Gold: ದೇಶದಲ್ಲೇ ಇದೇ ಮೊದಲು.. ಗಗನಸಖಿಯಿಂದಲೇ 1 ಕೆ.ಜಿ. ಅಕ್ರಮ ಚಿನ್ನ ಸಾಗಾಟ.!-ಮುಂದೇನಾಯ್ತು?
Gold: ಇತ್ತೀಚಿನ ದಿನಗಳಲ್ಲಿ ಏರ್‌ಪೋರ್ಟ್‌ಗಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡಿ ತಗ್ಲಾಕಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಆದರೆ ಇದೀಗ ಗಗನಸಖಿಯೇ ಚಿನ್ನ ಸಾಗಾಟ ಮಾಡಿ ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಈಕೆ ಯಾವುದೇ ದಾಖಲೆಯಿಲ್ಲದೆ ಅಕ್ರಮವಾಗಿ ಎಷ್ಟು ಕೆ.ಜೆ. ಚಿನ್ನ ಸಾಗಾಟ ಮಾಡುತ್ತಿದ್ದಳು ಹಾಗೂ ಇವರ ಸಂಪೂರ್ಣ ಹಿನ್ನೆಲೆ ಏನು ಎಂದು ಇಲ್ಲಿ ತಿಳಿಯಿರಿ.
Meet Surbhi Khatoon from Kolkata who is an Air Hostess with Air India Express and who get arrested at Kannur International Airport after 1 Kg of Gold was found concealed inside her rectum. She confessed that she smuggled gold from Muscat in similar way earlier also. pic.twitter.com/KiNJoo3TyJ
— NCMIndia Council For Men Affairs (@NCMIndiaa) May 31, 2024
ಸಾಮಾನ್ಯವಾಗಿ ಸಾಮಾನ್ಯರು ಸೇರಿದಂತೆ ಉದ್ಯಮಿಗಳು, ಕ್ರೀಡಾ ತಾರೆಯರು ಸಹ ದಾಖಲೆಯಿಲ್ಲದೆ, ಅಕ್ರಮ ಚಿನ್ನ ಸಾಗಾಟ ಮಾಡಿ ಕೊನೆಗೆ ಏರ್ಪೋಟ್‌ಗಳಲ್ಲಿ ವಿಮಾನ ಸಿಬ್ಬಂದಿ ಕೈಗೆ ಸಿಕ್ಕಾಕಿಕೊಂಡ ಘಟನೆಗಳು ನಡೆದಿವೆ. ಇನ್ನು ವಿಚಿತ್ರ ಎಂದರೆ ಇದೀಗ ವಿಮಾನ ಸಿಬ್ಬಂದಿಯೇ ಅಂದರೆ, ಗಗನಸಖಿ ಅಕ್ರಮ ಚಿನ್ನ ಸಾಗಾಟ ಮಾಡಿ ತಗ್ಲಾಕೊಂಡಿರುವು ಇದೇ ಮೊದಲು ಎನ್ನಲಾಗಿದೆ.

ಗುದನಾಳದಲ್ಲಿ 1 ಕೆಜಿ ಚಿನ್ನ ಇಟ್ಟುಕೊಂಡು ಮಸ್ಕತ್‌ನಿಂದ ಕೇರಳದ ಕಣ್ಣೂರಿಗೆ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಏರ್ ಇಂಡಿಯಾ ಗಗನಸಖಿಯನ್ನು ಕಂದಾಯ ಗುಪ್ತಚರ ನಿರ್ದೇಶಾನಲಯದ ಅಧಿಕಾರಿಗಳು (ಡಿಆರ್‌ಐ) ವಶಕ್ಕೆ ಪಡೆಸಿದ್ದು, ವಿಮಾನ ಸಂಸ್ಥೆಯ ಸಿಬ್ಬಂದಿ ಕಳ್ಳಸಾಗಣೆ ಮಾಡಿ ಬಂಧನವಾಗಿರುವುದು ದೇಶದಲ್ಲಿ ಇದೇ ಮೊದಲು ಎನ್ನಲಾಗಿದೆ.
ಅಕ್ರಮ ಚಿನ್ನಸಾಗಾಟ ಪ್ರಕರಣದಲ್ಲಿ ಬಂಧಿತಳಾಗಿರುವ ಗಗನಸಖಿ ಸುರಭಿ ಖಾತುನ್. ಇವರು ಕೋಲ್ಕತಾ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇವರು ಏರ್ ಇಂಡಿಯಾದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೇ 28ರಂದು ಮಸ್ಕತ್‌ನಿಂದ ಕಣ್ಣೂರಿಗೆ ಬಂದಿದ್ದ ಏರ್ ಇಂಡಿಯಾ ವಿಮಾನದಲ್ಲಿ ಆಕೆ ತನ್ನ ಗುದನಾಳದಲ್ಲಿ ಸುಮಾರು 960 ಗ್ರಾಂ ಅಂದರೆ 1 ಕೆ.ಜಿ ಲೆಕ್ಕದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದರು ಎನ್ನಲಾಗಿದೆ.
ಅಷ್ಟೇ ಅಲ್ಲದೆ ಗಗನಸಖಿ ಈ ಹಿಂದೆಯೂ ಚಿನ್ನವನ್ನು ಇದೇ ರೀತಿ ಕಳ್ಳಸಾಗಾಣೆ ಮಾಡಿದ್ದಳು ಎನ್ನುವ ಮಾಹಿತಿ ವಿಚಾರಣೆ ಬಳಿಕ ಬಹಿರಂಗವಾಗಿದೆ. ಇನ್ನು ಈ ಪ್ರಕರಣದ ಹಿಂದೆ ಇನ್ನು ಯಾವರೆಲ್ಲ ಭಾಗಿಯಾಗಿದ್ದರು ಎನ್ನುವ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎನ್ನುವ ಎನ್ನಲಾಗಿದ್ದು, ಇನ್ನು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ ಅಷ್ಟೇ.












Click it and Unblock the Notifications