ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ಕೋಟಿ ಬೆಲೆಬಾಳುವ ಕೋಣವನ್ನು ನೋಡಿದ್ದೀರಾ?

By Vanitha
|
Google Oneindia Kannada News

ಹೈದರಾಬಾದ್, ನವೆಂಬರ್, 13 : ಕರ್ನಾಟಕದಲ್ಲಿ ಹೇಗೆ ದೀಪಾವಳಿಯಂದು ದನ ಕರುಗಳಿಗೆ ಪೂಜೆ ಮಾಡಿ, ಕೆಲವು ಸ್ಪರ್ಧೆ ಏರ್ಪಡಿಸುತ್ತಾರೋ ಹಾಗೆಯೇ ಹೈದರಾಬಾದಿನಲ್ಲಿ ಸದರ್ ಹಬ್ಬ ಆಚರಣೆ ಗೊಳ್ಳುತ್ತದೆ. ಆದರೆ ಸ್ವಲ್ಪ ವಿಶೇಷ ಹಾಗೂ ವಿಭಿನ್ನ. ಇದರ ಪ್ರಮುಖ ಆಕರ್ಷಣೆ ಮನುಷ್ಯರು ಯಾರು ಅಲ್ಲ, ಕಟ್ಟುಮಸ್ತಾದ ಹೋರಿಯೇ ಇಡೀ ಹಬ್ಬದ ಕೇಂದ್ರಬಿಂದು.

ಸದರ್ ಹಬ್ಬಕ್ಕೆಂದು ಬಂದಿರುವ ಕೋಣ ಸುಮಾರು 1,600 ಕೆಜಿ ತೂಕವಿದ್ದು, 6.5 ಅಡಿ ಉದ್ದವಿದೆ. ಇದು ಕರ್ಮವೀರ ಸಿಂಗ್ ಎಂಬಾತನ ಸಾರಥ್ಯದಲ್ಲಿ ಆರೈಕೆಗೊಳ್ಳುತ್ತಿದೆ. ಈತ ಕೋಣವನ್ನು ತನ್ನ ಮಕ್ಕಳಿಗಿಂತ ಹೆಚ್ಚಾಗಿ ಸಲಹುತ್ತಿದ್ದಾನೆ. ಇದಕ್ಕೆ ಸ್ನಾನ, ಊಟ, ಉಪಚಾರಕ್ಕೆಂದೇ ಎಲ್ಲಾ ವ್ಯವಸ್ಥೆ ಕಲ್ಪಿಸಿಕೊಡುವ ಸಲುವಾಗಿ 10 ಜನ ಕೆಲಸಗಾರರಿದ್ದಾರೆ.

ಯುವರಾಜ ಎಂಬ ಈ ಕೋಣವು ನೋಡಲು ಯುವರಾಜನಲ್ಲ. ಮಹಾರಾಜ. ತಿನ್ನಲು ಭಾರೀ ಭಕ್ಷ್ಯ ಭೋಜನಗಳೇ ಬೇಕು. ಇದರ ನಿಜವಾದ ಬೆಲೆ 7ಕೋಟಿ. ಇದಕ್ಕೆ ಪ್ರತಿದಿನ 100 ಸೇಬುಗಳು, 25 ಲೀಟರ್ ಹಾಲು, ಯಾವುದಾದರೂ ಮೂರು ತರಹದ ಬೆಳೆಗಳನ್ನು ಪ್ರತಿದಿನ 5 ಕೆಜಿ ಕೊಡಲಾಗುತ್ತದೆ. ಜೊತೆಗೆ ಒಣ ಹಣ್ಣುಗಳಾದ ಗೋಡಂಬಿ, ಬಾದಾಮಿ, ಕರ್ಜೂರಗಳು ಪ್ರತಿನಿತ್ಯ ಇರಲೇಬೇಕು.

ಈ ಕೋಣಕ್ಕೆ ದಿನಕ್ಕೆರಡು ಬಾರಿ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಲಾಗುತ್ತದೆ. ತಿಂಗಳಿಗೆ 4 ಬಾರಿ ಇದರ ಮೈಮೇಲಿನ ಕೂದಲನ್ನು ತೆಗೆಯಲಾಗುತ್ತದೆ. ಇದನ್ನು ಸದರ್ ಹಬ್ಬಕ್ಕೆಂದು ಹೈದರಾಬಾದಿನ ಹರಿಬಾಬು ಯಾದವ್ ಎಂಬುವವರು ಕೊಂಡುಕೊಂಡಿದ್ದಾರೆ.

ಹರಿಯಾಣದ ಕುರುಕ್ಷೇತ್ರದಿಂದ ಹೈದರಾಬಾದ್ ಗೆ ತಂದಿರುವ ಈ ಕೋಣಕ್ಕೆ ಹರಿಬಾಬು ಅವರು ಆಹಾರ ಇನ್ನಿತರ ಖರ್ಚು ವೆಚ್ಚ ಸೇರಿದಂತೆ ಒಟ್ಟು ಇದರ ನಿರ್ವಹಣೆಗೆ ಸುಮಾರು 5 ಲಕ್ಷ ಹಣ ವ್ಯಯಿಸಿದ್ದಾರೆ.

ಏನಿದು ಸದರ್ ಹಬ್ಬ?

ಏನಿದು ಸದರ್ ಹಬ್ಬ?

