2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ಟಾಪ್ 10 ತೀರ್ಪುಗಳು
ನವದೆಹಲಿ, ಸೆಪ್ಟೆಂಬರ್ 29: ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ತಮ್ಮ ವೃತ್ತಿ ಬದುಕಿನ ಕೊನೆ ವಾರದ ಅವಧಿಯಲ್ಲಿ ಹಲವು ಮಹತ್ವದ ತೀಪುಗಳನ್ನು ನೀಡಿದ್ದಾರೆ. ಆಧಾರ್ ಮಾನ್ಯತೆ, ಅನೈತಿಕ ಸಂಬಂಧ, ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ಪ್ರಮುಖವಾದವು.
ಕೆಲವು ನ್ಯಾಯಪೀಠದ ತೀರ್ಪನ್ನು ಜನತೆ ಮುಕ್ತವಾಗಿ ಸ್ವಾಗತಿಸಿದರೆ, ಮಿಕ್ಕ ಕೆಲವು ತೀರ್ಪಿನ ಬಗ್ಗೆ ಆಕ್ಷೇಪ ಹಾಗೂ ಚರ್ಚೆ ನಡೆಯುತ್ತಿವೆ.
ಪಾರ್ಸಿ ಹೆಣ್ಣುಮಕ್ಕಳ ಮದುವೆ ನಂತರದ ಹಕ್ಕುಗಳ ಕುರಿತ ತೀರ್ಪು, ನೋಟಾ ಆಯ್ಕೆಯನ್ನು ಸೇರಿಸುವ ಕುರಿತಾದ ತೀರ್ಪು, ಐಚ್ಛಿಕ ಸಾವು (ಯುಥನಾಸಿಯಾಕ್ಕೆ ಅನುಮತಿ), ಹಾದಿಯಾ- ಶಫೀನ್ ಲವ್ ಜಿಹಾದ್ ಪ್ರಕರಣ, ಮಹಿಳಾ ಸ್ವಾತಂತ್ರ್ಯ, ಖಾಸಗಿತನ ಮೂಲಭೂತ ಹಕ್ಕು ಮುಂತಾದ ವಿಷಯಗಳ ಬಗ್ಗೆ ತೀರ್ಪು ಹೊರ ಬಂದಿದೆ.
ಅಕ್ಟೋಬರ್ 02ರಂದು ನ್ಯಾ. ದೀಪಕ್ ಮಿಶ್ರಾ ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದ್ದು, ಅಕ್ಟೋಬರ್ 03ರಂದು ನೂತನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೋಗಾಯ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
2018ರಲ್ಲಿ ಸುಪ್ರೀಂಕೋರ್ಟಿನಿಂದ ಹೊರ ಬಂದ ಪ್ರಮುಖ ತೀರ್ಪುಗಳು ಯಾವುವು? ಮುಂದೆ ಓದಿ..

#1 ಸಲಿಂಗ ಕಾಮ ಅಪರಾಧವಲ್ಲ
ಸೆಪ್ಟಂಬರ್ 6, 2018ರಂದು ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಈ ಮೂಲಕ ಸೆಕ್ಷನ್ 377 ರದ್ದುಗೊಂಡಿತು.
ಸಲಿಂಗ ಕಾಮ ಅಪರಾಧ ಎನ್ನುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377, ಸಂವಿಧಾನದ ಮೂಲಭೂತ ಹಕ್ಕು ನೀಡುವ ಅನುಚ್ಛೇದ 14ಕ್ಕೆ ವಿರುದ್ಧವಾಗಿದೆ. ಎಲ್‌ಜಿಪಿಟಿಕ್ಯೂ ಸಮುದಾಯದ ಮೇಲೆ ಮೇಲಿಂದ ಮೇಲೆ ದಬ್ಬಾಳಿಕೆ, ತಾರತಮ್ಯ ನಡೆಯುತ್ತಲೇ ಇತ್ತು. ಸಹಮತದ ಸಲಿಂಗ ಕಾಮ ಅಪರಾಧ ಎನ್ನುವ ಸೆಕ್ಷನ್ 377 ಅನ್ನು ಅಳಿಸಿಹಾಕಲಾಗಿದೆ - ನ್ಯಾ. ದೀಪಕ್ ಮಿಶ್ರಾ.

