆಲಿವರಿ ಸೇವೆಯನ್ನು ತೆಗೆದು ಹಾಕುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಆದಾಯ ಮತ್ತು ಇನ್ಸೆಂಟಿವ್ ಕೈತಪ್ಪುವ ಆತಂಕದಲ್ಲಿ ಇದ್ದಾರೆ. ಕಾರ್ಮಿಕ ಸಚಿವಾಲಯ ಮಧ್ಯಪ್ರವೇಶಿಸಿದ ನಂತರ ಜೆಪ್ಟೋ ಮತ್ತು ಸ್ವಿಗ್ಗಿಯಂತಹ ತ್ವರಿತ ವಾಣಿಜ್ಯ ವೇದಿಕೆಗಳು 10-ನಿಮಿಷಗಳ ವಿತರಣಾ ಸೇವೆ ಯೋಜನೆಯನ್ನು ಕೈಬಿಟ್ಟವೆ.
ಮೊದಲು ಪ್ರತಿಯೊಂದು ಆರ್ಡರ್ ಓಟದಂತೆ ಭಾಸವಾಗುತ್ತಿತ್ತು. ಈಗ ತುಸು ನಿರಾಳರಾಗಿದ್ದೇವೆ. ನಾವು ರಸ್ತೆಗಳ ಮೇಲೆ ಸಂಚರಿಸುವ ಬದಲು, ಟೈಮರ್‌ಗಳ ಮೇಲೆ ಸಂಚರಿಸುವಂತೆ ಭಾಸವಾಗುತ್ತಿತ್ತು. ಸಮಯದ ಅಭಾವದಿಂದಾಗಿ ವೇಗವಾಗಿ ವಾಹನಗಳಲ್ಲಿ ಹೋಗುವಾಗ ಅಪಘಾತಗಳು ಸಹ ಸಂಭವಿಸಿರುವುದು ಇದೆ ಎಂದು ಗಿಗ್ ಕಾರ್ಮಿಕರು ಹೇಳಿದ್ದಾರೆ.
ಕಿರಣ್ ಎನ್ನುವವರು ನಾನು ಬ್ಲಿಂಕಿಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಮೊದಲು 10 ನಿಮಿಷಗಳಲ್ಲಿ ಡೆಲಿವರಿ ಮಾಡಿ ಬಂದು ಸ್ಟೋರ್‌ನಲ್ಲಿ ಸ್ಕ್ಯಾನ್ ಮಾಡಬೇಕಾಗಿತ್ತು. ಈಗ ತುಂಬಾ ಸಹಾಯವಾಗಿದೆ. ಮೊದಲು ಟ್ರಾಫಿಕ್ ಜಾಮ್‌ಗಳಲ್ಲಿ ಸಿಕ್ಕಿಹಾಕಿಕೊಂಡು ಪರದಾಡಬೇಕಾಗಿತ್ತು. ಈಗ ಆ ರೀತಿ ಇಲ್ಲ. ಸಿಗ್ನಲ್ ಇದ್ದರೆ ಕನಿಷ್ಠ 10ರಿಂದ 15 ನಿಮಿಷಬೇಕಾಗುತ್ತದೆ. ಆದರೆ ಈಗ ನಿರಾಳವಾಗಿದೆ ಎಂದು ಹೇಳಿದ್ದಾರೆ.
ಇನ್ಸೆಂಟಿವ್ ಕಡಿಮೆಯಾಗುವ ಆತಂಕ
ಕಾರ್ಮಿಕ ಸಚಿವಾಲಯ ಮಧ್ಯಪ್ರವೇಶಿಸಿದಿಂದ ಗಿಗ್ ಕಾರ್ಮಿಕರು ನಿರಾಳರೇನೋ ಆಗಿದ್ದಾರೆ. ಆದರೆ ಹೆಚ್ಚಿನ ವಿತರಣಾ ಪಾಲುದಾರರು / ಗಿಗ್ ಕಾರ್ಮಿಕರು ಉದ್ಯೋಗ ನಷ್ಟ, ವೇತನ ಕಡಿತ ಅಥವಾ ತ್ವರಿತ ವಾಣಿಜ್ಯ ವೇದಿಕೆಗಳಿಂದ ಪ್ರತೀಕಾರ ಎದುರಾಗಬಹುದು ಎನ್ನುವ ಆತಂಕದಿಂದ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ.
10 ನಿಮಿಷಗಳಲ್ಲಿ ವಿತರಣೆಯು ಕೇವಲ ಮಾರಾಟದ ಭಾಗವಾಗಿರದೆ, ಈ ವಿಷಯದ ಬಗ್ಗೆ ಗ್ರಾಹಕರು ಮತ್ತು ಮಾರಾಟಗಾರರು ಇಬ್ಬರೂ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕೆಲವು ವಿತರಣಾ ಪಾಲುದಾರರು ಉದ್ಯೋಗ ಕಡಿತ ಮತ್ತು ಹೆಚ್ಚುವರಿ ಆದಾಯ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.












Click it and Unblock the Notifications