ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ಯಾಗಿ ಬಂಧನಕ್ಕೂ ಮುನ್ನ 1.5 ಲಕ್ಷ ದಾಖಲೆ ಪರಿಶೀಲನೆ

ಅಗಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಿವೃತ್ತ ಸೇನಾ ಮುಖ್ಯಸ್ಥರೊಬ್ಬರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು ಭ್ರಷ್ಟಾಚಾರದ ಆರೋಪದಲ್ಲಿ ಬಂಧನವಾಗುತ್ತಿರುವುದು ದೇಶದಲ್ಲಿ ಇದು ಮೊದಲ ಸಲ. ವಾಯುಸೇನೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರನ್ನು ಅಗಸ್ಟಾವೆಸ್ಟ್ ಲ್ಯಾಂಡ್ ಪ್ರಕರಣದಲ್ಲಿ ಸಿಬಿಐ ಶುಕ್ರವಾರ ಬಂಧಿಸಿದೆ.

ತ್ಯಾಗಿ ಅವರನ್ನು ಶುಕ್ರವಾರ ವಿಚಾರಣೆಗೆ ಕರೆದಾಗ ಸಹಕಾರ ನೀಡಲಿಲ್ಲ. ಈ ಕಾರಣಕ್ಕೆ ತ್ಯಾಗಿ ಮತ್ತಿಬ್ಬರನ್ನು ಬಂಧಿಸಬೇಕಾಯಿತು ಎಂದು ಸಿಬಿಐ ಅಧಿಕಾರಿಗಳು ಒನ್ಇಂಡಿಯಾಗೆ ಮಾಹಿತಿ ನೀಡಿದ್ದಾರೆ. ದೆಹಲಿ ಮೂಲದ ವಕೀಲ ಗೌತಮ್ ಖೇತಾನ್ ಮತ್ತು ಸಂಜೀವ್ ತ್ಯಾಗಿ (ಎಸ್.ಪಿ.ತ್ಯಾಗಿ ಸಂಬಂಧಿ) ಎಂಬುವರನ್ನು ಕೂಡ ಬಂಧಿಸಲಾಗಿದೆ.[3,600 ಕೋಟಿ ರು ಮೌಲ್ಯದ ಡೀಲ್ ಕ್ಯಾನ್ಸಲ್]

Tyagi

362 ಕೋಟಿ ಲಂಚ
ಅಗಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಪ್ರಕರಣದ ತನಿಖೆಯಲ್ಲಿ ಕಂಡುಬಂದಿರುವ ಪ್ರಕಾರ ವಿವಿಧ ದೇಶಗಳ ಕಂಪೆನಿಗಳಿಂದ ಭಾರತದೊಳಕ್ಕೆ ಹಣ ಬಂದಿದೆ. ಮಧ್ಯವರ್ತಿಗಳು ಭಾರತೀಯ ಅಧಿಕಾರಿಗಳು, ಪತ್ರಕರ್ತರಿಗೂ ಸೇರಿ 362 ಕೋಟಿ ರುಪಾಯಿಗಳನ್ನು ಲಂಚವಾಗಿ ನೀಡಿದ್ದಾರೆ.

ಈ ಬಗ್ಗೆ ಅರಂಭದಲ್ಲಿ ತನಿಖೆ ಚುರುಕಾದರೂ ಆ ನಂತರ ನಿಧಾನವಾಯಿತು. ನಾನಾ ದೇಶಗಳಿಂದ ಸಿಕ್ಕ ದಾಖಲೆಗಳ ರಾಶಿಯನ್ನು ಪರಿಶೀಲಿಸುವುದಕ್ಕೆ ತುಂಬ ಸಮಯ ಹಿಡಿಸಿತು ಎಂದು ಸಿಬಿಐ ಹೇಳಿದೆ. ಇಟಲಿಯಿಂದ ದೊಡ್ಡ ಗಾತ್ರದಲ್ಲಿ ದಾಖಲಾತಿಗಳು ಹಾಗೂ ಸಾಕ್ಷ್ಯಗಳು ದೊರಕಿದವು. ಅಧಿಕಾರಿಗಳೇ ಹೇಳುವ ಪ್ರಕಾರ ಕನಿಷ್ಠ 1.5 ಲಕ್ಷ ದಾಖಲೆಗಳ ಪರಿಶೀಲನೆ ಮಾಡಲಾಗಿದೆ.[ವಾಯುಸೇನೆ ಮಾಜಿ ಮುಖ್ಯಸ್ಥ ತ್ಯಾಗಿ ಮೇಲೆ ಎಫ್ ಐಆರ್]