#2 ಎಸ್ ಸಿ/ ಎಸ್ಟಿ ಬಡ್ತಿ ಮೀಸಲಾತಿ
ಸೆಪ್ಟೆಂಬರ್ 26: 2006ರ ನಾಗರಾಜು ಪ್ರಕರಣದ ಆದೇಶ ಪ್ರಶ್ನಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲಾತಿಗೆ ಕುರಿತಂತೆ ಇದ್ದ ಗೊಂದಲಕ್ಕೆ ಪರಿಹಾರ ಸಿಕ್ಕಿತು.

#3 ಆಧಾರ್ ಮಾನ್ಯತೆ
ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ ನೀಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತು., ಬ್ಯಾಂಕ್ ವ್ಯವಹಾರಕ್ಕೆ ಆಧಾರ್ ಕಡ್ಡಾಯವಲ್ಲದಿದ್ದರೂ ಪ್ಯಾನ್ ಕಾರ್ಡ್ ಜತೆ ಆಧಾರ್ ಜೋಡಣೆ ಕಡ್ಡಾಯ ಎನ್ನಲಾಗಿದೆ. ಸಿಮ್ ಕಾರ್ಡ್ ಖರೀದಿಗೆ ಆಧಾರ್ ಕಡ್ಡಾಯವಿಲ್ಲ. ಈ ಬಗ್ಗೆ ಚರ್ಚೆ, ಗೊಂದಲ ಇನ್ನೂ ಬಗೆಹರಿದಿಲ್ಲ.

#4 ರಾಮ್ ಜನ್ಮ ಭೂಮಿ- ಬಾಬರಿ ಮಸೀದಿ
ನಮಾಜು ಮಾಡಲು ಮಸೀದಿಯೇ ಆಗಬೇಕೆಂದೇನಿಲ್ಲ. ಇಸ್ಲಾಂ ಧರ್ಮದ ಪ್ರಕಾರ ಮಸೀದಿ ಅವಿಭಾಜ್ಯ ಅಂಗವಲ್ಲ, ಯಾವುದೇ ಧಾರ್ಮಿಕ ಮಂದಿರದ ಜಮೀನನ್ನು ಸರ್ಕಾರವು ವಶ ಪಡಿಸಿಕೊಳ್ಳಬಹುದಾಗಿದೆ ಎಂದು ಸುಪ್ರೀಂಕೋರ್ಟಿನ ನ್ಯಾಯಪೀಥವು ನೀಡಿದ ತೀರ್ಪು ರಾಮಜನ್ಮ ಭೂಮಿಯ ಜಮೀನು ವಿವಾದಕ್ಕೆ ಮುನ್ಸೂಚನೆಯಾಗಲಿದೆ ಎಂದು ನಂಬಲಾಗಿದೆ.

#5 ಅನೈತಿಕ ಸಂಬಂಧ
ವ್ಯಭಿಚಾರವು ಅಪರಾಧವಲ್ಲ ಹಾಗೂ ಪತ್ನಿಯು ಪತಿಯ ಅಡಿ ಆಳಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ವಿಷಯವಾಗಿ ಈಗಾಗಲೇ ಹಲವು ಚರ್ಚೆಗಳು ಆರಂಭವಾಗಿದೆ. ಈ ತೀರ್ಪು ಭಾರತದ ಕುಟುಂಬ ಪದ್ಧತಿಗೆ ಹಾನಿ ಮಾಡುತ್ತದೆ ಎನ್ನಲಾಗಿದೆ

#6 ಶಬರಿಮಲೆಗೆ ಮಹಿಳೆಯರ ಪ್ರವೇಶ
ಶಬರಿಮಲೆ ದೇಗುಲಗೊಳಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ಅಡ್ಡಿ ಆತಂಕಗಳು ದೂರಾಗಿವೆ. ಮುಖ್ಯ ನ್ಯಾಯಮುರ್ತಿ ದೀಪಕ್ ಮಿಶ್ರಾ ಅವರಿದ್ದ ಸಾಂವಿಧಾನಿಕ ನ್ಯಾಯಪೀಠವು ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಸೂಚಿಸಿ, ಐತಿಹಾಸಿಕ ತೀರ್ಪು ನೀಡಿದೆ.

