ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾರತೀಯರಲ್ಲಿ ನೆಮ್ಮದಿ ತರಿಸಿದ ಕೊರೊನಾ ಸೋಂಕಿನ ಇಳಿಕೆ
ನವದೆಹಲಿ, ಜೂನ್ 5: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು, ಕಳೆದ 24 ಗಂಟೆಯಲ್ಲಿ 1,20,529 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 3,380 ಮಂದಿ ಮೃತಪಟ್ಟಿದ್ದು, ಶುಕ್ರವಾರ ಒಂದೇ ದಿನ 1,97,894 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಹಾಗೆಯೇ ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,86,94,879ಕ್ಕೆ ಏರಿಕೆಯಾಗಿದ್ದು, ಇದುವರೆಗೆ ದೇಶದಲ್ಲಿ ಒಟ್ಟು 2,67,95,549 ಮಂದಿ ಗುಣಮುಖರಾಗಿದ್ದಾರೆ. ಹೊಸ ಸೋಂಕಿತರ ಭಾರೀ ಇಳಿಕೆ ಕಾಣುತ್ತಿರುವುದು ದೇಶದ ಜನರಲ್ಲಿ ನೆಮ್ಮದಿ ತರಿಸಿದ್ದು, ಆದಷ್ಟು ಬೇಗ ಕೊರೊನಾ ಸೋಂಕು ಮಾಯವಾಗಿ ಸಹಜ ಜನಜೀವನಕ್ಕೆ ಕಾಯುತ್ತಿದ್ದಾರೆ.
ಇಲ್ಲಿಯವರೆಗೆ 3,44,082 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಹಾಗೂ ದೇಶದಲ್ಲಿ ಇನ್ನೂ 15,55,248 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇದುವರೆಗೆ ದೇಶದ 22,78,60,317 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
Comments
English summary
In the last 24 hours, 1,20,529 new Covid-19 cases have been reported in India. The total number of infections increased to 2,86,94,879.