ಈ ಹಬ್ಬವನ್ನು ಸ್ಥಳೀಯವಾಗಿ 'ದುನ್ನಾಪೊತುಲಾ ಪಂಡುಗಾ' ಎಂದು ಕರೆಯಲಾಗುತ್ತದೆ. ಇದನ್ನು ದೀಪಾವಳಿಯ ಎರಡನೇ ದಿನ ಆಚರಿಸಲಾಗುತ್ತದೆ. ಈ ಹಬ್ಬ ಹೈದರಾಬಾದ್ ಭಾಗದಲ್ಲಿ ಕಂಡು ಬರುತ್ತದೆ.

ಕೋಣಕ್ಕೆ ಎಷ್ಟು ಬೆಲೆ?

ಕೋಣಕ್ಕೆ ಎಷ್ಟು ಬೆಲೆ?

ಯೆಲ್ಲಾರೆಡ್ಡಿ ಗುಡ್ಡದಲ್ಲಿ ನಡೆಯುವ ಸದರ್ ಹಬ್ಬದ ಮುಖ್ಯ ಕೇಂದ್ರ ಬಿಂದುವೇ ಕೋಣ. ಇದಕ್ಕೆ ಏಳು ಕೋಟಿ ಹಣವನ್ನು ನೀಡಲಾಗಿದೆ.

ಕೋಣವನ್ನು ಎಲ್ಲಿಂದ ತಂದಿದ್ದರು?

ಕೋಣವನ್ನು ಎಲ್ಲಿಂದ ತಂದಿದ್ದರು?

ಏಳು ಕೋಟಿ ಬೆಲೆ ಬಾಳುವ ಕೋಣವನ್ನು ಹರಿಯಾಣದ ಕುರುಕ್ಷೇತ್ರದಿಂದ ಹೈದರಾಬಾದಿಗೆ ಕರೆತರಲಾಗಿದೆ. ಇದನ್ನು 15 ಮಂದಿ ಎಸಿ ವಾಹನದಲ್ಲಿ ಕರೆತಂದಿದ್ದಾರೆ.

ಕೋಣಕ್ಕೆ ಏನೇನು ಆಹಾರ ನೀಡಲಾಗುತ್ತದೆ?

ಕೋಣಕ್ಕೆ ಏನೇನು ಆಹಾರ ನೀಡಲಾಗುತ್ತದೆ?

ಪ್ರತಿದಿನ 100 ಸೇಬುಗಳು, 25 ಲೀಟರ್ ಹಾಲು, ಯಾವುದಾದರೂ ಮೂರು ತರಹದ ಬೆಳೆಗಳನ್ನು ಪ್ರತಿದಿನ 5 ಕೆಜಿ ಕೊಡಲಾಗುತ್ತದೆ. ಜೊತೆಗೆ ಒಣ ಹಣ್ಣುಗಳಾದ ಗೋಡಂಬಿ, ಬಾದಾಮಿ, ಕರ್ಜೂರಗಳು ಪ್ರತಿನಿತ್ಯ ಇರಲೇಬೇಕು.

ಕೋಣವನ್ನು ಹೇಗೆ ಆರೈಕೆ ಮಾಡಲಾಗುತ್ತದೆ?

ಕೋಣವನ್ನು ಹೇಗೆ ಆರೈಕೆ ಮಾಡಲಾಗುತ್ತದೆ?

ಯುವರಾಜ ಈ ಹಬ್ಬದಲ್ಲಿ ಮಹಾರಾಜನಾಗಿದ್ದು, ದಿನಕ್ಕೆ ಎರಡು ಬಾರಿ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಲಾಗುತ್ತದೆ. ತಿಂಗಳಿಗೆ 4 ಬಾರಿ ಕೂದಲು ಕತ್ತರಿಸಲಾಗುತ್ತದೆ. ಇದನ್ನು ನೋಡಿಕೊಳ್ಳಲು 10 ಜನರನ್ನು ನೇಮಿಸಲಾಗಿದೆ.

ಸದರ್ ಹಬ್ಬವನ್ನು ಯಾವ ಸಮುದಾಯ ಆಚರಿಸುತ್ತದೆ?

ಸದರ್ ಹಬ್ಬವನ್ನು ಯಾವ ಸಮುದಾಯ ಆಚರಿಸುತ್ತದೆ?

ಈ ಹಬ್ಬವನ್ನು ದೀಪಾವಳಿ ಸಂದರ್ಭದಲ್ಲಿ ಗೊಲ್ಲ ಅಥವಾ ಯಾದವ ಸಮುದಾಯವೂ ಆಚರಿಸುತ್ತದೆ. ಈ ಹಬ್ಬಕ್ಕೆಂದು ತಂದ ಕೋಣವು 1,600 ಕೆಜಿ ತೂಕವಿದೆ. ಹಬ್ಬದಂದು ಇದಕ್ಕೆ ಗಂಟೆ ಕಟ್ಟಿ ಸುಂದರವಾಗಿ ಅಲಂಕಾರ ಮಾಡಿರುತ್ತಾರೆ. ಜೊತೆಗೆ ನಾನಾ ಪ್ರಕಾರಗಳನ್ನು ಪ್ರದರ್ಶಿಸಲು ಮೊದಲೇ ತರಬೇತಿ ನೀಡಲಾಗಿರುತ್ತದೆ.

English summary
A Buffalo Bull From Haryana Has Become A Star Attraction At The Yadav Festival ‘Sadar’ Held In Hyderabad. Yuvraj, The Bull, Weighs 1,600 Kg And Is 6.5 Feet Tall. The Bull’s Proud Owner, Karmvir Singh, Feeds Him Daily 100 Apples, 25 Liters Of Milk, Five Kg Each Of Three Types Of Crops And Pulses Along With Dry Fruits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X