ಕೋರ್ಟ್ ಮುಂದೆ ಹಾಜರು
ಈ ದಾಖಲೆಗಳಲ್ಲಿ ಮಾಹಿತಿ ಗಣಿಯೇ ಇತ್ತು. ಅವುಗಳಿಂದ ಈ ಪ್ರಕರಣದಲ್ಲಿ ತುಂಬ ಸಹಾಯವಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ. ಎಸ್.ಪಿ.ತ್ಯಾಗಿ ಅವರನ್ನು ಶನಿವಾರ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ವಿಚಾರಣೆಗಾಗಿ ಸಿಬಿಐ ವಶಕ್ಕೆ ಒಪ್ಪಿಸಲು ಮನವಿ ಸಲ್ಲಿಸಲಾಗುತ್ತದೆ.

ಈ ವ್ಯವಹಾರ ಕುದುರಿಸಲು ಸೃಷ್ಟಿಯಾದ ವೆಬ್ ಬಗೆಗಿನ ಮಾಹಿತಿ ತ್ಯಾಗಿ ವಿಚಾರಣೆಯಿಂದ ಬಯಲಾಗುತ್ತದೆ. ಹೆಲಿಕಾಪ್ಟರ್ ಖರೀದಿಗೆ ನಿಗದಿಯಾಗಿದ್ದ ತಾಂತ್ರಿಕ ಅಂಶಗಳನ್ನು ಬದಲಾಯಿಸಲು ನಡೆದ ಚರ್ಚೆಯಲ್ಲಿ ತ್ಯಾಗಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪ ಇದೆ. ಪ್ರಭಾವಕ್ಕೆ ಒಳಗಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಎಂಬುದು ಸಿಬಿಐ ಆರೋಪ.[ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]

ಹೆಲಿಕಾಪ್ಟರ್ ಆರು ಸಾವಿರ ಮೀಟರ್ ನಷ್ಟು ಎತ್ತರಕ್ಕೆ ಹಾರಲು ಸಮರ್ಥವಿಲ್ಲ ಎಂಬ ಕಾರಣಕ್ಕೆ ಅಗಸ್ಟಾವೆಸ್ಟ್ ಲ್ಯಾಂಡ್ ಖರೀದಿ ವ್ಯವಹಾರ 2002ರಲ್ಲಿ ತಿರಸ್ಕೃತವಾಗಿತ್ತು. ಅದರೆ 2005ರಲ್ಲಿ ಅದನ್ನೇ 4,500 ಮೀಟರ್ ಹರುವ ಸಾಮರ್ಥ್ಯವಿದ್ದರೆ ಸಾಕು ಎಂದು ಬದಲಿಸಲಾಯಿತು. ಪ್ರಧಾನಿ ಕಚೇರಿ ಹಾಗೂ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ನ ಸಂಪರ್ಕಿಸಿಯೇ ಈ ನಿರ್ಧಾರ ಕೈಗೊಂಡಿದ್ದು ಎಂದು ತ್ಯಾಗಿ ಅವರು ಸಿಬಿಐಗೆ ತಿಳಿಸಿದ್ದಾರೆ.

English summary
The official say that, they had to analyse at least 1.5 lakh documents in AgustaWestland case. These documents have a mine of information which in turn helped our case a great deal, the official also noted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X