ಮಹಾರಾಷ್ಟ್ರ: ಮೂರಂತಸ್ತಿನ ಕಟ್ಟಡ ಕುಸಿದು ಓರ್ವ ಸಾವು

ಥಾಣೆ, ನವೆಂಬರ್ 24: ಮೂರಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ ಓರ್ವ ವ್ಯಕ್ತಿ ಮೃತನಾದ ಘಟನೆ ಮಹಾರಾಷ್ಟ್ರದ ಥಾಣೆ ಭಿವಂಡಿ ಎಂಬಲ್ಲಿ ನಡೆದಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಟ್ಟಡದ ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಸಿಲುಕಿಹಾಕಿಕೊಂಡಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

1 man dies after a 3 floor buliding collapses in Bhiwandi, Maharashtra

ಆಗಸ್ಟ್ 31 ರಂದು ಮುಂಬೈಯ ಭೆಂಡಿ ಬಜಾರ್ ನಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ 32 ಜನ ದುರಂತ ಅಂತ್ಯ ಕಂಡಿದ್ದರು. ಇದು ಇತ್ತೀಚಿನ ಅತ್ಯಂತ ಕರಾಳ ಘಟನೆ ಎನ್ನಿಸಿಕೊಂಡಿತ್ತು.

ಅದಕ್ಕೂ ಮುನ್ನ, ಅಂದರೆ ಜುಲೈ 25 ರಂದು ಸಹ ಮುಂಬೈಯ ಲಾಲ್ ಬಹದ್ದೂರ್ ಶಾಸ್ತ್ರೀ ಮಾರ್ಗದಲ್ಲಿರುವ ದಾಮೋದರ್ ಪಾರ್ಕ್ ಬಳಿಯ ನಾಲ್ಕು ಅಂತಸ್ತಿನ ಎರಡು ಕಟ್ಟಡ ಕುಸಿದು 14 ಮಂದಿ ಸಾವನ್ನಪ್ಪಿದ್ದರು.

ಮುಂಬೈಯಲ್ಲಿ ದಿನೇ ದಿನೇ ನಡೆಯುತ್ತಿರುವ ಇಂಥ ಕಟ್ಟಡ ಕುಸಿತದ ದುರಂತಗಳು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+