ಭಾರತದಲ್ಲಿ 15ರಲ್ಲಿ ಒಬ್ಬರಿಗೆ ಕೊರೊನಾ ಸೋಂಕು: ಸಿರೋ ಸಮೀಕ್ಷೆ

ನವದೆಹಲಿ, ಸೆಪ್ಟೆಂಬರ್ 29: ಸಿರೋ ಸಮೀಕ್ಷೆ ಭಾರತದಲ್ಲಿ ಎರಡನೇ ಕೊರೊನಾ ಸಮೀಕ್ಷೆಯನ್ನು ಕೈಗೊಂಡಿದ್ದು, 15 ಮಂದಿಯಲ್ಲಿ ಒಬ್ಬರು ಕೊರೊನಾ ಸೋಂಕಿತರಿದ್ದಾರೆ ಎಂಬುದು ತಿಳಿದುಬಂದಿದೆ.

10 ವರ್ಷಕ್ಕಿಂತ ಮೇಲ್ಪಟ್ಟ 15 ರಲ್ಲಿ ಒಬ್ಬರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.ನಗರದ ಸ್ಲಂಗಳಲ್ಲಿ ಹೆಚ್ಚಿನ ಆತಂಕವಿದೆ.

ಐಸಿಎಂಆರ್ ಈ ಕುರಿತು ಮಾಹಿತಿ ನೀಡಿದೆ.ಒಟ್ಟು 700 ಹಳ್ಳಿಗಳ ಸಮೀಕ್ಷೆ ನಡೆಸಲಾಗಿದೆ. 21 ರಾಜ್ಯಗಳ 70 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದಿದೆ. ಸಮೀಕ್ಷೆಯು ಆಗಸ್ಟ್ 17 ರಿಂದ ಸೆಪ್ಟೆಂಬರ್ 22ರವರೆಗೆ ನಡೆದಿತ್ತು.

1 In 15 Indians Were Exposed To Covid By Aug, Shows 2nd Sero Survey

ಆರೋಗ್ಯ ಸಚಿವಾಲಯವು ಮಂಗಳವಾರ ಮಧ್ಯಾಹ್ನ ಈ ವರದಿಯನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಪರೀಕ್ಷೆಯು ಹೆಚ್ಚಾಗಿರುವ ಕಾರಣ ಹೆಚ್ಚೆಚ್ಚು ಮಂದಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದರಿಂದ ಕೊರೊನಾ ಸೋಂಕನ್ನು ದೂರವಿಡಬಹುದಾಗಿದೆ. ಹಾಗೆಯೇ ಇದು ಹಬ್ಬಗಳ ಸೀಸನ್, ಸಾಕಷ್ಟು ಮಂದಿ ಒಟ್ಟಿಗೆ ಸೇರುವುದು, ಹಬ್ಬ ಆಚರಿಸುವುದನ್ನು ಮಾಡಬೇಡಿ, ಇದೊಂದು ವರ್ಷ ಸ್ವಲ್ಪ ಜಾಗ್ರತೆವಹಿಸಿ ಎಂದು ಹೇಳಿದ್ದಾರೆ.

ಬಿಲ್‌ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಶನ್ ಮತ್ತು ಗವಿ ಸಂಸ್ಥೆಯು ಲಸಿಕೆ ತಯಾರಿಕೆಗಾಗಿ 150 ಮಿಲಿಯನ್ ಡಾಲರ್ ಅನುದಾನವನ್ನು ನೀಡಿದೆ. ಭಾರತ ಹಾಗೂ ಮಧ್ಯಮ ಆದಾಯವಿರುವ ದೇಶಗಳಿಗೆ 100 ಮಿಲಿಯನ್ ಹೆಚ್ಚುವರಿ ಡೋಸ್‌ಗಳನ್ನು ನೀಡುವುದಾಗಿ ಸೆರಂ ಇನ್‌ಸ್ಟಿಟ್ಯೂಟ್ ತಿಳಿಸಿದೆ.

Recommended Video

      Virat ಹಾಗು Anushka ಬಗ್ಗೆ ಏನೇನೋ ಹೇಳಿ , ಸಮಜಾಯಿಷಿ ನೀಡಿದ Sunil Gavaskar | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+