#7 ಭೀಮಾ ಕೊರೆಂಗಾವ್ ಕಾರ್ಯಕರ್ತರ ಬಂಧನ
ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪ್ರಗತಿಪರರ ಗೃಹಬಂಧನದ ಅವಧಿಯನ್ನು ಸುಪ್ರೀಂಕೋರ್ಟ್ ಮತ್ತೆ ನಾಲ್ಕು ವಾರಗಳ ಕಾಲ ವಿಸ್ತರಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಸಹ ಒಳಗೊಂಡಿದ್ದ ನ್ಯಾಯಪೀಠ 2:1 ರ ಅಭಿಪ್ರಾಯದ ಆಧಾರದಲ್ಲಿ ತೀರ್ಪು ನೀಡಿತು.

ಕೋರ್ಟ್ ಕಲಾಪ ಲೈವ್ ಸ್ಟ್ರೀಮಿಂಗ್
ನ್ಯಾಯಾಲಯದ ಕಲಾಪವನ್ನು ನೇರ ಪ್ರಸಾರ ಮಾಡಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇನ್ನು ಮುಂದೆ ಮಹತ್ವದ ಪ್ರಕರಣಗಳ ವಿಚಾರಣೆ ನಡೆಯುವಾಗ ಕೋರ್ಟ್ ಕಲಾಪವನ್ನು ಜನರು ವೀಕ್ಷಿಸಬಹುದಾಗಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ ಈ ಕುರಿತು ಬುಧವಾರ ತೀರ್ಪು ನೀಡಿದೆ. ನ್ಯಾಯಾಲಯದ ಕಲಾಪದ ನೇರ ಪ್ರಸಾರ ಸುಪ್ರೀಂಕೋರ್ಟ್‌ನಿಂದಲೇ ಆರಂಭವಾಗಲಿ ಎಂದು ತೀರ್ಪಿನಲ್ಲಿ ಹೇಳಿದೆ.

ಕ್ರಿಮಿನಲ್ ಹಿನ್ನೆಲೆಯುಳ್ಳ ರಾಜಕಾರಣಿಗಳು
ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸುವುದರ ವಿರುದ್ಧ ತಾನು ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಅವರ ಅನರ್ಹತೆಗೆ ಸಂಬಂಧಿಸಿದಂತೆ ಸಂಸತ್ ಕಾನೂನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಅಭ್ಯರ್ಥಿಗಳ ವಿರುದ್ಧದ ಚಾರ್ಜ್‌ಶೀಟ್ ಆಧಾರದಲ್ಲಿ ಅವರನ್ನು ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಲು ಸುಪ್ರೀಂಕೋರ್ಟ್‌ಗೆ ಸಾಧ್ಯವಿಲ್ಲ. ಅನರ್ಹಗೊಳಿಸುವುದು ಇದಕ್ಕೆ ಮಾನದಂಡವಾಗಲಾರದು ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.

ತ್ರಿವಳಿ ತಲಾಕ್
ಆಗಸ್ಟ್ 22, 2017ರ ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಿದರೂ ಅದು ಕಾನೂನು ಮಾನ್ಯತೆ ಪಡೆದಿದ್ದು ಈ ವರ್ಷದಲ್ಲಿ. ತ್ರಿವಳಿ ತಲಾಖ್ ಅನ್ನು ಅಪರಾಧವನ್ನಾಗಿ ಪರಿಗಣಿಸುವ ತ್ರಿವಳಿ ತಲಾಖ್ ಮಸೂದೆಯಲ್ಲಿನ ತಿದ್ದುಪಡಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ಈ ಕುರಿತ ಕಾರ್ಯನಿರ್ವಾಹಕ ಆದೇಶ(executive order)ಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿರುವುದು ಮುಸ್ಲಿಂ ಮಹಿಳೆಯರ ಪಾಲಿಗೆ ಹೊಸ ಆಶಾಕಿರಣ ಅನ್ನಿಸಿದೆ. ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ 2017 ರ ಮುಸ್ಲಿಂ ಮಹಿಳೆಯರ ಕಾಯ್ದೆ(ವಿವಾಹ ಹಕ್ಕು ರಕ್ಷಣೆ) ಯನ್ನು ತ್ರಿವಳಿ ತಲಾಖ್ ಕಾನೂನು ಎಂದೇ ಕರೆಯಲಾಗುತ್ತದೆ.
-
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications